PRAHLAD JOSHI : ತಪ್ಪು ಮಾಡಿಲ್ಲ ಅಂದ್ರೆ ಜೈಲಿಗೆ ಹೋಗುವ ಭಯ ಯಾಕೆ..? – ಡಿಕೆಗೆ ಜೋಶಿ ಟಾಂಗ್ !

ಬೆಂಗಳೂರು ಉಪನಗರ ವ್ಯಾಪ್ತಿಯ ಬಿಡದಿ ಸಂಯೋಜಿತ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ವಾಗ್ದಾಳಿ ತೀವ್ರಗೊಂಡಿದೆ. ತಮ್ಮನ್ನು ಜೈಲಿಗೆ ಅಟ್ಟಲು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಬೆಂಗಳೂರಿನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಯಾವುದೇ ರೀತಿಯ ತಪ್ಪು ಅಥವಾ ಅಕ್ರಮಗಳನ್ನು ಎಸಗದೇ ಇರುವಾಗ ವಿನಾಕಾರಣ ಜೈಲಿಗೆ ಹೋಗುವ ಭಯವೇಕೆ ಕಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವಾಗಲಿ ಅಥವಾ ಬಿಜೆಪಿ ಮೈತ್ರಿಕೂಟವಾಗಲಿ […]

BIDADI TOWNSHIP: ರೈತರ ಭೂಮಿ ಉಳಿಸಲು ಹೆಚ್.ಡಿ.ಕೆ ಶತಪ್ರಯತ್ನ : ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ

ಬೆಂಗಳೂರು ಹೊರವಲಯದ ಬಿಡದಿ ಮತ್ತು ಹಾರೋಹಳ್ಳಿ ಭಾಗದಲ್ಲಿ ಬೃಹತ್ ಬೆಂಗಳೂರು ಸಂಯೋಜಿತ ಟೌನ್‌ಶಿಪ್ (ಜಿಬಿಐಟಿ) ನಿರ್ಮಾಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಭಾಗದ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳು ನಡೆಸಿದ ಸರ್ವೇ ಕಾರ್ಯಕ್ಕೆ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಡೆಗೆ ತಡೆಯೊಡ್ಡಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಮಂಡಲಹಳ್ಳಿ ಗ್ರಾಮಸ್ಥರು ಸೇರಿದಂತೆ ಹಲವು ರೈತರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಿ ಇಲಾಖೆ ದಬ್ಬಾಳಿಕೆ ನಡೆಸುತ್ತಿದೆ ಎಂಬ […]

PM MODI : ಉಕ್ರೇನ್ ಮೇಲೆ ಅಣು ಬಾಂಬ್ ದಾಳಿ ತಡೆದಿದ್ದೇ ಮೋದಿ.!

ಉಕ್ರೇನ್ ವಿರುದ್ಧದ ಸಂಘರ್ಷ ತಾರಕಕ್ಕೇರಿದ್ದ ಸಂದರ್ಭದಲ್ಲಿ ರಷ್ಯಾ ಸಣ್ಣ ಪ್ರಮಾಣದ ಪರಮಾಣು ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿತ್ತು ಎಂಬ ಆತಂಕಕಾರಿ ಸಂಗತಿಯನ್ನು ಪೋಲೆಂಡ್ ದೇಶದ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ ಬಹಿರಂಗಪಡಿಸಿದ್ದಾರೆ. ೨೦೨೨ ರ ಕೊನೆಯ ಭಾಗದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಅಣು ದಾಳಿ ನಡೆಸಲು ಗಂಭೀರ ಸಿದ್ಧತೆ ಮಾಡಿಕೊಂಡಿದ್ದರು. ಆ ಅತ್ಯಂತ ಕಠಿಣ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ, ಅವರನ್ನು ಆ […]

DASARA 2026 : ಮೈಸೂರಲ್ಲಿ ಕಂಬಳ ಯಾಕ್ ಬೇಕು…? – ಶಾಸಕ ಸುನಿಲ್ ಕುಮಾರ್ ಭಿನ್ನರಾಗ!

ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ವಿರೋಧಗಳ ನಡುವೆಯೂ ಸಿದ್ಧತೆಗಳನ್ನು ನಡೆಸುತ್ತಿದೆ. ಸರ್ಕಾರದ ಈ ಅತಿಯಾದ ಆತುರ ಮತ್ತು ನಿರ್ಧಾರದ ಹಿಂದೆ ಒಂದು ರೀತಿಯ ಹಠಮಾರಿತನ ಎದ್ದು ಕಾಣಿಸುತ್ತಿದೆ ಎಂದು ಮಾಜಿ ಸಚಿವರೂ ಆದ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಯಾವುದೇ ಒಂದು ನಿರ್ದಿಷ್ಟ ಭಾಗದ ಸಂಸ್ಕೃತಿಯನ್ನು ಮತ್ತೊಂದು ಪ್ರದೇಶಕ್ಕೆ ಕೇವಲ ಉತ್ಸವದ ನೆಪದಲ್ಲಿ ಕೊಂಡೊಯ್ಯುವ ಮುನ್ನ ಅದರ ಪರಿಣಾಮಗಳ ಬಗ್ಗೆ ಸರ್ಕಾರ […]

BY VIJAYENDRA : ನೀವೇನು ಮುಖ್ಯಮಂತ್ರಿನಾ ಅಥವಾ ರಿಯಲ್ ಎಸ್ಟೇಟ್ ಏಜೆಂಟಾ..?

ಬೆಂಗಳೂರು ಸಮೀಪದ ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು. ನಾಡಿನ ಸರ್ವಾಂಗೀಣ ಪ್ರಗತಿ ಮತ್ತು ಜನಪರ ಆಡಳಿತ ನೀಡಬೇಕಾದ ಪ್ರಮುಖರು ರಿಯಲ್ ಎಸ್ಟೇಟ್ ಏಜೆಂಟರ ಮಾದರಿಯಲ್ಲಿ ವರ್ತಿಸುವುದನ್ನು ಬಿಟ್ಟು, ನೈಜ ಕಾಳಜಿಯೊಂದಿಗೆ ಆಡಳಿತ ನಡೆಸಬೇಕು ಎಂದುವಾಗ್ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ […]

PARAMESHWAR: ಭಕ್ತರ ಹಣ ದೇವಾಲಯದ ಅಭಿವೃದ್ಧಿಗೆ ಮಾತ್ರ ಸೀಮಿತ : ಡಿಸಿಎಂ ಪರಮೇಶ್ವರ್

ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಭಕ್ತಿಯಿಂದ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆ ಹಣವನ್ನು ಇನ್ಮುಂದೆ ಆಯಾ ದೇವಸ್ಥಾನಗಳ ಉನ್ನತೀಕರಣ ಹಾಗೂ ಭಕ್ತರ ಸೌಕರ್ಯಗಳಿಗೆ ಮಾತ್ರ ಕಡ್ಡಾಯವಾಗಿ ವಿನಿಯೋಗಿಸಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಪ್ರಮುಖವಾಗಿ ಹೆಚ್ಚಿನ ಆದಾಯ ಹೊಂದಿರುವ ಎ ವರ್ಗದ ದೇವಸ್ಥಾನಗಳಲ್ಲಿ ಪಾರದರ್ಶಕತೆ ತರಲು ಸರ್ಕಾರ ನಿರ್ಧರಿಸಿದೆ. ಕಾಣಿಕೆ ಎಣಿಕೆ ಹಾಗೂ ಹುಂಡಿಗಳ ಸುರಕ್ಷತೆಗಾಗಿ ಸುಧಾರಿತ ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದ್ದು, ಪ್ರತಿ ಪ್ರಮುಖ ದೇವಾಲಯದ […]

HD KUMARASWAMY: ಎಚ್‌ಎಂಟಿ ಭೂಮಿ ವಿವಾದ: ಹೆಚ್.ಡಿ.ಕೆ ಧಿಡೀರ್ ಭೇಟಿ !

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಸಂಸ್ಥೆಯ ವಶದಲ್ಲಿರುವ ಭೂಮಿಯ ಒಡೆತನದ ಕುರಿತಾದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇಂದು (ಜುಲೈ.16) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆಯೇ ಕಾನೂನುಬದ್ಧವಾಗಿ ಈ ಜಾಗವನ್ನು ಎಚ್‌ಎಂಟಿ ಕೈಗಾರಿಕೆಗೆ ಹಸ್ತಾಂತರಿಸಲಾಗಿದ್ದು, ಇದನ್ನು ಅರಣ್ಯ ಭೂಮಿ ಎಂದು ಕರೆಯುವುದು ತಪ್ಪು ಎಂದಿದ್ದಾರೆ. ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವನ್ನು ಉಳಿಸಿಕೊಳ್ಳಲು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಜಾಗದ ರಕ್ಷಣೆ […]

HD KUMARASWAMY: 20 ಸ್ಥಾನ ಗೆಲ್ಲೋದು ದೊಡ್ಡ ಸಾಧನೆನಾ..? ಹೆಚ್.ಡಿ.ಕೆ ಗೆ ಚೆಲುವರಾಯಸ್ವಾಮಿ ಸವಾಲು !

ರಾಜ್ಯ ರಾಜಕಾರಣದ ಇಬ್ಬರು ಹಳೆಯ ಒಡನಾಡಿಗಳ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನೇರ ರಾಜಕೀಯ ಸವಾಲು ಎಸೆದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧೈರ್ಯವಿದ್ದರೆ ತಕ್ಷಣವೇ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಒಂಟಿಯಾಗಿ ಸ್ಪರ್ಧಿಸಿ 120 ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಯಾವುದೇ ನೆರವಿಲ್ಲದೆ ಏಕಾಂಗಿಯಾಗಿ […]

BIDADI TOWNSHIP: ಜಮೀನು ವಶಕ್ಕೆ ಸರ್ಕಾರದ ಹಠಮಾರಿ ಧೋರಣೆ – ರಣರಂಗವಾದ ಬಿಡದಿ

ಬೆಂಗಳೂರು ದಕ್ಷಿಣದ ಹೊರವಲಯದ ಬಿಡದಿ ಹೋರಾಟದ ಕೆಂಡವಾಗಿದೆ. ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಅಭಿವೃದ್ಧಿಗಾಗಿ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಆದೇಶದ ವಿರುದ್ಧ ಸ್ಥಳೀಯ ಹಳ್ಳಿಗರು ಕೆರಳಿ ಕೆಂಡವಾಗಿದ್ದಾರೆ. ಕೃಷಿಕರ ಉಳಿವಿಗಾಗಿ ಬೈರಮಂಗಲ ವೃತ್ತದಲ್ಲಿ ಜಮಾಯಿಸಿರುವ ನೂರಾರು ಮಹಿಳೆಯರು ಪೊರಕೆ ಪೂಜೆ ಚಳವಳಿಯ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಯಾವುದೇ ಪ್ರಲೋಭನೆ ಅಥವಾ ಬೆದರಿಕೆಗೆ ಮಣಿಯದೆ ತಲೆತಲಾಂತರದಿಂದ ರಕ್ಷಿಸಿಕೊಂಡು ಬಂದಿರುವ ಮಣ್ಣನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಸಿಡಿದೆದ್ದಿದ್ದಾರೆ. ರೈತರ ಈ ಜನಪರ […]

BY VIJAYENDRA : ಬಿಡದಿ ಟೌನ್‌ಶಿಪ್, ಕನಕಪುರ ಏರ್ಪೋರ್ಟ್ ಕೇವಲ ರಿಯಲ್ ಎಸ್ಟೇಟ್ ದಂಧೆ : ಬಿವೈ ವಿಜಯೇಂದ್ರ

ಬೆಂಗಳೂರಿನ ಸುತ್ತಮುತ್ತಲಿನ ಭೂಮಿಯನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲು ಉದ್ದೇಶಿಸಿರುವ ಬಿಡದಿ ಸ್ಮಾರ್ಟ್ ಸಿಟಿ ಹಾಗೂ ಕನಕಪುರ ಭಾಗದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗಳ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ವ್ಯವಹಾರ ಅಡಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬೃಹತ್ ಯೋಜನೆಗಳ ನೆಪದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರೈತರ ಹಿತಾಸಕ್ತಿಯನ್ನು ಬಲಿಗೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೀತಿಯನ್ನು […]