☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Darshan Case: ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ‘ಡಿ-ಬಾಸ್’ ಫ್ಯಾನ್ಸ್ ಕಡೆಯಿಂದ ಶಾಕಿಂಗ್ ಮನವಿ

Darshan Case: Fans Write to President Droupadi Murmu

Darshan Case: ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಜಾಮೀನು ಸಿಗುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಕೋರ್ಟ್‌ನಲ್ಲಿ ಹಿನ್ನಡೆ ಹಾಗೂ ಆರೋಗ್ಯ ಸಮಸ್ಯೆಗಳ ನಡುವೆ ದರ್ಶನ್ ದಿನ ದೂಡುತ್ತಿದ್ದಾರೆ.

ಇನ್ನೊಂದೆಡೆ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ದರ್ಶನ್‌ಗೆ ಮತ್ತಷ್ಟು ದೊಡ್ಡ ಹಿನ್ನಡೆಯನ್ನುಂಟುಮಾಡಿದೆ. ಈ ಕಾನೂನು ಸಂಕೋಲೆಯಿಂದ ನಟನನ್ನು ರಕ್ಷಿಸಲು ಅಭಿಮಾನಿಗಳು ಹೊಸ ಹಾದಿ ತುಳಿದಿದ್ದಾರೆ.

ತಮ್ಮ ನೆಚ್ಚಿನ ನಟನ ರಕ್ಷಣೆಗೆ ಡಿ ಬಾಸ್ ಅಭಿಮಾನಿಗಳು ಇದೀಗ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಮೊರೆ ಹೋಗಿದ್ದಾರೆ. ರಾಷ್ಟ್ರಪತಿಗಳಿಗೆ ಕನ್ನಡದಲ್ಲೇ ಭಾವನಾತ್ಮಕ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

‘ನೀವು ಕರುಣಾಮಯಿ ತಾಯಿ..’: ಕನ್ನಡದಲ್ಲೇ ಪತ್ರ ಬರೆದ ಅಭಿಮಾನಿಗಳು

ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ‘ಡಿ ಬಾಸ್ ಅಭಿಮಾನಿಗಳು, ಕರ್ನಾಟಕ’ ಎಂಬ ಹೆಸರಿನಲ್ಲಿ ಬರೆದಿರುವ ಪತ್ರ ವ್ಯಾಪಕವಾಗಿ ವೈರಲ್ ಆಗುತ್ತಿದೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿಗಳನ್ನು ತಾಯಿಯ ಸ್ಥಾನದಲ್ಲಿಟ್ಟು ಕಂಡು ಅಭಿಮಾನಿಗಳು ಕಳಕಳಿಯ ಮನವಿ ಮಾಡಿದ್ದಾರೆ.

“ನೀವು ಬಡವರ, ಆದಿವಾಸಿಗಳ ಮತ್ತು ನೊಂದವರ ಪರವಾಗಿ ನಿಲ್ಲುವ ಕರುಣಾಮಯಿ ತಾಯಿ. ನಮಗೆ ಭಾರತೀಯ ಕಾನೂನು ವ್ಯವಸ್ಥೆ ಮತ್ತು ನ್ಯಾಯಾಲಯಗಳ ಮೇಲೆ ಸಂಪೂರ್ಣ ನಂಬಿಕೆ ಹಾಗೂ ಗೌರವವಿದೆ. ಆದರೆ ನಮ್ಮ ಹೆಮ್ಮೆಯ ನಟ ದರ್ಶನ್ ತೀವ್ರ ಸಂಕಷ್ಟದಲ್ಲಿದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಮಾನವೀಯತೆಯ ಆಧಾರದ ಮೇಲೆ ನೋಡಿ’: ದ್ರೌಪದಿ ಮುರ್ಮುಗೆ ಕಳಕಳಿ ವಿನಂತಿ

“ಒಬ್ಬ ತಾಯಿಯಾಗಿ ದರ್ಶನ್ ಅವರ ಪ್ರಕರಣವನ್ನು ಮಾನವೀಯತೆಯ ಆಧಾರದ ಮೇಲೆ ಪರಿಶೀಲಿಸಿ. ಅವರಿಗೆ ಆದಷ್ಟು ಬೇಗ ನ್ಯಾಯ ದೊರೆಯುವಂತೆ ನಿಮ್ಮ ಹಂತದಲ್ಲಿ ಸಾಧ್ಯವಾದ ಸಹಾಯ ಮಾಡಿ” ಎಂದು ಅಭಿಮಾನಿಗಳು ಕೈಮುಗಿದು ಬೇಡಿಕೊಂಡಿದ್ದಾರೆ.

ಜೊತೆಗೆ ದರ್ಶನ್ ಜೈಲಿನಲ್ಲಿ ತೀವ್ರ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ತುರ್ತು ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಫ್ಯಾನ್ಸ್ ಪ್ರತಿಪಾದಿಸುತ್ತಿದ್ದಾರೆ. ಇದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡು ಡಿಜಿಟಲ್ ಅಭಿಯಾನ ನಡೆಸುತ್ತಿದ್ದಾರೆ.

Darshan Case: ಸಾಧು ಕೋಕಿಲ ಕೊಟ್ಟ ಐಡಿಯಾ; ರಾಷ್ಟ್ರಪತಿಗೆ ತಲುಪಿದ ಪತ್ರ

ಇತ್ತೀಚೆಗೆ ನಟ ಸಾಧು ಕೋಕಿಲ ಅವರು ಅಭಿಮಾನಿಗಳಿಗೆ ‘ಸುಮ್ಮನೆ ಕೂಗಾಡುವ ಬದಲು ಸಿಎಂಗೆ ಪತ್ರ ಬರೆಯಿರಿ’ ಎಂದು ಸಲಹೆ ನೀಡಿದ್ದರು. ಆದರೆ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಒಟ್ಟಾರೆಯಾಗಿ ಜೈಲಿನಲ್ಲಿರುವ ದರ್ಶನ್‌ಗೆ ಕಾನೂನಿನ ಚೌಕಟ್ಟಿನಲ್ಲಿ ಹಿನ್ನಡೆಯಾಗುತ್ತಿದ್ದರೆ, ಹೊರಗಡೆ ಅಭಿಮಾನಿಗಳು ಪ್ರಾರ್ಥನೆ ಹಾಗೂ ಪತ್ರ ಚಳುವಳಿಯ ಮೂಲಕ ಬೆಂಬಲವಾಗಿ ನಿಂತಿದ್ದಾರೆ.