Photo Credits: @thenameisyash (Instagram)
ಇಂದು ರಾಕಿಂಗ್ ಸ್ಟಾರ್ ಯಶ್ ಜಗತ್ತನ್ನೇ ಗೆಲ್ಲುವ ಹಾದಿಯಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಯಶ್ ಅವರ ಮುಂದಿನ ಜಾಗತಿಕ ಯಶಸ್ಸನ್ನು ಸ್ವಾಗತಿಸಲು ಕಾತುರದಿಂದ ಎದುರುನೋಡುತ್ತಿದೆ. ಯಶ್ ನಟನೆ ಹಾಗೂ ನಿರ್ಮಾಣದ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ.
ಜಗತ್ತೇ ತಿರುಗಿ ನೋಡುವಂತೆ ಬೆಳೆದ ಯಶ್ ಜಾದೂ…
ಕನ್ನಡ ಚಿತ್ರರಂಗದ ಇತಿಹಾಸವನ್ನು ಕೆಜಿಎಫ್‌ಗಿಂತ ಮೊದಲು ಮತ್ತು ಕೆಜಿಎಫ್ ನಂತರ ಎಂದು ಹೆಮ್ಮೆಯಿಂದ ವಿಭಾಗಿಸಬಹುದು. ಅಂದು ಮೈಸೂರಿನಿಂದ ಬೆಂಗಳೂರಿಗೆ ಪುಡಿಗಾಸು ಹಿಡಿದುಕೊಂಡು ಬಂದ ಸಾಮಾನ್ಯ ಹುಡುಗ ಇಂದು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾನೆ. ಯಶ್ ಅವರ ಅಚಲ ಛಲ ಮತ್ತು ಶ್ರಮಕ್ಕೆ ಸಿಕ್ಕ ಪ್ರತಿಫಲವೇ ಈ ಅಭೂತಪೂರ್ವ ಯಶಸ್ಸು ಎನ್ನಬಹುದು. ‘ಟಾಕ್ಸಿಕ್’ ಸಿನಿಮಾ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆದರೆ ಬಾಕ್ಸ್ ಆಫೀಸ್‌ನಲ್ಲಿ 2000 ಕೋಟಿ ರೂಪಾಯಿ ದಾಟುವುದು ಖಚಿತ. ಆಗಸ್ಟ್‌ನಲ್ಲಿ ‘ಟಾಕ್ಸಿಕ್’ ಹಾಗೂ ನವೆಂಬರ್‌ನಲ್ಲಿ ‘ರಾಮಾಯಣ’ ಬಿಡುಗಡೆಯಾಗಲಿದ್ದು, ಯಶ್ ಕೇವಲ 2 ತಿಂಗಳಲ್ಲಿ ಇಡೀ ಜಗತ್ತಿನ ತೆರೆಯಲ್ಲಿ ಮಿಂಚಲಿದ್ದಾರೆ.
ಮ್ಯಾನಿಫೆಸ್ಟೇಷನ್ ತಂದಿತ್ತ ಅಪರೂಪದ ಯಶಸ್ಸು…
ಯಶ್ ಅವರ ಈ ಇಡೀ ಜೀವನದ ಪಯಣವೇ ಒಂದು ದೊಡ್ಡ ಪ್ರೇರಣಾದಾಯಿ ಮ್ಯಾನಿಫೆಸ್ಟೇಷನ್ ಆಗಿದೆ. ‘ರಾಜಾಹುಲಿ’ ಸಿನಿಮಾ ಸಮಯದಲ್ಲಿ ಯಶ್ ಮೊಬೈಲ್‌ನಲ್ಲಿ ಶಾರುಖ್ ಖಾನ್ ಅವರ ‘ಡಾನ್’ ಬಿಜಿಎಂ ರಿಂಗ್‌ಟೋನ್ ಆಗಿತ್ತು. ಇಂದು ಅದೇ ಶಾರುಖ್ ಖಾನ್ ಅವರು ಯಶ್ ಅವರನ್ನು ಪ್ರೀತಿಯಿಂದ ತಮ್ಮ ಮನೆಗೆ ಡಿನ್ನರ್‌ಗೆ ಆಹ್ವಾನಿಸುವ ಹಂತಕ್ಕೆ ಬೆಳೆದಿದ್ದಾರೆ. ‘ಝೀರೋ’ ಎದುರು ‘ಕೆಜಿಎಫ್’ ಹಿಟ್ ಆದಾಗಲೂ ಯಶ್ ಅಹಂಕಾರ ಪ್ರದರ್ಶಿಸದೇ ತಮ್ಮ ವಿನಯವಂತಿಕೆಯಿಂದ ಎಲ್ಲರ ಮನ ಗೆದ್ದಿದ್ದರು. ಮುಂಬೈನಲ್ಲಿ ‘ಮಾಸ್ಟರ್ ಪೀಸ್’ ಶೂಟಿಂಗ್ ನಡೆಯುವಾಗಲೇ ಕನ್ನಡ ಸಿನಿಮಾವನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಕನಸು ಹೊಂದಿದ್ದರು.
ಪ್ರತಿಭೆಗೆ ಬೆಲೆ ನೀಡುವ ರಾಕಿ ಭಾಯ್…
ಯಶ್ ಎಷ್ಟೇ ದೊಡ್ಡ ಜಾಗತಿಕ ಸ್ಟಾರ್ ಆದರೂ ತಮ್ಮ ಹಳೆಯ ಗೆಳೆಯರನ್ನು ಮತ್ತು ಹಿರಿಯ ಕಲಾವಿದರನ್ನು ಎಂದಿಗೂ ಮರೆತಿಲ್ಲ. ತಮ್ಮ ಜೊತೆಗಿದ್ದ ಹಳೆಯ ತಂತ್ರಜ್ಞರು ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಸ್ಸಾರ್ಥ ಗುಣ ಅವರಲ್ಲಿದೆ. ‘ಉಗ್ರಂ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ವಿಷನ್ ಗುರುತಿಸಿ ‘ಕೆಜಿಎಫ್’ ನೀಡಿದ್ದು ಇದೇ ರಾಕಿ ಭಾಯ್. ಅಂತೆಯೇ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಪ್ರತಿಭೆ ನಂಬಿ ‘ಟಾಕ್ಸಿಕ್’ ಸಿನಿಮಾದ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕನ್ನಡದ ಸಿನಿಮಾ ಇಂದು ಜಾಗತಿಕ ಮಟ್ಟದಲ್ಲಿ ರಾರಾಜಿಸುವ ಅಪೂರ್ವ ಘಳಿಗೆಗೆ ಇಡೀ ವಿಶ್ವವೇ ಸಜ್ಜಾಗಿದೆ.




