Photo Credits: @govtjobsearchofficial (Instagram)
ಸಂಕ್ಷಿಪ್ತ ವಿವರಣೆ: ಮಧ್ಯಪ್ರದೇಶ ಹೈಕೋರ್ಟ್ (MPHC) 1,174 ಅಸಿಸ್ಟೆಂಟ್ ಗ್ರೇಡ್-3 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸರ್ಕಾರಿ ಉದ್ಯೋಗ ಬಯಸುತ್ತಿರುವ ಪದವೀಧರರಿಗೆ ಹೈಕೋರ್ಟ್‌ನಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ಮಧ್ಯಪ್ರದೇಶ ಹೈಕೋರ್ಟ್ ಖಾಲಿ ಇರುವ 1,174 ಅಸಿಸ್ಟೆಂಟ್ ಗ್ರೇಡ್-III ಹುದ್ದೆಗಳ ಭರ್ತಿಗೆ (Advt. No.: 614/Pariksha/2026) ಅಧಿಸೂಚನೆ ಪ್ರಕಟಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 17, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 15, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ನೇಮಕಾತಿಯ ಪ್ರಮುಖ ಮುಖ್ಯಾಂಶಗಳು…
- ನೇಮಕಾತಿ ಸಂಸ್ಥೆ: ಮಧ್ಯಪ್ರದೇಶ ಹೈಕೋರ್ಟ್ (MPHC)
- ಅಧಿಸೂಚನೆ ಸಂಖ್ಯೆ: 614/Pariksha/2026
- ಹುದ್ದೆಯ ಹೆಸರು: ಅಸಿಸ್ಟೆಂಟ್ ಗ್ರೇಡ್ III
- ಒಟ್ಟು ಹುದ್ದೆಗಳು: 1,174
- ಉದ್ಯೋಗ ಸ್ಥಳ: ಮಧ್ಯಪ್ರದೇಶ
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು…
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 15 ಸೆಪ್ಟೆಂಬರ್ 2026
- ಅರ್ಜಿ ತಿದ್ದುಪಡಿ ಅವಧಿ: 19 ರಿಂದ 21 ಸೆಪ್ಟೆಂಬರ್ 2026
- ಪರೀಕ್ಷಾ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು
- ಪ್ರವೇಶ ಪತ್ರ: ಪರೀಕ್ಷೆಗೂ ಮುನ್ನ ಲಭ್ಯವಿರಲಿದೆ

Photo Credits: @govtjobsearchofficial (Instagram)
ಶೈಕ್ಷಣಿಕ ಅರ್ಹತೆ…
ಅಸಿಸ್ಟೆಂಟ್ ಗ್ರೇಡ್ III ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು…
- ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು.
- MP C.P.C.T. Score card ಹೊಂದಿರಬೇಕು.
- ಮಧ್ಯಪ್ರದೇಶ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 1 ವರ್ಷದ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ (01/01/2026 ಕ್ಕೆ ಅನ್ವಯಿಸುವಂತೆ)…
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು (ಪುರುಷ ಅಭ್ಯರ್ಥಿಗಳಿಗೆ): 40 ವರ್ಷಗಳು
- ಗರಿಷ್ಠ ವಯಸ್ಸು (ಮಹಿಳಾ ಅಭ್ಯರ್ಥಿಗಳಿಗೆ): 45 ವರ್ಷಗಳು
- (ನಿಯಮಾವಳಿಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ).
ಅರ್ಜಿ ಶುಲ್ಕದ ವಿವರ…
- ಸಾಮಾನ್ಯ / ಇತರ ರಾಜ್ಯದ ಅಭ್ಯರ್ಥಿಗಳಿಗೆ: ₹943.40/-
- OBC / EWS / SC / ST / PH ಅಭ್ಯರ್ಥಿಗಳಿಗೆ: ₹743.40/-
- ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ…
ನೇಮಕಾತಿ ನಿಯಮಾವಳಿಗಳ ಪ್ರಕಾರ (As per Rules) ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.




