☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: 12 ಸೀಸನ್ ಇತಿಹಾಸದಲ್ಲೇ ಇಂಥಾ ಟ್ವಿಸ್ಟ್ ಬಂದಿರ್ಲಿಲ್ಲ; ಪ್ರಥಮ್ ಮ್ಯಾಜಿಕ್ ಮರುಕಳಿಸುತ್ತಾ?

BBK 13: Thandav Ram Evicted; Wildcard Comeback Soon?

BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನಕ್ಕೊಂದು ರೋಚಕ ತಿರುವುಗಳು ಎದುರಾಗುತ್ತಿವೆ. ಮೂರನೇ ವಾರಕ್ಕೆ ಹೆಜ್ಜೆ ಇಡುತ್ತಿದ್ದಂತೆ ಬಿಗ್ ಬಾಸ್ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಯಾರೂ ಊಹಿಸದ ಪ್ರಮುಖ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ.

ಆದರೆ ಇದು ಬರಿ ಆರಂಭ ಮಾತ್ರ ಎನ್ನಲಾಗುತ್ತಿದೆ. ಈ ವಾರ ವೀಕ್ಷಕರಿಗೆ ಇನ್ನಷ್ಟು ದೊಡ್ಡ ಟ್ವಿಸ್ಟ್‌ಗಳು ಕಾಯುತ್ತಿವೆ. ಬಿಗ್ ಬಾಸ್ ನೀಡಿದ ಶಾಕಿಂಗ್ ಟಾಸ್ಕ್‌ನಿಂದಾಗಿ ವೋಟಿಂಗ್ ಲೆಕ್ಕಾಚಾರವೇ ಬುಡಮೇಲಾಗಿದೆ.

ಅತ್ಯಂತ ಬಲಶಾಲಿ ಸ್ಪರ್ಧಿ ಎನಿಸಿಕೊಂಡಿದ್ದ ತಾಂಡವ್ ರಾಮ್ ಎಲಿಮಿನೇಟ್ ಆಗಿರುವುದು ವೀಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದು ಅನ್ಫೇರ್ ಎಲಿಮಿನೇಷನ್ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ.

4 ಜನರ ನಿರ್ಧಾರದಿಂದ ಹೊರಬಿದ್ದ ಸೆಲೆಬ್ರಿಟಿ

ಬಿಗ್ ಬಾಸ್ ಇತಿಹಾಸದಲ್ಲೇ ಎಂದಿಗೂ ಜನರ ವೋಟಿಂಗ್‌ಗೆ ಹೆಚ್ಚಿನ ಆದ್ಯತೆ ಇರುತ್ತಿತ್ತು. ಆದರೆ ಈ ಬಾರಿ ನಾಲ್ಕು ಜನ ಸ್ಪರ್ಧಿಗಳಿಗೆ ಇತರೆ ಸ್ಪರ್ಧಿಗಳ ಶೇ.50ರಷ್ಟು ವೋಟ್ ಕಸಿಯುವ ಅಧಿಕಾರ ನೀಡಲಾಗಿತ್ತು. ಇದರಿಂದಾಗಿ ತಾಂಡವ್ ರಾಮ್ ನೇರವಾಗಿ ನಾಮಿನೇಟ್ ಆಗಿ ಎಲಿಮಿನೇಟ್ ಆದರು.

ಕಳೆದ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಒಂದು ಮಾತು ಹೇಳಿದ್ದರು. “12 ಸೀಸನ್‌ನಿಂದ ಗಳಿಸಿರುವ ಜನರ ಪ್ರೀತಿಯನ್ನು ನಾಲ್ಕೇ ನಾಲ್ಕು ಜನರಿಗೋಸ್ಕರ ಕಳೆದುಕೊಳ್ಳಲು ನಾವು ರೆಡಿ ಇಲ್ಲ” ಎಂದು ಸುದೀಪ್ ಕಾಮನ್ ಮ್ಯಾನ್ಸ್‌ಗೆ ಎಚ್ಚರಿಕೆ ನೀಡಿದ್ದರು. ಆದರೆ ಈ ಬಾರಿ ಬಲಿಯಾಗಿದ್ದು ಮಾತ್ರ ಸೆಲೆಬ್ರಿಟಿ ಸ್ಪರ್ಧಿ.

ಪ್ರಥಮ್ ಹಾದಿಯಲ್ಲೇ ತಾಂಡವ್ ಕಂಬ್ಯಾಕ್?

ಬಿಗ್ ಬಾಸ್ ಸೀಸನ್ 4 ನೆನಪಿಸಿಕೊಳ್ಳುವುದಾದರೆ, ಬಿಗ್ ಬ್ರದರ್ ಪ್ರಥಮ್ ಕೂಡ ಒಂದೇ ವಾರದಲ್ಲಿ ಮನೆಯಿಂದ ನಿರ್ಗಮಿಸಿದ್ದರು. ಆದರೆ ಮತ್ತೆ ಅದ್ಧೂರಿಯಾಗಿ ಮನೆಗೆ ವಾಪಸ್ ಬಂದಿದ್ದಷ್ಟೇ ಅಲ್ಲದೆ, ಆ ಸೀಸನ್‌ನ ವಿನ್ನರ್ ಕೂಡ ಆಗಿ ಹೊರಹೊಮ್ಮಿದ್ದರು.

ಈಗ ತಾಂಡವ್ ರಾಮ್ (Thandav Ram) ವಿಚಾರದಲ್ಲೂ ಅದೇ ಇತಿಹಾಸ ಮರುಕಳಿಸುವ ಲಕ್ಷಣಗಳು ಕಾಣಿಸುತ್ತಿವೆ. ವೀಕ್ಷಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಂಡ ತಾಂಡವ್ ಅವರನ್ನು ಮತ್ತೆ ಮನೆಗೆ ಕರೆತರುವ ಯೋಜನೆಯಲ್ಲಿದೆ ಎನ್ನಲಾಗಿದೆ.

BBK 13: ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಧಮಾಕಾ

ಇಷ್ಟಕ್ಕೇ ಬಿಗ್ ಬಾಸ್ ಆಟ ಮುಗಿದಿಲ್ಲ. ಈ ವಾರ ಮನೆಯೊಳಗೆ ಹೊಸ ವೈಲ್ಡ್ ಕಾರ್ಡ್ (Wildcard) ಸ್ಪರ್ಧಿಗಳು ಎಂಟ್ರಿ ಕೊಡಲು ಸರ್ವ ಸನ್ನದ್ಧರಾಗಿದ್ದಾರೆ. ಇದು ಉಳಿದ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಲಿದೆ.

ವೈಲ್ಡ್ ಕಾರ್ಡ್ ಜೊತೆಯಲ್ಲೇ ತಾಂಡವ್ ರಾಮ್ ಕೂಡ ಮಾಸ್ ಕಂಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಬಿಗ್ ಬಾಸ್ ನೀಡಲಿರುವ ಈ ಸಾಲು ಸಾಲು ಟ್ವಿಸ್ಟ್‌ಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.