☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

DK SHIVAKUMAR: ನುರಿತ ಕಳ್ಳ ಹೊಸಬರಿಗೆ ಕಳ್ಳತನದ ಪಾಠ – ಸಿಎಂ ವಿರುದ್ಧ ಸಿ.ಟಿ.ರವಿ ತೀಕ್ಷ್ಣ ವಾಗ್ದಾಳಿ

Image of CT Ravi about DK Shivakumar

ಬೆಂಗಳೂರು : ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಸಚಿವರಿಗೆ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಸಚಿವರ ಖಾಸಗಿ ಭೇಟಿಗಳು, ಸಾರ್ವಜನಿಕ ಸಂವಾದಗಳು ಮತ್ತು ನಿತ್ಯದ ಚಲನವಲನಗಳನ್ನು ಗುರಿಯಾಗಿಸಿ ಎರಡು ಪ್ರತ್ಯೇಕ ತಂಡಗಳು ರಹಸ್ಯ ಚಿತ್ರೀಕರಣಕ್ಕೆ ಯತ್ನಿಸುತ್ತಿವೆ ಎಂಬ ಮಾಹಿತಿ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಖಾಸಗಿ ಏಜೆನ್ಸಿಗಳ ಮೂಲಕ ಈ ಕಾರ್ಯಾಚರಣೆಯನ್ನು ನಡೆಸಿ ಸಚಿವರು ಯಾರನ್ನು ಭೇಟಿಯಾಗುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ದಾಖಲಿಸಿ ರಾಜಕೀಯ ಅಸ್ತ್ರವಾಗಿ ಬಳಸಲು ಹೊಂಚು ಹಾಕಿದೆ ಎಂಬುದು ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಐವರು ಸಚಿವರನ್ನು ನಿರ್ದಿಷ್ಟವಾಗಿ ಗುರುತಿಸಿ ಅವರಿಗೆ ಪ್ರತ್ಯೇಕವಾಗಿ ಕರೆದು ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಸ್ಟಿಂಗ್ ಆಪರೇಷನ್ ಮಾಡಿ ಸಿಎಂ ಆದ್ರ ಡಿಕೆ..? ಕುಮಾರಸ್ವಾಮಿ ಸ್ಫೋಟಕ ಆರೋಪ !

ಈ ಬೆಳವಣಿಗೆಯ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಿಎಂ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳುವಂತೆ ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ, ಪ್ರಾಮಾಣಿಕರಾಗಿ ಎಂದು ಹೇಳಬೇಕಿತ್ತು. ಆದರೆ ಸಿಕ್ಕಿಬೀಳದಂತೆ ನೋಡಿಕೊಂಡು ಕೆಲಸ ಮಾಡಿ ಎಂದು ಹೇಳುವುದು ನುರಿತ ಕಳ್ಳ ಹೊಸಬರಿಗೆ ಕಳ್ಳತನದ ಪಾಠ ಮಾಡಿದಂತೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ಇಂತಹ ನಡೆಯನ್ನು ಕೈಬಿಡಿ ಎಂದು ಆಗ್ರಹಿಸಿರುವ ಅವರು, 22 ವರ್ಷದಲ್ಲಿ ನಾಲ್ಕು ಕೋಟಿ ರೂಪಾಯಿಯಿಂದ 1450 ಕೋಟಿ ರೂಪಾಯಿಗೆ ವೈಯಕ್ತಿಕ ಆಸ್ತಿ ಬೆಳೆಯಲು ಇಂತಹ ಕಲೆಯೇ ಕಾರಣ ಎಂದು ಆರೋಪಿಸಿ, ನೀವು ಕಲಿಯುಗಕ್ಕೆ ಹೇಳಿ ಮಾಡಿಸಿದ ಮುಖ್ಯಮಂತ್ರಿ ಎಂದು ಟೀಕಿಸಿದ್ದಾರೆ.

ನೈತಿಕ ರಾಜಕಾರಣದ ಪತನ !

ಈ ಪ್ರಕರಣ ಅಧಿಕಾರದಲ್ಲಿರುವ ಸರ್ಕಾರವೇ ತನ್ನ ಸಚಿವರನ್ನು ರಹಸ್ಯ ಕಾರ್ಯಾಚರಣೆಯಿಂದ ರಕ್ಷಿಸಿಕೊಳ್ಳಬೇಕಾದ ಸ್ಥಿತಿ ಆಡಳಿತದ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಸ್ಟಿಂಗ್ ಆಪರೇಷನ್‌ಗಳು ಹಿಂದೆ ಹಲವು ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ಆದರೆ ಅದನ್ನು ಎದುರಿಸುವ ಸರಿಯಾದ ಮಾರ್ಗ ಪಾರದರ್ಶಕತೆ ಮತ್ತು ಪ್ರಾಮಾಣಿಕ ನಡವಳಿಕೆ, ತಪ್ಪಿಸಿಕೊಳ್ಳುವ ತಂತ್ರವಲ್ಲ. ವಿರೋಧ ಪಕ್ಷಗಳು ಖಾಸಗಿ ಸಂಸ್ಥೆಗಳನ್ನು ಬಳಸಿ ಕಣ್ಗಾವಲು ನಡೆಸುತ್ತಿವೆ ಎಂಬುದು ನಿಜವಾದರೆ ಅದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ. ಅದೇ ವೇಳೆ ಸಚಿವರು ನಿರಂತರ ಭಯದಲ್ಲೇ ಕಾರ್ಯನಿರ್ವಹಿಸಬೇಕಾದರೆ ಆಡಳಿತದ ಕೆಲಸಕ್ಕೆ ಅಡ್ಡಿಯಾಗುತ್ತದೆ. ಈ ವಿದ್ಯಮಾನ ರಾಜಕೀಯ ಸ್ಪರ್ಧೆಯನ್ನು ನೀತಿ ಚರ್ಚೆಯಿಂದ ವೈಯಕ್ತಿಕ ದಾಳಿಯ ಮಟ್ಟಕ್ಕೆ ಇಳಿಸುತ್ತಿದೆ.