Photo Credits: @filmystan.official (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಬಾಕಿ ಇವೆ. ಆದರೆ ಬಿಡುಗಡೆಗೂ ಮುನ್ನವೇ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಂಗಡ ಬುಕಿಂಗ್ ಓಪನ್ ಆಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಖಾಲಿಯಾಗಿವೆ. ಇದರ ಬೆನ್ನಲ್ಲೇ ಸಿನಿಮಾದ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ.
ಬುಕ್‌ಮೈಶೋನಲ್ಲಿ ಪ್ರತಿ ಗಂಟೆಗೆ 25 ಸಾವಿರ ಟಿಕೆಟ್ ಸೇಲ್…
ಮಲ್ಟಿಪ್ಲೆಕ್ಸ್‌ಗಳ ಮೊದಲ ದಿನದ ಪ್ರದರ್ಶನಗಳ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಮಾರಾಟವಾಗಿವೆ. ಬುಕ್‌ಮೈಶೋ ಆ್ಯಪ್‌ನಲ್ಲಿ ಪ್ರತಿ ಗಂಟೆಗೆ 25 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಸೇಲ್ ಆಗುತ್ತಿವೆ. ಈ ಮೂಲಕ ‘ಟಾಕ್ಸಿಕ್’ ಸಿನಿಮಾ ಮುಂಗಡ ಬುಕ್ಕಿಂಗ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟೊಂದು ವೇಗವಾಗಿ ಟಿಕೆಟ್ ಬುಕಿಂಗ್ ಆಗುತ್ತಿರುವುದು ಇದೇ ಮೊದಲು.
ಬೆಂಗಳೂರಿನಲ್ಲಿ 250 ರೂ. ನಿಂದ 2000 ರೂ. ವರೆಗೆ ದರ…
ರಾಜಧಾನಿ ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಟಿಕೆಟ್ ದರ ಭಾರಿ ದುಬಾರಿಯಾಗಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ಬೆಲೆ 250 ರಿಂದ 300 ರೂ. ಇದೆ. ಸಾಮಾನ್ಯ ಮಲ್ಟಿಪ್ಲೆಕ್ಸ್‌ಗಳಲ್ಲಿ 350 ರಿಂದ 500 ರೂ. ನಿಗದಿ ಮಾಡಲಾಗಿದೆ. ಪ್ರೀಮಿಯಂ ಸೀಟ್ ಹಾಗೂ ವಿಶೇಷ ಶೋಗಳಿಗೆ 600 ರಿಂದ 800 ರೂ. ವರೆಗೆ ಬೆಲೆ ಇದೆ. ಇನ್ನು ಅತಿ ಪ್ರೀಮಿಯಂ ಸ್ಕ್ರೀನ್‌ಗಳಲ್ಲಿ ಟಿಕೆಟ್ ದರ 1,900 ರಿಂದ 2,000 ರೂ. ವರೆಗೂ ತಲುಪಿದೆ.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಷ್ಟಿದೆ ಟಿಕೆಟ್ ದರ?
ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಬೇಡಿಕೆಗೆ ತಕ್ಕಂತೆ ವಿಭಿನ್ನ ಟಿಕೆಟ್ ದರಗಳನ್ನು ನಿಗದಿಪಡಿಸಲಾಗಿದೆ.
- ಮೈಸೂರು: ಸಾಮಾನ್ಯ ಟಿಕೆಟ್ 200-400 ರೂ., ಪ್ರೀಮಿಯಂ 400-700 ರೂ.
- ಮಂಗಳೂರು ಹಾಗೂ ಉಡುಪಿ: ಸಾಮಾನ್ಯ 180-350 ರೂ., ಪ್ರೀಮಿಯಂ 350-600 ರೂ.
- ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ: ಸಾಮಾನ್ಯ 150-300 ರೂ., ಪ್ರೀಮಿಯಂ 300-500 ರೂ.
- ಶಿವಮೊಗ್ಗ, ತುಮಕೂರು ಹಾಗೂ ದಾವಣಗೆರೆ: ಸಾಮಾನ್ಯ 150-300 ರೂ., ಪ್ರೀಮಿಯಂ 300-500 ರೂ.
- ಕಲಬುರಗಿ, ರಾಯಚೂರು ಹಾಗೂ ಕುಂದಾಪುರ: ಸಾಮಾನ್ಯ 150-300 ರೂ., ಪ್ರೀಮಿಯಂ 300-500 ರೂ.
ಹೊರ ರಾಜ್ಯಗಳಲ್ಲೂ ಭಾರಿ ಬೇಡಿಕೆ…
ದೇಶದ ಇತರೆ ಮಹಾನಗರಗಳಲ್ಲೂ ‘ಟಾಕ್ಸಿಕ್’ ಹವಾ ಜೋರಾಗಿದೆ. ಮುಂಬೈ ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ‘ಟಾಕ್ಸಿಕ್’ ಚಿತ್ರದ ಸರಾಸರಿ ಟಿಕೆಟ್‌ಗಳು 800 ರಿಂದ 900 ರೂ. ಗೆ ಮಾರಾಟವಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಯಶ್ ಅವರ ಕ್ರೇಜ್ ನೋಡಿ ಚಿತ್ರತಂಡ ಹಾಗೂ ವಿತರಕರು ಸಂತಸಗೊಂಡಿದ್ದಾರೆ.




