☔ Weather
Bengaluru: 🌧️ 27°C | AQI 55
Mysore: 🌤️ 30°C | AQI 74
Mangalore: ☀️ 34°C | AQI 146
Bengaluru: 🌧️ 27°C | AQI 55
☔ Weather
Bengaluru: 🌧️ 27°C | AQI 55
Mysore: 🌤️ 30°C | AQI 74
Mangalore: ☀️ 34°C | AQI 146
Bengaluru: 🌧️ 27°C | AQI 55

HC BALAKRISHNA: ಮುಂದಿನ ಸರ್ಕಾರ ಜನರೇ ನಿರ್ಧರಿಸುತ್ತಾರೆ, ಗೌಡರ ಕುಟುಂಬವಲ್ಲ: ಬಾಲಕೃಷ್ಣ ತಿರುಗೇಟು

Image of HC Balakrishna
ಹೆಚ್.ಸಿ.ಬಾಲಕೃಷ್ಣ (HC Balakrishna) ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವ ಅಧಿಕಾರ ಜನರಿಗೆ ಮಾತ್ರ ಇದೆ ಎಂದಿದ್ದಾರೆ.

ಮುಖ್ಯಾಂಶಗಳು

  • ಮುಂದಿನ ಸರ್ಜಾರ ನಿರ್ಧರಿಸೋದು ರಾಜ್ಯದ ಜನ
  • ದೇವೇಗೌಡರ ಕುಟುಂಬ ನಿರ್ಧರಿಸಲು ಸಾಧ್ಯವಿಲ್ಲ !
  • ಹೆಚ್.ಸಿ ಬಾಲಕೃಷ್ಣ ತಿರುಗೇಟು !

ರಾಮನಗರ: ಸಚಿವ ಹೆಚ್.ಸಿ.ಬಾಲಕೃಷ್ಣ (HC Balakrishna) ಅವರು ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವ ಅಧಿಕಾರ ಜನರಿಗೆ ಮಾತ್ರ ಇದೆ, ದೇವೇಗೌಡರಿಗಾಗಲಿ, ರೇವಣ್ಣ ಅವರಿಗಾಗಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಶ್ರೀ ನಿಶ್ಚಲಾನಂದ ಸ್ವಾಮೀಜಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದ ವಿಚಾರದಲ್ಲಿ ರೇವಣ್ಣ ಅವರು ಸ್ವಾಮೀಜಿಗಳು ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ಹೇಳಿದ್ದಕ್ಕೆ ಬಾಲಕೃಷ್ಣ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ರೇವಣ್ಣ ಅವರ ಕುಟುಂಬದ ಪರವಾಗಿ ಸ್ವಾಮೀಜಿಗಳು ಮಾತನಾಡಿದರೆ ಅದು ಅವರಿಗೆ ಇಷ್ಟವಾಗುತ್ತದೆ, ಆದರೆ ಸರಿಯಾದ ಮಾತು ಹೇಳಿದರೆ ಸ್ವಾಮೀಜಿಗಳು ಹಾಗೆ ಮಾತನಾಡಬಾರದು ಎನ್ನುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. 2028ರಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ಬರುತ್ತದೆ ಎಂದು ರೇವಣ್ಣ ಹೇಳುವುದಕ್ಕೆ ತಮ್ಮ ಅಭ್ಯಂತರವಿಲ್ಲ, ಆದರೆ ಅಂತಿಮ ತೀರ್ಮಾನ ಜನರದ್ದೇ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಜಾಗಕ್ಕೆ ಅರ್ಜಿ ಹಾಕಲಿ ..!

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೂ ಬಾಲಕೃಷ್ಣ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರು ಈಗ ಕೇಂದ್ರ ಮಂತ್ರಿಯಾಗಿದ್ದು, ಕೈಗಾರಿಕೆಗಳಿಗೆ ಜಾಗ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಅವರಿಗೆ ಎಲ್ಲಿ ಜಾಗ ಬೇಕೋ ಅಲ್ಲಿ ಕೇಳಲಿ, ನಾವು ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ ಮತ್ತು ಕುಮಾರಸ್ವಾಮಿ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಆ ಯುವಕರಿಗೆ ಉದ್ಯೋಗ ಕೊಡಿಸುವ ಹೊಣೆ ಕುಮಾರಸ್ವಾಮಿ ಅವರ ಮೇಲಿದೆ. ಎಲ್ಲಿ ಜಾಗ ಬೇಕು ಎಂದು ನಾಳೆಯೇ ಪತ್ರ ಕೊಡಲಿ, ಯಾವ ಜಿಲ್ಲೆಯಲ್ಲಿ ಬೇಕಾದರೂ ಜಾಗ ಕೊಡಿಸುತ್ತೇವೆ, ಅವರು ಕೈಗಾರಿಕೆಗಳನ್ನು ತರಲಿ ಎಂದು ಬಾಲಕೃಷ್ಣ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಬಿಜೆಪಿಗೆ ಮತ ಹಾಕಿದ್ರೆ ಗ್ಯಾರಂಟಿ ಬಂದ್- ಯೋಚಿಸಿ ಮತ ಹಾಕಿ

ಈ ಹೇಳಿಕೆಗಳು ಕೇವಲ ವೈಯಕ್ತಿಕ ಟೀಕೆಯಾಗಿ ಕಾಣುತ್ತಿಲ್ಲ, 2028ರ ಚುನಾವಣೆಗೆ ಈಗಿನಿಂದಲೇ ನಡೆಯುತ್ತಿರುವ ರಾಜಕೀಯ ಪೈಪೋಟಿಯಾಗಿ ಕಾಣುತ್ತಿವೆ. ಸ್ವಾಮೀಜಿಗಳ ಹೇಳಿಕೆಯನ್ನು ಮುಂದಿಟ್ಟುಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ತೀವ್ರಗೊಳ್ಳುತ್ತಿದ್ದು, ಧಾರ್ಮಿಕ ಮುಖಂಡರನ್ನು ರಾಜಕೀಯ ಚರ್ಚೆಗೆ ಎಳೆದು ತರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಕೈಗಾರಿಕೆ ಮತ್ತು ಉದ್ಯೋಗದ ವಿಷಯವನ್ನು ಬಾಲಕೃಷ್ಣ ಅವರು ಕುಮಾರಸ್ವಾಮಿ ಅವರ ಮೇಲೆಯೇ ಹೊರಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ. ಯುವ ಮತದಾರರನ್ನು ಗೆಲ್ಲುವುದಕ್ಕಾಗಿ ಉದ್ಯೋಗದ ಭರವಸೆಗಳನ್ನು ಮುಂದಿಡಲಾಗುತ್ತಿದೆ, ಆದರೆ ನಿಜವಾದ ಪ್ರಶ್ನೆ ಎಂದರೆ ಜಾಗ ಕೊಡುವುದು ಮಾತ್ರವೇ ಅಭಿವೃದ್ಧಿಯೇ, ಕೈಗಾರಿಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತವೆಯೇ ಎಂಬುದಾಗಿದೆ.