10ನೇ ತರಗತಿ ಪಾಸ್‌ ಆದವರಿಗೆ ಉದ್ಯೋಗಾವಕಾಶ, ಪರೀಕ್ಷೆ ಇಲ್ಲ, ನೇರ ನೇಮಕಾತಿ

Post office

ಹತ್ತನೇ ತರಗತಿ ಓದಿರುವವರಿಗೆ ಸುವರ್ಣಾವಕಾಶ, 23 ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಯಾವುದೇ ಪರೀಕ್ಷೆ ಇರುವುದಿಲ್ಲ, ಯಾವುದೇ ಸಂದರ್ಶನ ಇರುವುದಿಲ್ಲ. ಅರ್ಜಿ ಹಾಕಿ, ಮೆರಿಟ್‌ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳಿ. ಇಲ್ಲಿದೆ ನೋಡಿ ಮಾಹಿತಿ…

ಭಾರತೀಯ ಅಂಚೆ ಇಲಾಖೆಯು, ಗ್ರಾಮೀಣ ಡಾಕ್‌ ಸೇವಕ್‌ (ಪೋಸ್ಟ್‌ ಮ್ಯಾನ್)‌ ನೇಮಕಾತಿಗಾಗಿ ನೋಟಿಫಿಕೇಶನ್‌ ಹೊರಡಿಸಿದೆ. ಕೇಂದ್ರ ಸಂವಹನ ಇಲಾಖೆ (ಮಿನಿಸ್ಟ್ರಿ ಆಫ್‌ ಕಮ್ಯುನಿಕೇಶನ್)‌ ಈ ನೋಟೀಸ್‌ ಅನ್ನು ಹೊರಡಿಸಿದ್ದು ಗ್ರಾಮೀಣ ಡಾಕ್‌ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟೆಂಟ್‌ ಪೋಸ್ಟ್‌ ಮಾಸ್ಟರ್‌ ಹುದ್ದೆಗಳಿಗಾಗಿ ಬರೋಬ್ಬರಿ 23,757 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ಅಂಚೆ ಇಲಾಖೆಯ ಇತ್ತೀಚೆಗಿನ ವರ್ಷಗಳಲ್ಲಿ ಅತ್ಯಂತ ದೊಡ್ಡ ನೇಮಕಾತಿ ಪ್ರಕ್ರಿಯೆ ಇದಾಗಲಿದೆ. ಆಕಾಂಕ್ಷಿಗಳಿಗೆ ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಬದಲಿಗೆ ಅಂಕಗಳ ಆಧಾರದಲ್ಲಿ ನೇರವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಒಟ್ಟು 23 ಪೋಸ್ಟರ್‌ ಸರ್ಕಲ್‌ಗಳಿಗೆ ಒಟ್ಟಿಗೆ ನೇಮಕಾತಿ ಮಾಡಲಾಗುತ್ತಿದೆ. ಈಶಾನ್ಯ ಭಾರತಕ್ಕೆ ಹೆಚ್ಚಿನ ಮಂದಿಯ ನೇಮಕಾತಿ ಮಾಡಲಾಗುತ್ತಿದೆ. 2614 ಹುದ್ದೆಗಳು ಈಶಾನ್ಯ ಭಾರತಕ್ಕೆ, ಮಹಾರಾಷ್ಟ್ರ ರಾಜ್ಯಕ್ಕೆ 2431 ಹುದ್ದೆಗಳನ್ನು ನೀಡಲಾಗುತ್ತಿದೆ. ತಮಿಳುನಾಡಿಗೆ 2118 ಮಂದಿಯ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶಕ್ಕೆ 1691 ಮಂದಿಯ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕಕ್ಕೆ 1116 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಕಾಂಕ್ಷಿಗಳು ಯಾವುದೇ ರಾಜ್ಯದ ಹುದ್ದೆಗಳಿಗೆ ಬೇಕಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ, ಆದರೆ ಅಭ್ಯರ್ಥಿಗೆ ಸ್ಥಳೀಯ ಭಾಷಾ ಜ್ಞಾನ ಕಡ್ಡಾಯವಾಗಿರುತ್ತದೆ.

ಅರ್ಹತೆಗಳು

ವಿದ್ಯಾರ್ಹತೆ10ನೇ ತರಗತಿ
ವಯೋಮಿತಿಕನಿಷ್ಟ 18, ಗರಿಷ್ಠ 40 ವರ್ಷ (ವಯೋಮಿತಿ ಸಡಿಲಿಕೆ ಇದೆ)
ಆಯ್ಕೆ ವಿಧಾನಮೆರಿಟ್‌ (ಅಂಕಗಳ ಆಧಾರದಲ್ಲಿ)
ಭಾಷೆಸ್ಥಳೀಯ ಭಾಷೆ ಕಡ್ಡಾಯ
ಇತರೆ ಅರ್ಹತೆಕಂಪ್ಯೂಟರ್ ಜ್ಞಾನ, ಸೈಕಲ್ ಚಲಾಯಿಸುವುದು
ಸಂಬಳ10,000 ದಿಂದ 24,470

ಪ್ರಮುಖ ದಿನಾಂಕಗಳು

ನೊಂದಣಿ ಪ್ರಾರಂಭಆಗಸ್ಟ್‌ 31, 2026
ನೊಂದಣಿ ಕೊನೆ ದಿನಾಂಕಸೆಪ್ಟೆಂಬರ್‌ 19, 2026
ಅರ್ಜಿ ಹಾಕಬಹುದಾದ ದಿನಾಂಕಸೆಪ್ಟೆಂಬರ್‌ 02
ಅರ್ಜಿ ದಾಖಲಿಗೆ ಕೊನೆಯ ದಿನಾಂಕಸೆಪ್ಟೆಂಬರ್‌ 21
ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕಸೆಪ್ಟೆಂಬರ್‌ 23

ಅರ್ಜಿ ಶುಲ್ಕ ಮಾಹಿತಿ

ಅರ್ಜಿಯ ಶುಲ್ಕ100 ರೂಪಾಯಿ
ಎಸ್‌,ಎಟಿ ಮತ್ತು ಹಿಂದುಳಿದ ವರ್ಗಕ್ಕೆಉಚಿತ
ಎಲ್ಲ ಮಹಿಳಾ ಅಭ್ಯರ್ಥಿಗಳಿಗೆಉಚಿತ

ವಯೋಮಿತಿ ಸಡಿಲಿಕೆ ಮಾಹಿತಿ

ಎಸ್‌ಸಿ/ಎಸ್‌ಟಿಐದು ವರ್ಷ
ಇತರೆ ಹಿಂದುಳಿದ ವರ್ಗ (OBC)3 ವರ್ಷ
ಆರ್ಥಿಕ ಹಿಂದುಳಿದ ವರ್ಗ (EWS)ಸಡಿಲಿಕೆ ಇಲ್ಲ
ಅಂಗವಿಕಲರು10 ವರ್ಷ
ಹಿಂದುಳಿದ ವರ್ಗದ ಅಂಗವಿಕರು13 ವರ್ಷ
ಎಸ್​​ಸಿ/ಎಸ್​​ಟಿ ಅಂಗವಿಕಲ13 ವರ್ಷ