‘ಯಾರೀ ಬಿಗ್ ಬಾಸ್ ಜರ್ನಿಯ ಪ್ರಯಾಣಿಕರು?’ ಪ್ರೋಮೋ ಔಟ್

'ಯಾರೀ ಬಿಗ್ ಬಾಸ್ ಜರ್ನಿಯ ಪ್ರಯಾಣಿಕರು?'

Photo Credits: @colorskannadaofficial (Instagram)

ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಬೃಹತ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ನೂತನ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯು ಬಿಗ್ ಬಾಸ್ ಮನೆಯ ಹೊಸ ಸ್ಪರ್ಧಿಗಳ ಕುರಿತಾದ ಆಕರ್ಷಕ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ.

“ಯಾರೀ ಬಿಗ್ ಬಾಸ್ ಜರ್ನಿಯ ಪ್ರಯಾಣಿಕರು? ಗೆಸ್ ಮಾಡ್ತೀರಾ?” ಎಂಬ ರೋಮಾಂಚಕ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರೋಮೋದಲ್ಲಿ ಸ್ಪರ್ಧಿಗಳ ಮುಖ ತೋರಿಸದೆ ವಿಭಿನ್ನ ಝಲಕ್‌ಗಳನ್ನು ಮಾತ್ರ ಪ್ರದರ್ಶಿಸಲಾಗಿದೆ.

ಕ್ರೀಡಾಪಟುಗಳು, ನಟ-ನಟಿಯರು, ಮಾಡೆಲ್‌ಗಳು ಹಾಗೂ ಗ್ಲಾಮರಸ್ ತಾರೆಯರ ಸುಳಿವುಗಳನ್ನು ಪ್ರೋಮೋದಲ್ಲಿ ನೀಡಲಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಯಾರಲ್ಲ ಪ್ರವೇಶಿಸಲಿದ್ದಾರೆ ಎಂಬ ಚರ್ಚೆ ಜಾಲತಾಣದಲ್ಲಿ ಬಿಸಿಯಾಗಿದೆ.

ಗ್ಲಾಮರ್ ಮತ್ತು ಮಾಸ್ ಲುಕ್‌ನಲ್ಲಿ ಮಿಂಚಿದ ಸ್ಪರ್ಧಿಗಳು

ಬಿಡುಗಡೆಯಾಗಿರುವ ಈ ಪ್ರೋಮೋದಲ್ಲಿ ಹಲವು ವೈವಿಧ್ಯಮಯ ವ್ಯಕ್ತಿತ್ವಗಳ ಸಣ್ಣ ಸುಳಿವುಗಳನ್ನು ನೀಡಲಾಗಿದೆ. ಜಿಮ್ ವರ್ಕೌಟ್ ಮಾಡುವ ಫಿಟ್‌ನೆಸ್ ಫ್ರೀಕ್, ಈಜುಜಲದಲ್ಲಿ ಮಿಂಚುವ ಬೆಡಗಿ ಹಾಗೂ ಟ್ಯಾಟೂ ಹೊಂದಿರುವ ಗ್ಲಾಮರಸ್ ನಟಿಯರ ವೈಯಾರ ಪ್ರೋಮೋದಲ್ಲಿದೆ.

ಇನ್ನೊಂದೆಡೆ ಸಾಂಪ್ರದಾಯಿಕ ಸೀರೆ ಉಟ್ಟು ದೇವಸ್ಥಾನದಲ್ಲಿ ಪ್ರಾರ್ಥಿಸುವ ಕಲ್ಚರಲ್ ಲುಕ್, ಕೈಯಲ್ಲಿ ಗಂಟೆ-ಬಳೆ ತೊಟ್ಟ ನಾರಿ ಹಾಗೂ ಗೇಮಿಂಗ್‌ ಪ್ರಿಯರ ಝಲಕ್ ಕೂಡ ರಸವತ್ತಾಗಿ ಮೂಡಿಬಂದಿದೆ.

ಮಾಸ್ ಲುಕ್‌ನಲ್ಲಿರುವ ವ್ಯಕ್ತಿಗಳು, ಜಿಮ್‌ನಲ್ಲಿ ದಂಡನೆ ಮಾಡುವ ಗಂಡುಗಲಿಗಳು ಮತ್ತು ಆಭರಣ ಪ್ರಿಯರ ಗತ್ತು ಈ ಪ್ರೋಮೋದ ಪ್ರಮುಖ ಆಕರ್ಷಣೆಯಾಗಿದೆ. ಈ ಎಲ್ಲ ಸುಳಿವುಗಳನ್ನು ನೋಡಿ ವೀಕ್ಷಕರು ತಮ್ಮ ನೆಚ್ಚಿನ ತಾರೆಯರ ಹೆಸರುಗಳನ್ನು ಊಹಿಸುತ್ತಿದ್ದಾರೆ.

ಭಾನುವಾರ ಸಂಜೆ 7 ಗಂಟೆಗೆ ಬಿಗ್ ‘ಗ್ರ್ಯಾಂಡ್ ಟೇಕ್ ಆಫ್’

ಈ ಬಾರಿಯ ಬಿಗ್ ಬಾಸ್ ಸೀಸನ್ ಅತ್ಯಂತ ವಿಶೇಷ ಹಾಗೂ ಭಿನ್ನವಾಗಿರಲಿದ್ದು, ಮನರಂಜನೆಯ ಹೊಸ ಅಲೆಯನ್ನು ಸೃಷ್ಟಿಸಲು ಸಂಪೂರ್ಣ ಸಜ್ಜಾಗಿದೆ. ‘ಗ್ರ್ಯಾಂಡ್ ಟೇಕ್ ಆಫ್’ ಕಾರ್ಯಕ್ರಮವು ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಅದ್ಧೂರಿ ಶೋಗೆ ಈಗಾಗಲೇ ಕೋಟ್ಯಂತರ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.

ಸ್ಪರ್ಧಿಗಳು ಯಾರು ಎಂಬ ಅಂತಿಮ ಗುಟ್ಟು ಭಾನುವಾರದ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಯಲ್ಲೇ ರಟ್ಟಾಗಲಿದ್ದು, ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುವುದು ಖಚಿತವಾಗಿದೆ.