☔ Weather
Bengaluru: ☁️ 25°C | AQI 59
Mysore: 🌤️ 27°C | AQI 63
Mangalore: ☁️ 31°C | AQI 73
Bengaluru: ☁️ 25°C | AQI 59

TOXIC REVIEW: ‘ಟಾಕ್ಸಿಕ್’ ನಲ್ಲಿ ಕಥೆ ಇಲ್ವಾ? ನೆಗಿಟಿವ್ ಕಾಮೆಂಟ್ಸ್‌ಗೆ ಮಾಸ್ಟರ್ ಆನಂದ್ ಕೊಟ್ಟ ಉತ್ತರ ಇಲ್ಲಿದೆ

‘ಟಾಕ್ಸಿಕ್’ ನಲ್ಲಿ ಕಥೆ ಇಲ್ವಾ?

Photo Credits: @iam_masteranand (Instagram)

                        @the_moviedecoded (Instagram)

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಕಥೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕೆಲವರು ಸಿನಿಮಾದಲ್ಲಿ ಕಥೆಯೇ ಇಲ್ಲ ಎಂದು ವಿಮರ್ಶೆ ಮಾಡುತ್ತಿದ್ದಾರೆ.

ಈ ರೀತಿ ನೆಗೆಟಿವ್ ಮಾತುಗಳನ್ನಾಡುವವರಿಗೆ ಪ್ರಸಿದ್ಧ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಸಿನಿಮಾದ ಸಸ್ಪೆನ್ಸ್ ಬಹಿರಂಗಪಡಿಸದೇ ಕೇವಲ 3 ನಿಮಿಷದಲ್ಲಿ ಸಂಪೂರ್ಣ ಕಥೆಯ ಎಳೆಯ ಕುರಿತು ಅವರು ವಿವರಣೆ ನೀಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

ನಾನ್-ಲೀನಿಯರ್ ಕಥಾಹಂದರ ಹಾಗೂ ಕೊನೆಯ 20 ನಿಮಿಷಗಳ ಟ್ವಿಸ್ಟ್

ವಿಡಿಯೋ ಆರಂಭಿಸಿದ ಮಾಸ್ಟರ್ ಆನಂದ್, “ಜನರು ಈ ಸಿನಿಮಾದಲ್ಲಿ ಕಥೆ ಇಲ್ಲ ಎಂದು ಯಾಕೆ ಹೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಈ ಚಿತ್ರದಲ್ಲಿ ನಾನ್-ಲೀನಿಯರ್ ಶೈಲಿಯಲ್ಲಿ ಕಥೆಯನ್ನು ಹೇಳಲಾಗಿದೆ” ಎಂದಿದ್ದಾರೆ.

ಮೊದಲಾರ್ಧದಲ್ಲಿ ದೃಶ್ಯಗಳು ಹಿಂದೆ-ಮುಂದೆ ಬರುತ್ತವೆ. ಆದರೆ ಅದಕ್ಕೆಲ್ಲ ಸರಿಯಾದ ಸ್ಪಷ್ಟನೆ ದ್ವಿತೀಯಾರ್ಧದಲ್ಲಿ ಸಿಗುತ್ತದೆ.

ವಿಶೇಷವಾಗಿ ಸಿನಿಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಅದ್ಭುತವಾಗಿದ್ದು, ಅಲ್ಲಿಯೇ ಸಿನಿಮಾದ ನಿಜವಾದ ತಿರುವು ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಅನಿಮಲ್’ ಸಿನಿಮಾಗೆ ಹೋಲಿಸಿ ಕಥೆಯ ಎಳೆ ಬಿಚ್ಚಿಟ್ಟ ಆನಂದ್

ಚಿತ್ರದ ಕಥೆಯ ಬಗ್ಗೆ ಮಾತನಾಡಿದ ಆನಂದ್, “ಒಬ್ಬ ವ್ಯಕ್ತಿಯ ಬಾಲ್ಯ ಹಾಳಾದರೆ ಆತ ಮೃಗದಂತಾಗುತ್ತಾನೆ. ಅಂತಹ ಪ್ರಾಣಿಯಂತಹ ಸ್ವಭಾವವಿರುವ ವ್ಯಕ್ತಿಗೆ ಪ್ರೀತಿಯಾದರೆ ಏನಾಗುತ್ತದೆ, ಮಗು ಜನಿಸಿದ ಮೇಲೆ ಸಂಬಂಧಗಳನ್ನು ಕಡಿತಗೊಳಿಸಿಕೊಂಡರೆ ಏನಾಗುತ್ತದೆ ಎಂಬುದೇ ಕಥೆ” ಎಂದಿದ್ದಾರೆ.

ಆ ವ್ಯಕ್ತಿಯ ಜೀವನವೇ ಟಾಕ್ಸಿಕ್ ಆಗಲು ಅವನ ಬಾಲ್ಯದಲ್ಲಿ ನಡೆದ ಒಂದು ಘಟನೆಯೇ ಮೂಲ ಕಾರಣವಾಗಿದೆ.

ಪ್ರಾಣಿಯಂತಿರುವ ನಾಯಕನಿಗೂ ಪ್ರೀತಿ-ವಿಶ್ವಾಸ ಬಂದಾಗ ಆತ ಗೊಂದಲಕ್ಕೆ ಒಳಗಾಗಿ ತನ್ನನ್ನು ತಾನು ಹೇಗೆ ದಂಡಿಸಿಕೊಳ್ಳುತ್ತಾನೆ ಎಂಬುದೇ ಸಿನಿಮಾದ ಕಥಾಹಂದರ.

ವಿಮರ್ಶಕರಿಗೆ ಮಾಸ್ಟರ್ ಆನಂದ್ ನೀಡಿದ ಕೊನೆಯ ಸಂದೇಶ

ಇಷ್ಟೆಲ್ಲಾ ಕಥೆ ಇದ್ದರೂ ಕಥೆಯೇ ಇಲ್ಲ ಎನ್ನುವವರಿಗೆ ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಸ್ಟರ್ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

“ಇದು ನಿಜಕ್ಕೂ ಒಂದು ಅದ್ಭುತವಾದ ಸಿನಿಮಾ. ಟೀಕೆ ಮಾಡುವವರು ಕನಿಷ್ಠ ಈ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ನೋಡಿ” ಎಂದು ಸಲಹೆ ನೀಡಿದ್ದಾರೆ.

ಆಗ ಖಂಡಿತವಾಗಿಯೂ ಪ್ರೇಕ್ಷಕರಿಗೆ ‘ಟಾಕ್ಸಿಕ್’ ಸಿನಿಮಾದ ಆಂತರ್ಯ ಹಾಗೂ ನಿರ್ದೇಶಕರ ಶ್ರಮ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದು ವಿಡಿಯೋ ಮುಗಿಸಿದ್ದಾರೆ.