☔ Weather
Bengaluru: ☁️ 24°C | AQI 118
Mysore: 🌤️ 25°C | AQI 144
Mangalore: 🌤️ 29°C | AQI 144
Bengaluru: ☁️ 24°C | AQI 118
☔ Weather
Bengaluru: ☁️ 24°C | AQI 118
Mysore: 🌤️ 25°C | AQI 144
Mangalore: 🌤️ 29°C | AQI 144
Bengaluru: ☁️ 24°C | AQI 118

LEGISLATIVE COUNCIL : ನಾಲ್ಕೂ ಕ್ಷೇತ್ರಗಳಲ್ಲಿ ಕಮಲ-ತೆನೆ ಮೇಲುಗೈ, ಕಾಂಗ್ರೆಸ್ ಗೆ ಮುಖಭಂಗ

Image of Legislative council election
ಕರ್ನಾಟಕ ವಿಧಾನ ಪರಿಷತ್ತಿನ (Legislative council) ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಬೃಹತ್ ಗೆಲುವು

ಮುಖ್ಯಾಂಶಗಳು

  • ನಾಲ್ಕೂ ಸ್ಥಾನಗಳಲ್ಲಿ ಮೈತ್ರಿಗೆ ಗೆಲುವು
  • ಕಾಂಗ್ರೆಸ್ ಗೆ ತೀವ್ರ ಮುಖಭಂಗ
  • ಮೈತ್ರಿ ಪಾಳಯದಲ್ಲಿ ಜೋಶ್

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ (Legislative council) ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಬೃಹತ್ ಗೆಲುವು ಸಾಧಿಸಿ ಮೈತ್ರಿ ನಾಯಕರಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಮತದಾನ ನಡೆದಿತ್ತು. ಮತ ಎಣಿಕೆ ಪೂರ್ಣಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಮತ ಎಣಿಕೆ ಕೇಂದ್ರಗಳ ಹೊರಗೆ ಮೈತ್ರಿಕೂಟದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸುತ್ತಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ತಾಂತ್ರಿಕ ಕಾರಣದಿಂದ ಎಣಿಕೆ ಸ್ವಲ್ಪ ತಡವಾದರೂ ಫಲಿತಾಂಶದ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ.

ಬಿಜೆಪಿ-ಜೆಡಿಎಸ್ ಗೆಲುವಿನ ನಾಗಾಲೋಟ..!

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ಸ್ಪರ್ಧೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಸುಮಾರು 900 ಮತಗಳ ಅಂತರದಿಂದ ಜಯಗಳಿಸಿ ಕಾಂಗ್ರೆಸ್‌ನ ಹಾಲಿ ಸದಸ್ಯ ಪುಟ್ಟಣ್ಣ ಅವರನ್ನು ಸೋಲಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಶಶೀಲ್ ಜಿ. ನಮೋಶಿ ಮೊದಲ ಸುತ್ತಿನಲ್ಲಿ 7239 ಮತ್ತು ಎರಡನೇ ಸುತ್ತಿನಲ್ಲಿ 7311 ಮತಗಳನ್ನು ಸೇರಿಸಿ ಒಟ್ಟು 14540 ಮತಗಳೊಂದಿಗೆ ಕಾಂಗ್ರೆಸ್‌ನ ಶರಣಪ್ಪ ಮತ್ತೂರ್ ಅವರನ್ನು ದೊಡ್ಡ ಅಂತರದಿಂದ ಹಿಂದಿಕ್ಕಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಧಾರವಾಡದಲ್ಲಿ ನಡೆದ ಎಣಿಕೆಯಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದಾರೆ. ಚಲಾವಣೆಯಾದ 14001 ಮತಗಳಲ್ಲಿ ಸಂಕನೂರ 6459 ಮತ ಪಡೆದರೆ ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ 4394 ಮತ ಪಡೆದು 2065 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲೂ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ಅವರ ವಿರುದ್ಧ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : ಮಾಜಿ ಸಿಎಂ ಸಿದ್ದು ಸ್ಟಿಂಗ್ ಪ್ರಕರಣ – ಸಾಕ್ಷ್ಯವಿಲ್ಲದೆ ಕಗ್ಗಂಟಾದ ತನಿಖೆ

ಈ ನಾಲ್ಕು ಕ್ಷೇತ್ರಗಳ ಪೈಕಿ ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳು ಈಗಾಗಲೇ ಬಿಜೆಪಿಯ ವಶದಲ್ಲಿದ್ದವು. ಆದರೆ ಕಾಂಗ್ರೆಸ್ ವಶದಲ್ಲಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕೂಡ ಎನ್‌ಡಿಎ ಕಸಿದುಕೊಂಡಿರುವುದು ಆಡಳಿತ ಪಕ್ಷಕ್ಕೆ ದೊಡ್ಡ ಆಘಾತವಾಗಿದೆ. ಶಿಕ್ಷಕರು ಮತ್ತು ಪದವೀಧರರು ಎಂಬ ಪ್ರಜ್ಞಾವಂತ ಮತದಾರರ ಬಳಗದಲ್ಲಿ ಸರ್ಕಾರದ ವಿರುದ್ಧದ ಅಸಮಾಧಾನ ವ್ಯಕ್ತವಾಗಿದೆ ಎಂಬ ಸಂದೇಶ ಈ ಫಲಿತಾಂಶ ರವಾನಿಸುತ್ತಿದೆ. ಇದು ಕೇವಲ ಪರಿಷತ್ ಸದಸ್ಯರ ಆಯ್ಕೆ ಮಾತ್ರವಲ್ಲ, ಮುಂಬರುವ ಚುನಾವಣೆಗಳಿಗೆ ಮುನ್ನ ಮೈತ್ರಿಕೂಟಕ್ಕೆ ಮಾನಸಿಕ ಮೇಲುಗೈ ತಂದುಕೊಟ್ಟಿದೆ. ಕಾಂಗ್ರೆಸ್‌ಗೆ ಇದು ಆತ್ಮಾವಲೋಕನ ಮಾಡಿಕೊಳ್ಳುವ ಕ್ಷಣವಾದರೆ, ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಂಘಟಿತ ಹೋರಾಟವೇ ಗೆಲುವಿನ ಸೂತ್ರ ಎಂಬುದನ್ನು ಮತ್ತೆ ಸಾಬೀತುಪಡಿಸಿದಂತಾಗಿದೆ.