☔ Weather
Bengaluru: ☀️ 21°C | AQI 90
Mysore: ☀️ 22°C | AQI 91
Mangalore: 🌤️ 26°C | AQI 139
Bengaluru: ☀️ 21°C | AQI 90
☔ Weather
Bengaluru: ☀️ 21°C | AQI 90
Mysore: ☀️ 22°C | AQI 91
Mangalore: 🌤️ 26°C | AQI 139
Bengaluru: ☀️ 21°C | AQI 90

RAM MANDIR : ರಾಮನ ಹೆಸರಿನಲ್ಲಿ ಹಣ ಲೂಟಿ ಮಾಡಿದವರಿಗೆ ರಾಮನೇ ಶಿಕ್ಷೆ ಕೊಡಲಿ – ಖರ್ಗೆ ಕೆಂಡ

ಮಲ್ಲಿಕಾರ್ಜುನ ಖರ್ಗೆ ಶ್ರೀರಾಮ ಮಂದಿರದ (Ram mandir) ಕಾಣಿಕೆ ಹಣ ದುರುಪಯೋಗ ಪ್ರಕರಣಮುಂದಿಟ್ಟುಕೊಂಡು ಬಿಜೆಪಿ & ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ

ಮುಖ್ಯಾಂಶಗಳು

  • ರಾಮಮಂದಿರವೇ ಅಸ್ತ್ರ..?
  • ಹುಂಡಿ ಕಳುವು ಕೇಸ್ ಪರಿಣಾಮ ಬೀರುತ್ತಾ..?
  • ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ರಾಮಬಾಣ
ಬಿಹಾರ: ಪಾಟ್ನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ (Ram mandir) ಕಾಣಿಕೆ ಹಣ ದುರುಪಯೋಗ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶ್ರೀರಾಮನ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಿದವರಿಗೆ ಸ್ವತಃ ಶ್ರೀರಾಮನೇ ಶಿಕ್ಷೆ ನೀಡುತ್ತಾನೆ ಎಂದು ಅವರು ಹೇಳಿದರು. ಮಂದಿರದಲ್ಲಿ ನಡೆಯುತ್ತಿರುವ ಈ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ತಪ್ಪು ಮಾಡಿದವರಿಗೆ ಪಾಠ ಕಲಿಸಲು ಶ್ರೀರಾಮನು ಕಣ್ಣು ತೆರೆಯಬೇಕು ಎಂದು ಅವರು ಪ್ರಾರ್ಥಿಸಿದರು. ಮತ್ತೆ ರಾಜಕೀಯ ಅಸ್ತ್ರವಾದ ರಾಮಮಂದಿರ..! ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕೃತ ಖಾತೆಗೆ ಸೇರಬೇಕಿದ್ದ ಭಕ್ತರ ಕಾಣಿಕೆ ಹಣವನ್ನು ಮಧ್ಯದಲ್ಲಿಯೇ ಕಬಳಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಟ್ರಸ್ಟ್ ಈ ಹಿಂದೆ ಎಫ್‌ಐಆರ್ ದಾಖಲಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆಂತರಿಕ ಲೆಕ್ಕಪರಿಶೋಧನೆಯ ವೇಳೆ ಕಾಣಿಕೆ ಹಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಆರಂಭದಲ್ಲಿ ಹಲವರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಹೆಚ್ಚಿನವರು ಕಾಣಿಕೆ ಹಣವನ್ನು ಎಣಿಸುವ ಮತ್ತು ನಿರ್ವಹಣೆ ಮಾಡುವ ಕೆಲಸದಲ್ಲಿದ್ದ ಸಿಬ್ಬಂದಿಯಾಗಿದ್ದಾರೆ. ಈ ವಿವಾದವನ್ನೇ ಆಧಾರವಾಗಿಟ್ಟುಕೊಂಡು ಖರ್ಗೆ ಅವರು ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಆರ್‌ಎಸ್‌ಎಸ್ ಸಂಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ : ಮೋದಿನೂ ಹೋಗ್ಬೇಕು.. ಅವರಪ್ಪನೂ ಹೋಗ್ಬೇಕು- ಖರ್ಗೆ ಹೇಳಿಕೆಯಿಂದ ರಾಜಕೀಯ ಕದನ ತೀವ್ರ ಈ ಪ್ರಕರಣ ಕೇವಲ ಹಣದ ಕಳವಿನ ವಿಷಯವಾಗಿ ಉಳಿದಿಲ್ಲ, ಅದು ಭಕ್ತರ ನಂಬಿಕೆ ಮತ್ತು ಧಾರ್ಮಿಕ ಸಂಸ್ಥೆಗಳ ಪಾರದರ್ಶಕತೆಗೆ ಸಂಬಂಧಿಸಿದ ಪ್ರಶ್ನೆಯಾಗಿ ಬೆಳೆದಿದೆ. ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆ ಹಣ ಸರಿಯಾದ ಖಾತೆಗೆ ತಲುಪದಿದ್ದರೆ ಅದು ಜನರ ವಿಶ್ವಾಸಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥ ಸಿಬ್ಬಂದಿ ಮಾತ್ರವಲ್ಲದೆ ಮೇಲ್ವಿಚಾರಣೆ ಮಾಡಬೇಕಿದ್ದ ವ್ಯವಸ್ಥೆಯ ಹೊಣೆಗಾರಿಕೆಯೂ ಚರ್ಚೆಗೆ ಬರುತ್ತದೆ. ಖರ್ಗೆ ಅವರ ಹೇಳಿಕೆ ಧಾರ್ಮಿಕ ಭಾವನೆಯನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುವ ಪ್ರಯತ್ನವೇ ಅಥವಾ ನಿಜವಾದ ಭ್ರಷ್ಟಾಚಾರದ ವಿರುದ್ಧದ ಧ್ವನಿಯೇ ಎಂಬುದು ಚರ್ಚಾಸ್ಪದ. ಆದರೆ ಭಕ್ತರ ಹಣದ ಸುರಕ್ಷತೆಗಾಗಿ ಕಟ್ಟುನಿಟ್ಟಾದ ಲೆಕ್ಕಪರಿಶೋಧನೆ, ಸಿಸಿಟಿವಿ ಮೇಲ್ವಿಚಾರಣೆ ಮತ್ತು ಸ್ವತಂತ್ರ ತನಿಖೆ ಅಗತ್ಯ ಎಂಬ ಅಂಶವನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.