☔ Weather
Bengaluru: ☁️ 25°C | AQI 157
Mysore: 🌤️ 23°C | AQI 163
Mangalore: ☀️ 27°C | AQI 156
Bengaluru: ☁️ 25°C | AQI 157
☔ Weather
Bengaluru: ☁️ 25°C | AQI 157
Mysore: 🌤️ 23°C | AQI 163
Mangalore: ☀️ 27°C | AQI 156
Bengaluru: ☁️ 25°C | AQI 157

Interview: ‘ಓ ಮನಸೇ’ ಮೂಲಕ ಮಧುಮಿತಾ ಭರ್ಜರಿ ಕಮ್ಬ್ಯಾಕ್

Interview: Madhumitha Gowda Returns to Kannada TV with 'O Manase' After Two Years
ಎರಡು ವರ್ಷಗಳ ವಿರಾಮದ ಬಳಿಕ ನಟಿ ಮಧುಮಿತಾ ಗೌಡ 'ಓ ಮನಸೇ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಮ್ಬ್ಯಾಕ್ ಮಾಡಿದ್ದಾರೆ. ರಾಗ ಪಾತ್ರ, ಶೂಟಿಂಗ್ ಅನುಭವ ಮತ್ತು ಮೈಸೂರು ಸೆಟ್ನ ತಮಾಷೆ ಘಟನೆಗಳ ಬಗ್ಗೆ ಅವರು ಹಂಚಿಕೊಂಡ ಮಾತುಗಳ ವಿವರ ಇಲ್ಲಿದೆ.

Interview: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮಧುಮಿತಾ ಗೌಡ ಅವರು ಎರಡು ವರ್ಷಗಳ ವಿರಾಮದ ಬಳಿಕ ಮತ್ತೆ ಕನ್ನಡ ಧಾರಾವಾಹಿ ಲೋಕಕ್ಕೆ ಮರಳಿದ್ದಾರೆ. ತಮಿಳು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಓ ಮನಸೇ’ ಧಾರಾವಾಹಿಯ ಮೂಲಕ ಕನ್ನಡಿಗರ ಮುಂದೆ ಬಂದಿದ್ದಾರೆ. ಹೊಸ ಕಥಾಹಂದರ, ವಿಭಿನ್ನ ಪಾತ್ರ ಮತ್ತು ಎರಡು ತಲೆಮಾರಿನ ಪ್ರೇಮಕಥೆಯ ಸುತ್ತ ಸಾಗುವ ಈ ಧಾರಾವಾಹಿಯ ಬಗ್ಗೆ ಮಧುಮಿತಾ ಗೌಡ ಅವರು ಹಂಚಿಕೊಂಡಿರುವ ಆಸಕ್ತಿದಾಯಕ ಮಾತುಗಳು ಮತ್ತು ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.

‘ಲಕ್ಷ್ಮೀ ಟಿಫನ್ ರೂಮ್’ ಹಾಗೂ ಸ್ಟಾರ್ ವಿಜಯ್ ಬಳಿಕ ಸ್ಟಾರ್ ಸುವರ್ಣದ ‘ಓ ಮನಸೇ’ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದೀರಿ, ಹೇಗನಿಸುತ್ತಿದೆ?

ಮಧುಮಿತಾ ಗೌಡ: ನನಗಂತೂ ತುಂಬಾ ಖುಷಿ ಇದೆ. ಅದು ಅಲ್ಲದೆ ಆಫ್ಟರ್ ಟೂ ಇಯರ್ಸ್ ಮತ್ತೆ ಕನ್ನಡ ಸೀರಿಯಲ್ ಮಾಡ್ತಿರೋದು ಇನ್ನೂ ತುಂಬಾ ಖುಷಿ ಇದೆ. ಕೆಲವೊಬ್ಬರು ಕೇಳ್ತಿದ್ರು ಏನು ತಮಿಳ್ ಸೀರಿಯಲ್‌ಗೆ ಹೋದ್ರಿ ಅಲ್ಲೇ ಸೆಟಲ್ ಆಗ್ಬಿಡ್ತೀರಾ ಅಂತ. ಖಂಡಿತವಾಗ್ಲೂ ಇಲ್ಲ, ಅಟ್ ದಿ ಎಂಡ್ ಆಫ್ ದಿ ಡೇ ನಾವು ಕನ್ನಡದವರು ಅಂಡ್ ನಾವು ಏನೇ ಮಾಡಿ ಕನ್ನಡಕ್ಕೆ ವಾಪಸ್ ಬರ್ಲೇಬೇಕಾಗುತ್ತೆ. ಸೋ ‘ಓ ಮನಸೆ’ ಮುಖಾಂತರ ಬರ್ತಿರೋದು ನನಗೆ ತುಂಬಾ ಖುಷಿ ಇದೆ.

‘ಓ ಮನಸೇ’ ಕಥೆ ಮತ್ತು ‘ರಾಗ’ ಪಾತ್ರ ಕೇಳಿದ ತಕ್ಷಣ ಒಪ್ಪಿಕೊಳ್ಳಲು ಕಾರಣವೇನು?

ಮಧುಮಿತಾ ಗೌಡ: ಆಕ್ಚುವಲಿ ಇದಕ್ಕೂ ಮೊದಲು ಒಂದು ಎರಡು ವರ್ಷ ಗ್ಯಾಪ್‌ನಲ್ಲಿ ತುಂಬಾ ಪ್ರಾಜೆಕ್ಟ್ಸ್ ಬಂದಿತ್ತು. ಆದ್ರೆ ನನಗೆ ಕಥೆ ಯಾವುದು ಅಷ್ಟೊಂದು ಇಷ್ಟ ಆಗಿಲ್ಲ. ಅಂದ್ರೆ ಎಲ್ಲಾ ನಾರ್ಮಲ್ ಸ್ಟೋರಿ ತರನೇ ಇತ್ತು. ಬಟ್ ಇದು ಕಥೆನೂ ಸ್ವಲ್ಪ ವಿಭಿನ್ನವಾಗಿದೆ, ಕಥೆ ಆಗಿರ್ಲಿ ಅಥವಾ ಪಾತ್ರಗಳಾಗಿರ್ಲಿ ಎಲ್ಲಾ ಕ್ಯಾರೆಕ್ಟರ್ಸ್‌ಗೂನು ಅಷ್ಟೊಂದು ವೇಟೇಜ್ ಇದೆ. ಅಂಡ್ ಇವಾಗ ನೀವು ನೋಡ್ತಿದ್ದ ಹಾಗೆ ಪ್ರೋಮೋದಲ್ಲಿ ನೋಡಿದಾಗ್ಲೇ ನಿಮಗೆ ಒಂದು ಎರಡು ಕಥೆ ಟ್ರ್ಯಾಕ್ ಹೋಗ್ತಿರುತ್ತೆ. ಅಲ್ಲಿ ಒಂದು 90ಸ್ ಜನರೇಷನ್ ಲವ್ ಹೋಗ್ತಿರುತ್ತೆ, ಇಲ್ಲಿ ನಮ್ದು ಒಂದು ಜೆನ್ ಝೀ (Gen Z) ಜನರೇಷನ್ ಲವ್ ಹೋಗ್ತಿರುತ್ತೆ. ಸೊ ಈ ಕಾನ್ಸೆಪ್ಟ್ ತುಂಬಾ ಡಿಫರೆಂಟ್ ಆಗಿತ್ತು ಅಂಡ್ ಯೂನಿಕ್ ಆಗಿತ್ತು.

ನೀವು ಇಷ್ಟು ದಿವಸ ನೋಡಿದ್ರೆ ಇತರ ಯಾವುದು ಅಷ್ಟೊಂದು, ಈ ತರದ ಒಂದು ಕಾನ್ಸೆಪ್ಟ್‌ನಲ್ಲಿ ಯಾವ ಸೀರಿಯಲ್ ಬಂದಿರಲಿಲ್ಲ. ತುಂಬಾ ಚೆನ್ನಾಗಿದೆ ಇದೊಂದು ಕಥೆ, ಒಂದು ಎರಡು ಜನರೇಷನ್ ಲವ್ ತೋರಿಸ್ತಿದೆ. ಅಂಡ್ ನನ್ನ ಪಾತ್ರ ರಾಗ ಪಾತ್ರದ ಬಗ್ಗೆ ಹೇಳ್ಬೇಕು ಅಂದ್ರೆ ತುಂಬಾ ಆಸೆ ಇಟ್ಕೊಂಡಿರೋ ಒಂದು ಹುಡುಗಿ. ಅವಳು ಇವಾಗ ನಾರ್ಮಲ್ ಒಂದು ಹುಡುಗಿ ಲೈಫ್‌ನಲ್ಲಿ ಎಷ್ಟೆಲ್ಲಾ ಆಸೆ ಇಟ್ಕೊಂಡಿರ್ತಾಳೆ, ಆದ್ರೆ ಆ ಆಸೆನ ನಾವು ಕಂಪ್ಲೀಟ್ ಮಾಡೋದಕ್ಕೂ ಮೊದಲು ಎಷ್ಟೆಲ್ಲಾ ಅಡೆತಡೆಗಳು ಬರುತ್ತೆ, ಅದನ್ನೆಲ್ಲಾ ದಾಟ್ಕೊಂಡು ಅವಳು ಸಾಧಿಸ್ತಾಳೆ. ಹೇಗೆ ಸಾಧಿಸ್ತಾಳೆ ಅನ್ನೋದೇ ಒಂದು ಕಥೆ ಆಗಿರುತ್ತೆ. ಅದರಿಂದ ನನಗೆ ತುಂಬಾ ಖುಷಿಯಾಗಿ ಒಪ್ಕೊಂಡೆ.

‘ರಾಗ’ ಪಾತ್ರದ ಗುಣಕ್ಕೂ, ನಿಮ್ಮ ನಿಜ ಜೀವನದ ಗುಣಕ್ಕೂ ಏನು ಹೋಲಿಕೆ ಇದೆ?

ಮಧುಮಿತಾ ಗೌಡ: ರಾಗ ಪಾತ್ರದ್ಗೂ ನನ್ಗೂ ಅಂದ್ರೆ ಏನು ಅದ್ರ ಅವಳು ಅವಳು ತುಂಬಾ ಖುಷಿಯಾಗಿರ್ತಾಳೆ ಅಂಡ್ ಅವಳ್ ಸುತ್ತ ಇರೋರ್ನು ಒಂದು ಖುಷಿಯಾಗಿ ಇಟ್ಕೊಂತಾಳೆ. ಅದು ಒಂದು ನನ್ನ ಲೈಫ್‌ಅಲ್ಲೂ ಇದೆ. ಬಟ್ ಒಂದು ಇಲ್ಲ ಅನ್ನೋದು ಅಂದ್ರೆ ಅವಳು ಯಾವದ್ರು ಒಂದು ಏನಾದ್ರೂ ಒಂದು ಪ್ರಾಬ್ಲಮ್ ಬಂದ್ರೆ ಅವಳಿಗೆ ಅವಳು ಟಕ್ಕಂತ ಕ್ವೆಶ್ಚನ್ ಮಾಡ್ತಾಳೆ ಈಸಿಯಾಗಿ. ಅಂದ್ರೆ ಅಷ್ಟು ಬೋಲ್ಡ್ ಆಗಿರ್ತಾಳೆ. ಅವಳ್ ಎದುರುಗಡೆ ಆಪೋಸಿಟ್ ಇರೋ ಪರ್ಸನ್ ಅಂದ್ರೆ ಎಷ್ಟೇ ದೊಡ್ಡವರಾಗಿರ್ಲಿ, ದೊಡ್ಡ ವ್ಯಕ್ತಿ ಆಗಿರ್ಲಿ ಅವಳು ಕೇರ್ ಮಾಡಲ್ಲ. ಅವ್ರ್ ತಪ್ಪು ಮಾತಾಡ್ತಿದ್ರೆ ತಪ್ಪು ಅಂತ ಕ್ವೆಶ್ಚನ್ ಮಾಡ್ತಾಳೆ. ಬಟ್ ನಮ್ಮ ಲೈಫ್‌ಅಲ್ಲಿ ಅದು ಇನ್ನೂ ಬಂದಿಲ್ಲ. ಅದು ಬರ್ಬೇಕು ಅಂತ ಕೇಳ್ಕೊಂತೀನಿ ಅಷ್ಟೇ.

ಅಪ್ಪನ ವಿರೋಧದ ನಡುವೆಯೂ ಗುರಿ ಬೆನ್ನತ್ತುವ ‘ರಾಗ’ ಪಾತ್ರದ ಎಮೋಷನಲ್ ಸೀನ್‌ಗಳು ಎಷ್ಟು ಸವಾಲಾಗಿದ್ದವು?

ಮಧುಮಿತಾ ಗೌಡ: ಹಾ, ಆಕ್ಚುವಲಿ ನಾನು ಹೇಳ್ಲೇಬೇಕು. ಯಾಕಂದ್ರೆ ನನ್ನ ಲೈಫ್‌ಅಲ್ಲಿ ಆ ತರ ಇದ್ದಿದ್ದೇ ಇಲ್ಲ. ನಮ್ಮನೇಲಿ ನನ್ನ ಪೇರೆಂಟ್ಸ್ ಆಗ್ಲಿ, ಹೇಳ್ಬೇಕು ಅಂದ್ರೆ ಎಸ್ಪೆಷಲಿ ನಮ್ಮಪ್ಪ, ಇದುವರೆಗೂ ಇವಾಗ ನಾನು ಏನೇ ಮಾಡ್ತೀನಿ ಅಂದ್ರೆ “ಓಕೆ ಅಮ್ಮ, ಓಕೆ ಅಮ್ಮ, ಓಕೆ ಅಮ್ಮ” ಅಂತ ಹೇಳ್ತಿರ್ತಾರೆ. ಬಟ್ ಆದ್ರೆ ಇಲ್ಲಿ ಸೀರಿಯಲ್ ಮಾಡುವಾಗ ಕಂಪ್ಲೀಟ್ಲಿ ಡಿಫರೆಂಟ್ ಇತ್ತು. ಇವಾಗ ಕೆಲವೊಬ್ರಿಗೆ ಲೈಫ್‌ಅಲ್ಲಿ ಅವರು ಎಕ್ಸ್‌ಪೀರಿಯನ್ಸ್ ಮಾಡಿದ್ರೆ ಅವ್ರಿಗೆ ಈಸಿಯಾಗಿ ಅದು ಕನೆಕ್ಟ್ ಆಗುತ್ತಲ್ಲ.

ಯಾಕಂದ್ರೆ ಅವರ ಮನೇಲೂ ಈ ತರ ಏನಾದ್ರೂ ಒಂದು ಹೇಳುವಾಗ, ಇವಾಗ ನನ್ನ ಇದೇ ತಗೊಳೋಣ, ನಾನೇನಾದ್ರೂ ಸಿನಿಮಾ ಇಂಡಸ್ಟ್ರಿಗೆ ಹೋಗ್ಬೇಕು ಅಂದಾಗ ಪೇರೆಂಟ್ಸ್ ಏನಾದ್ರೂ ಅದನ್ನ “ಇಲ್ಲ ಬೇಡ” ಅಂತ ಹೇಳಿದ್ರೆ ನನಗೆ ಅದು ಈಸಿಯಾಗಿ ಕನೆಕ್ಟ್ ಆಗಿರ್ತಿತ್ತು. ನನಗೆ ಆ ತರ ಇಲ್ವೇ ಇಲ್ಲ. ನನಗೆ ಹೇಳ್ಬೇಕು ಅಂದ್ರೆ ನನಗಿಂತ ನನ್ನ ಪೇರೆಂಟ್ಸ್ ಸಪೋರ್ಟೇ ಜಾಸ್ತಿ ಇದೆ. ಸೊ ನನಗೆ ಅದು ಅಷ್ಟೊಂದು ಕನೆಕ್ಟ್ ಆಗ್ಲಿಲ್ಲ, ಬಟ್ ಆಕ್ಟಿಂಗ್ ವೈಸ್ ಐ ಗೇವ್ ಮೈ ಬೆಸ್ಟ್.

ಕನ್ನಡ ಮತ್ತು ತಮಿಳು ಕಿರುತೆರೆ ವರ್ಕಿಂಗ್ ಸ್ಟೈಲ್‌ನಲ್ಲಿ ನಿಮಗೆ ಕಂಡ ವ್ಯತ್ಯಾಸವೇನು?

ಮಧುಮಿತಾ ಗೌಡ: ಆಕ್ಚುವಲಿ ತುಂಬಾ ಅಂದ್ರೆ ತುಂಬಾ ಡಿಫರೆನ್ಸ್ ಇದೆ. ಏನಿದೆ ಅಂದ್ರೆ ನಾನು ಕನ್ನಡದಲ್ಲಿ ಮಾಡಿ ತಮಿಳಿಗೆ ಬಂದಾಗ ಇಲ್ಲೆಲ್ಲಾ ಫುಲ್ ಕಂಪ್ಲೀಟ್ಲಿ ಪ್ರಾಂಪ್ಟ್ ಇದೆ. ಅವರು ಪ್ರಾಂಪ್ಟ್ ಮಾಡಿರ್ತಾರೆ ನಾವು ಅದನ್ನ ರಿಪೀಟ್ ಮಾಡ್ಕೊಂಡು ಹೋಗ್ಬೇಕಾಗುತ್ತೆ. ನನಗೆ ಅಲ್ಲಿಂದ ಬಂದಾಗ ಫುಲ್ ಶಾಕ್ ಇತ್ತು. ಯಾಕಂದ್ರೆ ನಮ್ಮ ವರ್ಕಿಂಗ್ ಪ್ಯಾಟರ್ನ್ ಡಿಫರೆಂಟ್ ಇದೆ ಅಲ್ವಾ. ನಮ್ ಬಂದು ನಾವು ಸೀನ್ ಪೇಪರ್ ತಗೊಂಡು ಅದನ್ನೆಲ್ಲ ಓದಿ, ಎಮೋಷನ್ಸ್ ನೆಲ್ಲ ಕ್ಯಾರಿ ಮಾಡಿ, ಸಿಂಗಲ್ ಟೇಕ್ ಇದ್ರೆ ಸಿಂಗಲ್ ಟೇಕ್ ಅಂದ್ರೆ ಸಿಂಗಲ್ ಶಾಟ್ ಇದ್ರೆ ಸಿಂಗಲ್ ಶಾಟ್ ಅಲ್ಲಿ ಓಕೆ ಮಾಡಿ, ಅದೊಂದು ಕಂಪ್ಲೀಟ್ ಪ್ಯಾಟರ್ನ್ ಇದೆ.

ಆಮೇಲೆ ನಾವು ಒಂದೊಂದು ಪದ ಬಿಡೋ ಅಷ್ಟೇ ಫಂಬಲ್ ಆಗ್ದೆ, ಯಾಕಂದ್ರೆ ಲೈವ್ ಮೈಕ್ ಇರುತ್ತಲ್ವಾ ನಮಗೆ, ಡಬ್ಬಿಂಗ್ ಇರಲ್ಲ. ಸೊ ಒಂದು ಕಂಪ್ಲೀಟ್ ಒಂದು ಪರ್ಫೆಕ್ಟ್ ಪ್ಯಾಟರ್ನ್ ಫಾಲೋ ಮಾಡ್ತಿರ್ತೀವಿ. ಬಟ್ ಈ ಕಡೆ ಬೇರೆ ಲ್ಯಾಂಗ್ವೇಜ್ ಗೆ ಬಂದಾಗ ಆ ತರ ಇಲ್ಲ. ಇಲ್ಲಿ ಡಬ್ಬಿಂಗ್ ಇದೆ ಅಂಡ್ ಪ್ರಾಂಪ್ಟ್ ಇದೆ ಎಲ್ಲಾ. ಐ ವಾಸ್ ಲೈಕ್ “ಓ ಏನಿದು, ಇವರು ಹೇಳ್ತಿರ್ತಾರೆ ನಾವು ರಿಪೀಟ್ ಮಾಡ್ಬೇಕಾ ಅಷ್ಟೇನಾ” ಆ ತರ ಇತ್ತು ನನಗೆ. ಬಟ್ ಕಂಪ್ಲೀಟ್ಲಿ ಡಿಫರೆಂಟ್ ಇದೆ. ಹೇಳ್ಬೇಕು ಅಂದ್ರೆ ನಮ್ದೊಂದು ಪರ್ಫೆಕ್ಟ್ ಪ್ಯಾಟರ್ನ್ ಫಾಲೋ ಮಾಡ್ತಿರ್ತೀವಿ. ಇದ್ರಿಂದ ಇಲ್ಲಿಗೆ ಬಂದಾಗ ಒಂದು ಸ್ವಲ್ಪ ಹೊರಗೆ ಬರೋ ತರ ಫೀಲ್ ಆಗುತ್ತೆ.

‘ಓ ಮನಸೇ’ ಸೆಟ್‌ನಲ್ಲಿ ನಡೆದ ಮರೆಯಲಾಗದ ತಮಾಷೆಯ ಘಟನೆ ಯಾವುದು?

ಮಧುಮಿತಾ ಗೌಡ: ತಮಾಷೆ ಘಟನೆ ಅಂದ್ರೆ… ಯಾವ್ದಿದೆ? ಏನು ಅಂದ್ರೆ, ಇದೇನು ಮೈಸೂರು ಶೂಟ್ ಮಾಡಿದ್ವಿ ಒಂದು ದಿವಸ ಮೈಸೂರು ಶೂಟು. ಅಲ್ಲಿ ಹೇಳ್ಬೇಕು ಅಂದ್ರೆ ನನ್ನ ಲೈಫ್‌ಅಲ್ಲೇ ನಾನು ಫಸ್ಟ್ ಟೈಮ್ ಮೈಸೂರಿಗೆ ಹೋಗಿರೋದು. ಫಸ್ಟ್ ಟೈಮ್, ಅಂದ್ರೆ ನಮ್ ಮನೆಯಲ್ಲಿ ಎಲ್ಲಾ ಹೋಗಿದ್ದಾರೆ, ಬಟ್ ನಾನು ಹೋಗಿದ್ದು ಫಸ್ಟ್ ಟೈಮು. ಅದ್ರಲ್ಲಿ ಏನು ಹೇಳ್ತಾರೆ ಇವಾಗ ನಾವು ಯಾವುದಾದ್ರೂ ಒಂದು ಊರಿಗೆ ಹೋದ್ರೆ ಅದೊಂದು ಫಸ್ಟ್ ಟೈಮ್ ಹೋಗಿದ್ದು ಒಂದೇನೋ ಒಂದು ಸ್ಪೆಷಲ್ ಇನ್ಸಿಡೆಂಟ್ ಇರುತ್ತಲ್ಲ, ಬಟ್ ನನ್ ಲೈಫ್‌ಅಲ್ಲಿ ಆ ತರ ಇಲ್ವೇ ಇಲ್ಲ. ಮೈಸೂರಿಗೆ ಹೋದ್ರೆ ಫುಲ್ ಹೆಕ್ಟಿಕ್ ಶೂಟ್ ಅವತ್ತಂತೂ.

ಏನು ಅಂದ್ರೆ, ಇವಾಗ ಮನೆ ಬಿಟ್ಟು ಓಡಿ ಬರೋ ಸೀನು ಅದೇ ಬರ್ತಿದೆ ಅಲ್ಲ, ಪ್ರೋಮೋ ಬಂತಲ್ವಾ, ಅದು ಬಂದು ಆ ಸೀನು. ಅದು ನನ್ನ ಮನೆಯಿಂದ ಓಡಿ ಬರುವಾಗ ಚಪ್ಪಲಿ ಸಹ ಹಾಕಿರಲ್ಲ. ಆ ತರ ಚಪ್ಪಲಿ ಇಲ್ದೇ ಫುಲ್ ರೋಡ್‌ಅಲ್ಲಿ ಎಲ್ಲಾ ಓಡ್ತಿದೆ. ದಟ್ ವಾಸ್ ಲೈಕ್, ಓಹ್ ಅಯ್ಯೋ! ಎಲ್ರೂ, ಎಲ್ರೂ ನಗಾಡ್ತಿದ್ರು ಆದ್ರೆ ನಮ್ ಸೆಟ್‌ನಲ್ಲಿ, ನನ್ನ ಜೊತೆ ಇರೋರು ಅವರೆಲ್ಲ ನಗಾಡ್ತಿದ್ರು, “ಅಯ್ಯೋ ನಿನಗೆ ಎಂತ ಒಂದು ಇನ್ಸಿಡೆಂಟ್ ಇದು”. ಯಾಕಂದ್ರೆ ಎಲ್ರಿಗೂ ಯಾವುದಾದ್ರೂ ಒಂದು ಊರಿಗೆ ಹೋದ್ರೆ ಒಂದು ಚೆನ್ನಾಗಿರೋ ಇನ್ಸಿಡೆಂಟ್ ಇರುತ್ತೆ. ಬಟ್ ನನಗಂತೂ ಹಾಗಿದ್ಲಿಲ್ಲ. ಅದನ್ನ ಮರಿಯೋಕ್ಕೆ ಆಗಲ್ಲ.

ಓದು-ಕರಿಯರ್‌ಗಿಂತ ಮದುವೆಗೆ ಹೆಚ್ಚು ಒತ್ತು ನೀಡುವವರಿಗೆ ‘ರಾಗ’ ಪಾತ್ರದ ಮೂಲಕ ಏನು ಹೇಳುತ್ತೀರಿ?

ಮಧುಮಿತಾ ಗೌಡ: ಹೇಳ್ಬೇಕು ಅಂದ್ರೆ, ಇವಾಗ ಇಟ್ಸ್ ಕಂಪ್ಲೀಟ್ಲಿ ಅವ್ರ್ ಇದು, ಬಟ್ ನಾನು ಹೇಳೋದಾಗಿದ್ರೆ ದಯವಿಟ್ಟು ಎಲ್ರೂ ಓದಿ ಅಂದ್ರೆ ಅವ್ರ್ ಓದೋದಾಗಿರ್ಲಿ ಅಥವಾ ನೀವು ಯಾವುದೇ ಪ್ರೊಫೆಷನ್ ಚೂಸ್ ಮಾಡಿದ್ರೂನು ಆ ಪ್ರೊಫೆಷನ್ ಅಲ್ಲಿ ನೀವು ಬಂದು ಒಂದು ಹೈಟ್ಸ್ ಅಲ್ಲಿ ಇರಬೇಕು, ನಿಮ್ಮ ನೀವು ಸಾಧನೆ ಮಾಡಬೇಕು, ನೀವು ಇಂಡಿಪೆಂಡೆಂಟ್ ಆಗಿ ಇರಬೇಕು. ಯಾರ್ ಮೇಲೂ ಡಿಪೆಂಡ್ ಆಗ್ದೆ ನೀವು ಇಂಡಿಪೆಂಡೆಂಟ್ ಆಗಿದ್ದೀರಾ ಅಂದ್ರೆ ನೀವು ಯಾವ್ ಕೆರಿಯರ್, ಯಾವ್ ಪ್ರೊಫೆಷನ್ ಚೂಸ್ ಮಾಡಿದ್ರೂ ಓಕೆನೇ, ಬಟ್ ಯು ಹ್ಯಾವ್ ಟು ಬಿ ಇಂಡಿಪೆಂಡೆಂಟ್ ಆಸ್ ಎ ವುಮೆನ್, ಅದು ಈ ಜನರೇಷನ್ ಅಲ್ಲಿ. ದಟ್ಸ್ ವಾಟ್, ಅಷ್ಟೇ ಹೇಳೋಕೆ ಇಷ್ಟ ಪಡ್ತೀನಿ.

ಮುಂದಿನ ದಿನಗಳಲ್ಲಿ ‘ಓ ಮನಸೇ’ ಕಥೆಯಲ್ಲಿ ಯಾವ ಹೊಸ ತಿರುವುಗಳಿರಲಿವೆ?

ಮಧುಮಿತಾ ಗೌಡ: ಹೌದು. ಇದೊಂದು ಹೊಸ ಕಥೆ, ಮತ್ತೆ ಒಂದು ಹೊಸ ಪಾತ್ರದ ಮೂಲಕ ಬರ್ತಾ ಇದ್ದೀವಿ. ಆಮೇಲೆ ನಮ್ಮ ಇಡೀ ತಂಡನು ಅಷ್ಟೇ ತುಂಬಾ ಇದ್ರಲ್ಲಿ ತುಂಬಾ ಡಿಫರೆಂಟ್ ಡಿಫರೆಂಟ್ ಕ್ಯಾರೆಕ್ಟರ್ಸ್ ಇದೆ, ಡಿಫರೆಂಟ್ ಡಿಫರೆಂಟ್ ಕ್ಯಾರೆಕ್ಟರ್ಸ್ ನ ಅಷ್ಟು ಚೆನ್ನಾಗಿ ಪ್ಲೇ ಮಾಡ್ತಿದ್ದಾರೆ. ತುಂಬಾ ಸೀನಿಯರ್ ಆರ್ಟಿಸ್ಟ್ ಇದ್ದಾರೆ, ವೆಲ್ ನೋನ್ ಆರ್ಟಿಸ್ಟ್ ಇದ್ದಾರೆ. ನಾವೆಲ್ಲ ಒಂದು ಹೊಸ ಒಂದು ಟೀಮ್ ಆಗಿ ಬರ್ತಾ ಇದ್ದೀವಿ. ನಮ್ಮೆಲ್ಲರಿಗೂ ಇಷ್ಟು ದಿವಸ ಅವರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲೆಲ್ಲ ಇಷ್ಟೇ, ಎಷ್ಟು ಪ್ರೀತಿ ಕೊಟ್ಟಿದ್ದೀರೋ ನಮ್ಮ ಪ್ರಾಜೆಕ್ಟ್ ಗೂ ಅಷ್ಟೇ ಪ್ರೀತಿ ಕೊಡಿ ಅಂತ ಕೇಳ್ಕೊತಾ ಇದ್ದೀವಿ. ಅಷ್ಟೇ, ಥ್ಯಾಂಕ್ ಯು.