Toxic: ‘ಟಾಕ್ಸಿಕ್’ ಕೊನೆಯಲ್ಲಿ ಆಡಿಯನ್ಸ್‌ಗೆ ಭರ್ಜರಿ ಸರ್ಪ್ರೈಸ್; ಸಿನಿಮಾ ಮಂದಿಗೆ ಸಿಕ್ಕೆಬಿಡ್ತು ‘ಆ’ ಸೀಕ್ರೆಟ್!

Sandalwood filmmakers are spreading the word that the end of the movie Yash hints Toxic Part 2

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಕಳೆದ ಕೆಲವು ದಿನಗಳಿಂದ ಯಶ್ ‘ಟಾಕ್ಸಿಕ್’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ದೇಶಾದ್ಯಂತ ಈ ಸಿನಿಮಾಗಳಾಗಿ ಸಿನಿಪ್ರೇಮಿಗಳು ಕೂಡ ಎದುರು ನೋಡುತ್ತಿದ್ದಾರೆ. ‘ಕೆಜಿಎಫ್ 2’ ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೀಗಾಗಿ ‘ಟಾಕ್ಸಿಕ್’ ಅವರ ಕರಿಯರ್‌ನ ಪ್ರಮುಖ ಸಿನಿಮಾ ಅನ್ನೋದರಲ್ಲಿ ಅನುಮಾನವಿಲ್ಲ.

‘ಕೆಜಿಎಫ್’ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ ಯಶ್ ಈಗ ‘ಟಾಕ್ಸಿಕ್’ ಗ್ಲೋಬಲ್ ಆಡಿಯನ್ಸ್ ಅನ್ನು ತನ್ನ ಸೆಳೆಯುವುದಕ್ಕೆ ಶತಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಪ್ರಚಾರ ಕೂಡ ಅಷ್ಟೇ ಭರ್ಜರಿಯಾಗಿ ಮಾಡುತ್ತಿದ್ದಾರೆ. ಸದ್ಯ ಹಿಂದಿ ಆಡಿಯನ್ಸ್ ಅನ್ನು ಥಿಯೇಟರ್‌ಗೆ ಸೆಳೆಯುವುದಕ್ಕೆ ಉತ್ತರ ಭಾರತದಲ್ಲಿ ಪ್ರಚಾರಗಳನ್ನು ಮಾಡುತ್ತಿದ್ದಾರೆ. ಆ ಬಳಿಕ ದಕ್ಷಿಣ ಭಾರತದ ಕಡೆಗೆ ಮುಖ ಮಾಡಲಿದ್ದಾರೆ. ಈ ಗ್ಯಾಪ್‌ನಲ್ಲಿ ಗಾಂಧಿನಗರದ ಮಂದಿಗೆ ಹೊಸದೊಂದು ಸುದ್ದಿ ಸಿಕ್ಕಿಬಿಟ್ಟಿದೆ.

‘ಟಾಕ್ಸಿಕ್’ ಇದೇ ತಿಂಗಳು (ಆಗಸ್ಟ್) 26ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಶೂಟ್ ಆಗಿರುವ ಈ ಸಿನಿಮಾ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ ಬಾಕ್ಸಾಫೀಸ್‌ನಲ್ಲಿ ಅದ್ಯಾವ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದು ಲೆಕ್ಕಾಚಾರವನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ‘ಟಾಕ್ಸಿಕ್ 2’ ಬಗ್ಗೆ ಗಾಂಧಿನಗರದಲ್ಲಿ ಜೋರಾಗಿಯೇ ಚರ್ಚೆಯಾಗುತ್ತಿದೆ.

ಈಗಾಗಲೇ ಎರಡೆರಡು ಬಾರಿ ಸಿನಿಮಾ ಪೋಸ್ಟ್‌ಪೋನ್ ಆಗಿದ್ದು, ಕೊನೆಗೂ ‘ಟಾಕ್ಸಿಕ್’ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಈ ಗ್ಯಾಪ್‌ನಲ್ಲಿ ‘ಕೆಜಿಎಫ್ 2’ ನಂತೆಯೇ ‘ಟಾಕ್ಸಿಕ್ 2’ ಕೂಡ ಬರುತ್ತೆ ಅನ್ನೋ ಮಾತುಗಳು ಸ್ಯಾಂಡಲ್‌ವುಡ್ ಮಂದಿಯ ಬಾಯಿಯಲ್ಲಿ ಹರಿದಾಡುತ್ತಿವೆ. ಹಾಗಂತ ಸುಮ್ಮನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯೇನು ಅಲ್ಲ. ‘ಟಾಕ್ಸಿಕ್’ ಸಿನಿಮಾದ ಕೊನೆಯಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ಯಶ್ ‘ಟಾಕ್ಸಿಕ್ 2’ ಬಗ್ಗೆ ಸುಳಿವನ್ನು ನೀಡಿದ್ದಾರಂತೆ.

ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ಸೆನ್ಸಾರ್‌ಗೆ ಹೋಗಿತ್ತು. ಸೆನ್ಸಾರ್ ಅಧಿಕಾರಿಗಳು ಸಿನಿಮಾ ನೋಡಿ ‘ಎ’ ಸರ್ಟಿಫಿಕೇಟ್ ಕೊಟ್ಟಿರುವುದಾಗಿ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೇಳೆನೇ ‘ಟಾಕ್ಸಿಕ್ 2’ ಬಗ್ಗೆ ರಿವೀಲ್ ಆಗಿರಬಹುದೆಂದು ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್, ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ. ಆದರೆ, ಗಾಂಧಿನಗರದಲ್ಲಿ ಮಾತ್ರ ‘ಟಾಕ್ಸಿಕ್ 2’ ಬರುತ್ತೆ ಅನ್ನೋ ಮಾತುಗಳು ಜೋರಾಗಿ ಓಡಾಡುತ್ತಿವೆ.

ಇನ್ನು ಸೋಲಿನ ಸುಳಿಗೆ ಸಿಲುಕಿ ಕಂಗೆಟ್ಟು ಹೋಗಿರುವ ಸ್ಯಾಂಡಲ್‌ವುಡ್‌ಗೆ ‘ಟಾಕ್ಸಿಕ್’ ಸಕ್ಸಸ್ ತಂದು ಕೊಡಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಅತೀ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಸುಮಾರು ಮೂರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಬಹುದೆಂದು ಮಾತುಗಳು ಕೂಡ ಕೇಳಿಬರುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಸಂತೋಷ್‌ನಲ್ಲಿ ‘ಟಾಕ್ಸಿಕ್’ ಪ್ರದರ್ಶನ ಕಾಣುವುದು ಬಹುತೇಕ ಕನ್ಫರ್ಮ್ ಆಗಿದೆ.

ಇನ್ನು ಸಂತೋಷ್ ಚಿತ್ರಮಂದಿರದ ಜೊತೆಗೆ ತ್ರಿವೇಣಿ, ಅಭಿನಯ ಇಲ್ಲವೇ ಭೂಮಿಕಾ ಚಿತ್ರಮಂದಿರಗಳಲ್ಲಿ ತೆಲುಗು ಹಾಗೂ ಹಿಂದಿ ವರ್ಷನ್ ಬಿಡುಗಡೆ ಆಗಬಹುದೆಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಈ ಸಿನಿಮಾವನ್ನು ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ನಿರ್ಮಾಪಕ-ವಿತರಕ ಜಯಣ್ಣ ಈ ಸಿನಿಮಾವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡುವುದಕ್ಕೆ ರೂಪುರೇಷೆಗಳನ್ನು ರೂಪಿಸುತ್ತಿದ್ದಾರೆಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.