ದಿನಭವಿಷ್ಯ: ಇಂದು ಈ ರಾಶಿಯವರು ಸ್ಥಾನಕ್ಕಾಗಿ ಭ್ರಷ್ಟ ಮಾರ್ಗದಲ್ಲಿ ನಡೆಯುವರು; ನಿಮ್ಮ ರಾಶಿ ಫಲ ಹೇಗಿದೆ?

ಇಂದಿನ ಪಂಚಾಂಗ (03 ಸೆಪ್ಟೆಂಬರ್ 2026)

Photo Credits: AI Generated

ಸೆಪ್ಟೆಂಬರ್ 03, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಗುರುವಾರದಂದು ಪ್ರೇಮದ ಬಾಧೆ, ನಿರಂತರ ಕಲಿಕೆ, ಅನ್ಯರ ಪಾಲಾದ ಉದ್ಯೋಗ, ಸ್ವಾತಂತ್ರ್ಯ, ಧಾರ್ಮಿಕ ಆಸಕ್ತಿ, ಅನ್ನದಾನ, ಭೂಮಿಯ ಹಸ್ತಾಂತರ, ಉತ್ತಮ ಹವ್ಯಾಸ, ಪದವಿಯಿಂದ ಗೌರವ ಇವೆಲ್ಲ ಇಂದಿನ ಭವಿಷ್ಯ.

ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.

ಮೇಷ ರಾಶಿ

ಸಮಸ್ಯೆಗಳಿಗೆ ಆಪ್ತರ ಸಲಹೆ ಪಡೆದು ಸೂಕ್ತ ಪರಿಹಾರ ಕಂಡುಕೊಳ್ಳಿ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಅನಿರೀಕ್ಷಿತ ವ್ಯತ್ಯಾಸವಾಗಬಹುದು, ಜಾಗ್ರತೆ ವಹಿಸಿ. ಸಂಗಾತಿಯಿಂದ ಪೂರ್ಣ ಬೆಂಬಲ ಸಿಗಲಿದೆ.

ವೃಷಭ ರಾಶಿ

ಉತ್ತಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕುಟುಂಬ ಸೌಖ್ಯಕ್ಕೆ ಮೊದಲ ಆದ್ಯತೆ ನೀಡುವಿರಿ. ಆತುರದ ಮಾತುಗಳಿಂದ ಭಿನ್ನಾಪ್ರಾಯ ಮೂಡದಂತೆ ಎಚ್ಚರ ವಹಿಸಿ. ಕೃಷಿ ಹಾಗೂ ಹೂಡಿಕೆ ವಿಚಾರಗಳಲ್ಲಿ ಪ್ರಗತಿ ಕಾಣಲಿದ್ದೀರಿ.

ಮಿಥುನ ರಾಶಿ

ಅಪೇಕ್ಷೆಯಿಲ್ಲದೆ ಇತರರಿಗೆ ನೆರವಾಗುವುದು ಸಮಾಧಾನ ತರಲಿದೆ. ಮಕ್ಕಳ ಭಾವನೆಗಳಿಗೆ ಸ್ಪಂದಿಸುವಿರಿ. ಕುಟುಂಬದಲ್ಲಿ ಮಾತುಕತೆ ಸೌಹಾರ್ದಯುತವಾಗಿರಲಿ. ಮಹಿಳಾ ಉದ್ಯಮಿಗಳಿಗೆ ನೂತನ ಅವಕಾಶಗಳು ಲಭ್ಯವಾಗಲಿವೆ.

ಕರ್ಕಾಟಕ ರಾಶಿ

ಬರಬೇಕಾದ ಹಣ ಕೈಸೇರಲು ಕೊಂಚ ವಿಳಂಬವಾಗಬಹುದು. ಅನಗತ್ಯ ಓಡಾಟದಿಂದ ಆಯಾಸವಾಗಲಿದೆ. ಧನಾತ್ಮಕ ಚಿಂತನೆ ಬೆಳೆಸಿಕೊಂಡು ದಿನಚರಿ ಆರಂಭಿಸಿ. ಗೃಹಬಳಕೆಯ ವಸ್ತುಗಳ ಖರೀದಿಗೆ ಹಣ ಖರ್ಚಾಗಲಿದೆ.

ಸಿಂಹ ರಾಶಿ

ಆತುರದ ನಿರ್ಧಾರಗಳು ಕಷ್ಟ ತರಬಹುದು, ತಾಳ್ಮೆಯಿಂದ ಯೋಚಿಸಿ. ಉದ್ಯೋಗದಲ್ಲಿ ಬಡ್ತಿಗಾಗಿ ಶ್ರಮಿಸುವಿರಿ. ವಿದ್ಯಾರ್ಥಿಗಳು ಸಮಯ ನಿರ್ವಹಣೆಗೆ ಆದ್ಯತೆ ನೀಡಬೇಕು. ಪ್ರಯಾಣದ ಯೋಜನೆ ಮನಸ್ಸಿಗೆ ರಿಲ್ಯಾಕ್ಸ್ ತರಲಿದೆ.

ಕನ್ಯಾ ರಾಶಿ

ಉದ್ಯೋಗ ರಂಗದಲ್ಲಿ ಜಾಗರೂಕರಾಗಿರಿ. ಹಿರಿಯರ ಸೂಕ್ತ ಮಾರ್ಗದರ್ಶನದಿಂದ ಒಳಿತಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣವಿರಲಿದೆ. ಪ್ರವಾಸಿ ತಾಣ ಹಾಗೂ ಜಲಚರ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರಿ.

ತುಲಾ ರಾಶಿ

ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವ ಕೆಲಸವೇ ಭವಿಷ್ಯಕ್ಕೆ ನವ ಹಾದಿ ತೋರಿಸಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿಯಾಗುವ ಯೋಗವಿದೆ. ಸ್ಪಷ್ಟ ಮಾತುಕತೆಗಳಿಂದ ಗೊಂದಲಗಳು ಬಗೆಹರಿಯಲಿವೆ.

ವೃಶ್ಚಿಕ ರಾಶಿ

ಸಣ್ಣಪುಟ್ಟ ವಿಚಾರಗಳಿಗೆ ಮನೆಯಲ್ಲಿ ಅಶಾಂತಿ ಮೂಡದಂತೆ ನೋಡಿಕೊಳ್ಳಿ. ಜಾಣ್ಮೆಯಿಂದ ನಿಮ್ಮ ಕಾರ್ಯಗಳನ್ನು ಸಾಧಿಸುವಿರಿ. ಸ್ನೇಹಿತರಿಂದ ಸೂಕ್ತ ಬೆಂಬಲ ಹಾಗೂ ಅಚ್ಚರಿಯ ಉಡುಗೊರೆ ಲಭ್ಯವಾಗಲಿದೆ.

ಧನು ರಾಶಿ

ಎದುರಾಗುವ ಸನ್ನಿವೇಶಗಳನ್ನು ಧೈರ್ಯ ಹಾಗೂ ತಾಳ್ಮೆಯಿಂದ ನಿಭಾಯಿಸಿ. ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳಿ. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಸೇವಾ ಮನೋಭಾವದಿಂದ ಎಲ್ಲರ ಮೆಚ್ಚುಗೆ ಪಡೆಯುವಿರಿ.

ಮಕರ ರಾಶಿ

ಅನಗತ್ಯ ವಾದ-ವಿವಾದಗಳಿಂದ ದೂರವಿರಿ. ಆಕಸ್ಮಿಕ ಧನಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ವ್ಯಕ್ತಿಗಳ ಭೇಟಿಯಿಂದ ಸಮಾಧಾನ ಸಿಗಲಿದೆ. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ಕುಂಭ ರಾಶಿ

ಅನಗತ್ಯ ಚಟುವಟಿಕೆಗಳಿಗೆ ಸಮಯ ವ್ಯರ್ಥ ಮಾಡಬೇಡಿ. ಮನೆಯವರ ಆಶಯದಂತೆ ಸರಿ ದಾರಿಯಲ್ಲಿ ಮುನ್ನಡೆಯಿರಿ. ಆರ್ಥಿಕ ನಿರ್ವಹಣೆಯಲ್ಲಿ ಜಾಣತನ ಪ್ರದರ್ಶಿಸುವಿರಿ. ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವಿರಿ.

ಮೀನ ರಾಶಿ

ಇತರರ ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಶ್ರದ್ಧೆಯಿಂದ ಕೈಗೊಂಡ ಕೆಲಸಗಳು ಸಫಲವಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ.

ಇಂದಿನ ಪಂಚಾಂಗ (03 ಸೆಪ್ಟೆಂಬರ್ 2026)

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಕೃಷ್ಣ ಪಕ್ಷ

ತಿಥಿ: ಷಷ್ಠೀ | ವಾರ: ಗುರುವಾರ

ನಕ್ಷತ್ರ: ಅಶ್ವಿನೀ | ಯೋಗ: ವ್ಯಾಘಾತ | ಕರಣ: ಭದ್ರ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:28

ರಾಹು ಕಾಲ: 01:51 PM – 03:24 PM

ಯಮಗಂಡ ಕಾಲ: 06:10 AM – 07:42 AM

ಗುಳಿಕ ಕಾಲ: 09:14 AM – 10:47 AM