AARADA GAYA SONG TOXIC: ಮುಂಬೈ ಮ್ಯೂಸಿಕ್ ಲಾಂಚ್‌ನಲ್ಲಿ ‘ಟಾಕ್ಸಿಕ್’ ಧಮಾಕಾ: ಭಟ್ರು ಬರೆದ ಭಾವನಾತ್ಮಕ ಹಾಡಿಗೆ ಫ್ಯಾನ್ಸ್ ಫಿದಾ…

'ಟಾಕ್ಸಿಕ್' ಹಾಡಿನಲ್ಲಿ ಯೋಗರಾಜ್ ಭಟ್ ಶಬ್ದಗಳ ಮೋಡಿ...

Photo Credits: @yogarajbhatofficial (Instagram)

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮ್ಯೂಸಿಕ್ ಲಾಂಚ್ ಇತ್ತೀಚೆಗೆ ಮುಂಬೈನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಚಿತ್ರರಂಗದ ತಾರೆಗಳು ಮತ್ತು ಡ್ಯಾನ್ಸರ್ಸ್ ಪರ್ಫಾರ್ಮೆನ್ಸ್ ಮಧ್ಯೆ ಈ ಕಾರ್ಯಕ್ರಮ ಸಿನಿರಸಿಕರ ಗಮನ ಸೆಳೆದಿದೆ. ವಿಶೇಷವಾಗಿ ಈ ಚಿತ್ರದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ‘ಆರದ ಗಾಯ’ ಎಂಬ ಭಾವನಾತ್ಮಕ ಹಾಡು ಈಗ ಎಲ್ಲರ ಹೃದಯ ತಟ್ಟುತ್ತಿದೆ.

ಯೋಗರಾಜ್ ಭಟ್ರ ಸಾಹಿತ್ಯ ಮತ್ತು ‘ಆರದ ಗಾಯ’ ಹಾಡಿನ ಗಂಭೀರತೆ…

ಯೋಗರಾಜ್ ಭಟ್ರು ತಮಾಷೆಯ ಹಾಡುಗಳನ್ನು ಬರೆಯುವಷ್ಟೇ ಅದ್ಭುತವಾಗಿ ನೋವಿನ ಸಾಲುಗಳನ್ನೂ ಕಟ್ಟಿಕೊಡಬಲ್ಲರು. ‘ಟಾಕ್ಸಿಕ್’ ಚಿತ್ರದಲ್ಲಿ ಬರೀ ಮಾಸ್ ಮತ್ತು ವೈಲ್ಡ್ ರೋಮ್ಯಾನ್ಸ್ ಮಾತ್ರವಲ್ಲದೆ, ಆಳವಾದ ನೋವಿನ ಕಥೆಯೂ ಇದೆ. ಈ ಸಿನಿಮಾದ ‘ಆರದ ಗಾಯ’ ಎಂಬ ಸಾಂಗ್ ಪ್ರೇಕ್ಷಕರಿಗೆ ಕಥೆಯ ಆಳವಾದ ನೋವನ್ನು ತಲುಪಿಸುವಂತೆ ಮೂಡಿಬಂದಿದೆ.

“ಆರದ ಗಾಯವ ಕೊರೆದು, ಸಮಯ ನಗುತ್ತಿದೆ… ಬಾರದಾ ನಾಳೆಯ ಕರೆದು, ಹೃದಯ ನರಳಿದೆ” ಎಂದು ಪಲ್ಲವಿ ಸಾಗುತ್ತದೆ.

“ನಿರಾಸೆಗೆ ಬೆಂದೂ, ಉಸಿರು ಸುಡುತಿದೆ… ನಿರಂತವಾಗಿ, ನೆನಪು ಅಳುತಿದೆ” ಎಂಬ ಸಾಲುಗಳು ಪ್ರತಿಯೊಬ್ಬರ ಮನಸ್ಸನ್ನು ಹಿಂಡುತ್ತವೆ.

ಚರಣದ ಪ್ರತಿಯೊಂದು ಸಾಲಲ್ಲೂ ಎದ್ದು ಕಾಣುವ ನೋವಿನ ಆಳ…

ಹಾಡಿನ ಎರಡನೇ ಚರಣದಲ್ಲಿ ಭಟ್ರು ಬರೆದಿರುವ ಸಾಲುಗಳು ಪ್ರೀತಿಯ ಸತ್ಯ ಮತ್ತು ನೋವನ್ನು ತೆರೆದಿಡುತ್ತವೆ.

“ಕಲ್ಪನೆಯಲ್ಲಿ ಜೀವನ ಹೂವು… ಜೀವಿಸುವಾಗ ಸಾವಿರ ನೋವು” ಎಂಬ ಸಾಲು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ.

“ಕಾಮನಬಿಲ್ಲು ನೀಡಲು ಕಾವು… ಬಣ್ಣಗಳಲ್ಲಿ ಮೂಡಿದೆ ಸಾವು” ಎಂದು ಭಟ್ರು ತಮ್ಮ ವಿಶಿಷ್ಟ ಶೈಲಿಯಲ್ಲಿ ಬರೆದಿದ್ದಾರೆ.

“ಚಂದ್ರನು ಕಾಲುಜಾರಿ ಕಡಲಲಿ ಬೀಳಬಹುದೇ? ಹುಣ್ಣಿಮೆ ಕಾಣೆಯಾಗಿ ಕತ್ತಲು ಮರುಗಿದೆ” ಎಂಬ ಕಲ್ಪನೆ ಅದ್ಭುತವಾಗಿದೆ.

“ಕಾಲಕೇನಾಗಿದೆ ಒಲಿದಾ ಒಲವು ಕೊಲುತಿದೆ… ಚಿರಂತನವಾಗಿ ನೆನಪು ಬದುಕಿದೆ” ಎಂಬ ಸಾಲುಗಳು ಕಣ್ಣಾಲಿಗಳನ್ನು ತೇವಗೊಳಿಸುತ್ತವೆ.

Photo Credits: @yogarajbhatofficial (Instagram)

ವಿಶಾಲ್ ಮಿಶ್ರಾ ಮ್ಯಾಜಿಕಲ್ ಕಂಠ ಮತ್ತು ಮುಂಬೈ ಮ್ಯೂಸಿಕ್ ಲಾಂಚ್ ಧಮಾಕಾ…

ಈ ಭಾವಪೂರ್ಣ ಗೀತೆಗೆ ಖ್ಯಾತ ಗಾಯಕ ವಿಶಾಲ್ ಮಿಶ್ರಾ ತಮ್ಮ ಅದ್ಭುತ ಧ್ವನಿಯ ಮೂಲಕ ಜೀವ ತುಂಬಿದ್ದಾರೆ. ಈ ಹಿಂದೆ ಭಟ್ರು ಬರೆದಿದ್ದ ‘ತಬಾಹಿ’ ಹಾಡನ್ನು ಕಂಪೋಸ್ ಮಾಡಿ ಹಾಡಿದ್ದ ವಿಶಾಲ್, ಇಲ್ಲೂ ಮೋಡಿ ಮಾಡಿದ್ದಾರೆ. ಎಮೋಷನಲ್ ಮತ್ತು ನೋವಿನ ಹಾಡುಗಳನ್ನು ಹಾಡಲು ವಿಶಾಲ್ ಮಿಶ್ರಾ ಅವರ ಧ್ವನಿ ಸಂಪೂರ್ಣ ಸೂಕ್ತವಾಗಿದೆ. ಮುಂಬೈನಲ್ಲಿ ನಡೆದ ಮ್ಯೂಸಿಕ್ ಲಾಂಚ್ ಈವೆಂಟ್‌ನಲ್ಲಿ ವಿಶಾಲ್ ಮಿಶ್ರಾ ಈ ಹಾಡನ್ನು ಲೈವ್ ಆಗಿ ಹಾಡಿ ರಂಜಿಸಿದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್’ ಚಿತ್ರದ ಈ ಎಮೋಷನಲ್ ಸಾಂಗ್ ಭಾರಿ ವೈರಲ್ ಆಗುತ್ತಿದೆ.