☔ Weather
Bengaluru: ☀️ 20°C | AQI 89
Mysore: ☀️ 21°C | AQI 88
Mangalore: ☀️ 25°C | AQI 134
Bengaluru: ☀️ 20°C | AQI 89
☔ Weather
Bengaluru: ☀️ 20°C | AQI 89
Mysore: ☀️ 21°C | AQI 88
Mangalore: ☀️ 25°C | AQI 134
Bengaluru: ☀️ 20°C | AQI 89

SIR : 4 ತಿಂಗಳ ಪರಿಶೀಲನೆ ಅಂತ್ಯ, ನಾಳೆ ರಾಜ್ಯದ ಅಂತಿಮ ಮತದಾರರ ಪಟ್ಟಿ ಪ್ರಕಟ

Image of SIR process in Karnataka
ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸತವಾಗಿ ಸಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಂತಿಮ ಹಂತ ತಲುಪಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಪೂರ್ಣ
  • ನಾಳೆ ಅಂತಿಮ ಪಟ್ಟಿ ಪ್ರಕಟ
  • ಎಷ್ಟು ಮಾಯದಾರರು ಔಟ್..?
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸತವಾಗಿ ಸಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಂತಿಮ ಹಂತ ತಲುಪಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಕ್ಟೋಬರ್ 27ರ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಈ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಕರಡು ಪಟ್ಟಿ ಬಿಡುಗಡೆಯ ನಂತರ ಸಲ್ಲಿಕೆಯಾಗಿದ್ದ ಎಲ್ಲಾ ಹಕ್ಕುಗಳು, ಆಕ್ಷೇಪಣೆಗಳು ಮತ್ತು ನೋಟಿಸ್‌ಗಳಿಗೆ ಸಂಬಂಧಿಸಿದ ಪರಿಶೀಲನೆ ಹಾಗೂ ವಿಲೇವಾರಿ ಕಾರ್ಯವನ್ನು ಅಕ್ಟೋಬರ್ 22ರಂದೇ ಮುಗಿಸಲಾಗಿದೆ. ನಾಳೆ ಅಂತಿಮ ಪಟ್ಟಿ ಪ್ರಕಟ..!

ಕರಡು ಪಟ್ಟಿಯಲ್ಲಿ ಒಟ್ಟು 4.50 ಕೋಟಿ ಮತದಾರರ ಹೆಸರುಗಳಿದ್ದವು. ಅವರಲ್ಲಿ ನೋ ಮ್ಯಾಪಿಂಗ್ ಮತ್ತು ತಾರ್ಕಿಕ ವ್ಯತ್ಯಾಸಗಳ ಕಾರಣದಿಂದ 43.82 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಆ ಎಲ್ಲ ನೋಟಿಸ್‌ಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿ ನಿಯಮದಂತೆ ವಿಚಾರಣೆ ನಡೆಸಲಾಗಿದೆ. ಕರಡು ಪಟ್ಟಿಯಿಂದ ಎಷ್ಟು ಅನರ್ಹ ಅಥವಾ ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಹೊಸದಾಗಿ ಎಷ್ಟು ಮತದಾರರನ್ನು ಸೇರಿಸಲಾಗಿದೆ ಎನ್ನುವ ನಿಖರ ಮಾಹಿತಿ ನಾಳೆ ಪ್ರಕಟವಾಗುವ ಅಂತಿಮ ಪಟ್ಟಿಯಲ್ಲಿಯೇ ಹೊರಬೀಳಲಿದೆ.

ಇದನ್ನೂ ಓದಿ : ಮೋದಿನೂ ಹೋಗ್ಬೇಕು.. ಅವರಪ್ಪನೂ ಹೋಗ್ಬೇಕು- ಖರ್ಗೆ ಹೇಳಿಕೆಯಿಂದ ರಾಜಕೀಯ ಕದನ ತೀವ್ರ ಈ ಪ್ರಕ್ರಿಯೆ ರಾಜ್ಯದ ಚುನಾವಣಾ ವ್ಯವಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ. ದೀರ್ಘಕಾಲದಿಂದ ಮತದಾರರ ಪಟ್ಟಿಯಲ್ಲಿರುವ ನಕಲಿ ಮತ್ತು ಅನರ್ಹ ಹೆಸರುಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿತ್ತು. ಈಗ ಅಂತಿಮ ಪಟ್ಟಿ ಬಿಡುಗಡೆಯಾದ ನಂತರ ಆ ಅನುಮಾನಗಳಿಗೆ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆ ಇದೆ. ಅದೇ ವೇಳೆ, ನೋಟಿಸ್ ಪಡೆದ ಲಕ್ಷಾಂತರ ಮತದಾರರಲ್ಲಿ ಎಷ್ಟು ಜನರ ಹೆಸರು ಉಳಿಯುತ್ತದೆ ಮತ್ತು ಎಷ್ಟು ಜನರ ಹೆಸರು ಕೈಬಿಡಲಾಗುತ್ತದೆ ಎಂಬುದು ರಾಜಕೀಯ ವಲಯದಲ್ಲೂ ಕುತೂಹಲ ಮೂಡಿಸಿದೆ. ಪಾರದರ್ಶಕ ಮತ್ತು ದೋಷರಹಿತ ಪಟ್ಟಿ ಸಿದ್ಧವಾಗಿದ್ದರೆ ಅದು ಮುಂದಿನ ಚುನಾವಣೆಗಳ ನಂಬಿಕೆಯನ್ನು ಹೆಚ್ಚಿಸುತ್ತದೆ. ಇಲ್ಲವಾದರೆ ಹೊಸ ವಿವಾದಗಳಿಗೆ ದಾರಿ ಮಾಡಿಕೊಡಬಹುದು.