TOXIC: 4 ನೇ ದಿನ ‘ಟಾಕ್ಸಿಕ್’ ಗಳಿಸಿದ್ದಷ್ಟು? ಕನ್ನಡ ಆವೃತ್ತಿಗೆ ಸಿಕ್ತು ಹೈಯೆಸ್ಟ್ ರೆಸ್ಪಾನ್ಸ್

4 ನೇ ದಿನ 'ಟಾಕ್ಸಿಕ್' ಗಳಿಸಿದ್ದಷ್ಟು?

Photo Credits: @the_moviedecoded (Instagram)

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದಿವೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನಾಲ್ಕು ದಿನಗಳಲ್ಲಿ ಈ ಚಿತ್ರ ಭಾರಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಸಿನಿಮಾ ಒಟ್ಟು 254.75 ಕೋಟಿ ರೂಪಾಯಿ ಗಳಿಸಿದೆ. ‘ಸಾಕ್ನಿಲ್ಕ್’ ವರದಿ ಈ ಮಾಹಿತಿಯನ್ನು ನೀಡಿದೆ. 

ಮೊದಲ 4 ದಿನಗಳ ಕಲೆಕ್ಷನ್ ವಿವರ 

  • ಮೊದಲ ದಿನ (ಬುಧವಾರ): ₹101.10 ಕೋಟಿ ನೆಟ್ 
  • ಎರಡನೇ ದಿನ (ಗುರುವಾರ): ₹37.65 ಕೋಟಿ ನೆಟ್ 
  • ಮೂರನೇ ದಿನ (ಶುಕ್ರವಾರ): ₹27.20 ಕೋಟಿ ನೆಟ್ 
  • ನಾಲ್ಕನೇ ದಿನ (ಶನಿವಾರ): ₹24.50 ಕೋಟಿ ನೆಟ್ 

ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಗಳಿಕೆಯಲ್ಲಿ ಶೇಕಡ 9.9ರಷ್ಟು ಕುಸಿತ ಕಂಡುಬಂದಿದೆ. ಆದರೂ ನಾಲ್ಕನೇ ದಿನ ಶನಿವಾರ ಭಾರತದಲ್ಲಿ ಅಂದಾಜು 24.50 ಕೋಟಿ ರೂಪಾಯಿ ನೆಟ್ ಸಂಗ್ರಹವಾಗಿದೆ. ದೇಶಾದ್ಯಂತ ಒಟ್ಟು 17,612 ಶೋಗಳು ನಡೆದಿದ್ದವು. 

ಭಾರತದಲ್ಲಿ ಒಟ್ಟು ಗಳಿಕೆ ಎಷ್ಟು?

ನಾಲ್ಕು ದಿನಗಳ ಅಂತ್ಯಕ್ಕೆ ‘ಟಾಕ್ಸಿಕ್’ ಚಿತ್ರ ಭಾರತದಲ್ಲಿ ಒಟ್ಟು 190.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಒಟ್ಟು ಗ್ರಾಸ್ ಗಳಿಕೆ 227.50 ಕೋಟಿ ರೂಪಾಯಿಗೆ ತಲುಪಿದೆ. 

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರ ನಟನೆಗೆ ಪ್ರೇಕ್ಷಕರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿದೆ. ಆದರೆ ಕಥೆ ಮೂಡಿಬಂದ ಶೈಲಿಯ ಬಗ್ಗೆ ಕೆಲವರಲ್ಲಿ ಅಸಮಾಧಾನವಿದೆ. ಇದೇ ಕಾರಣಕ್ಕೆ ಆರಂಭದ ದಿನಗಳಿಗೆ ಹೋಲಿಸಿದರೆ ನಂತರದ ದಿನಗಳಲ್ಲಿ ಕಲೆಕ್ಷನ್ ತುಸು ಇಳಿಕೆಯಾಗಿದೆ.

ಕನ್ನಡ ಆವೃತ್ತಿಗೆ ಸಿಕ್ಕಿತು ಭರ್ಜರಿ ಪ್ರದರ್ಶನ 

ಐದೂ ಭಾಷೆಗಳ ಪೈಕಿ ಕನ್ನಡ ಆವೃತ್ತಿಯಲ್ಲೇ ಅತಿ ಹೆಚ್ಚು ಅಂದರೆ ಶೇಕಡ 47.23ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಅದರಲ್ಲೂ ಕನ್ನಡದ ನೈಟ್ ಶೋಗಳಿಗೆ ಭಾರಿ ಸ್ಪಂದನೆ ಸಿಕ್ಕಿದೆ. 

ಹಿಂದಿ ಆವೃತ್ತಿಯಲ್ಲಿ ಶೇಕಡ 26.19ರಷ್ಟು ಆಕ್ಯುಪೆನ್ಸಿ ಕಂಡುಬಂದಿದೆ. ಆದರೆ ಮಲಯಾಳಂ, ತಮಿಳು ಮತ್ತು ತೆಲುಗು ಆವೃತ್ತಿಗಳಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಬಂದಿಲ್ಲ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.