CABINET EXPANSION: ಸಚಿವ ಸಂಪುಟ ಕಸರತ್ತಿಗೆ ಕ್ಲೈಮ್ಯಾಕ್ಸ್: ಶುಕ್ರವಾರ ನೂತನ ಸಚಿವರಿಗೆ ಪ್ರಮಾಣ ವಚನ ಭಾಗ್ಯ!

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟದ ಪುನಾರಚನೆ ಮತ್ತು ವಿಸ್ತರಣೆಯ ಪ್ರಕ್ರಿಯೆಗೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ಸೇರ್ಪಡೆಗೆ ಈ ಬರುವ ಶುಕ್ರವಾರದಂದು (ಜುಲೈ.24) ಶುಭ ಮುಹೂರ್ತ ನಿಗದಿಯಾಗಿದ್ದು, ನೂತನ ಸಚಿವರು ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಸಂಬಂಧ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ನಿಂದ ಹಸಿರು ನಿಶಾನೆ ಪಡೆದು ಬೆಂಗಳೂರಿಗೆ ಮರಳಿದ್ದು, […]
RAHUL GANDHI : ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡೋವರೆಗೂ ಬಿಡಲ್ಲ – ರಾಹುಲ್ ಗಾಂಧಿ ಬಿಗಿಪಟ್ಟು

ದೆಹಲಿತ ಕ್ಷಾತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಶಿಕ್ಷಣ ವ್ಯವಸ್ಥೆಯ ಲೋಪಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸಚಿವರು ಹೊಣೆಗಾರಿಕೆ ಸ್ವೀಕರಿಸದಿದ್ದರೆ ಅದರ ಸಂಪೂರ್ಣ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ ಎಂದು ರಾಹುಲ್ ಗಾಂಧಿ […]
ACTRESS RAMYA : ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡ್ಬೇಡಿ : ಶಾ, ಪ್ರಧಾನ್ ರಾಜೀನಾಮೆಗೆ ರಮ್ಯಾ ಆಗ್ರಹ

ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ನೀಟ್ ಪರೀಕ್ಷಾ ಪ್ರಕ್ರಿಯೆಗಳ ಗೊಂದಲ ಹಾಗೂ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದ ಯುವಸಮುದಾಯದ ಮೇಲೆ ನಡೆದ ಪೊಲೀಸ್ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಂಸದೆ ದಿವ್ಯಾ ಸ್ಪಂದನಾ, ಕೇಂದ್ರದ ಆಡಳಿತದ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನಾ ನಿರತರ ಮೇಲೆ ನಡೆದ ದೌರ್ಜನ್ಯದ ಸಂಪೂರ್ಣ ಹೊಣೆಯನ್ನು ಕೇಂದ್ರ ಗೃಹಸಚಿವರು ಹೊರಬೇಕು ಮತ್ತು ನೀಟ್ ಒಳಗೊಂಡಂತೆ ಸಾಲು ಸಾಲು ಪರೀಕ್ಷಾ ಅಕ್ರಮಗಳ ವೈಫಲ್ಯವನ್ನು ಒಪ್ಪಿಕೊಂಡು ಶಿಕ್ಷಣ ಸಚಿವರು ತಕ್ಷಣವೇ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದ್ದಾರೆ. ಈ […]
NEET UG : ಜಿರಳೆಗಳು ಮತ್ತು ಗೆದ್ದಲುಗಳಿಂದ ದೇಶ ಉಳಿಸಿ – ವಿವಾದಕ್ಕೀಡಾದ ಬಿಜೆಪಿ ನಾಯಕನ ಪೋಸ್ಟ್ !

ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿ ಸಮೂಹ ಕೈಗೊಂಡ ‘ಸಂಸತ್ ಚಲೋ’ ಚಳವಳಿಯನ್ನು ಕುರಿತು ಗೋವಾ ಬಿಜೆಪಿಯ ಪ್ರಮುಖ ನಾಯಕ ನರೇಂದ್ರ ಸವಾಯ್ಕರ್ ಅವರು ವ್ಯಕ್ತಪಡಿಸಿದ ಸಾರ್ವಜನಿಕ ಅಭಿಪ್ರಾಯವೊಂದು ಇದೀಗ ದೊಡ್ಡ ಪ್ರಮಾಣದ ವಿವಾದಕ್ಕೆ ನಾಂದಿ ಹಾಡಿದೆ. ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದ ಅವರು, ಪ್ರತಿಭಟನಾನಿರತರನ್ನು ಪರೋಕ್ಷವಾಗಿ ನಿಂದಿಸುವ ಶಬ್ದಗಳನ್ನು ಬಳಸಿ ವ್ಯಂಗ್ಯವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವು ರಾಜಕೀಯ ವಲಯದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಕೀಳಾಗಿ ಚಿತ್ರಿಸಲಾಗಿದೆ ಎಂದು […]
NEET UG : ಪ್ರಧಾನಿ ಮೋದಿ ನಿವಾಸದ ಮುಂದೆ ಕಾಂಗ್ರೆಸ್ ಧರಣಿ – ದೆಹಲಿಯಲಿ ಅತಿದೊಡ್ಡ ರಾಜಕೀಯ ಹೈಡ್ರಾಮಾ

ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದ ಎದುರು ತೀವ್ರ ರಾಜಕೀಯ ಹೈಡ್ರಾಮಾ ನಡೆದಿದೆ. ಸಂಸತ್ ಚಲೋ ಚಳವಳಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಪ್ರಹಾರವನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಧರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೀಪೇಂದರ್ ಹೂಡಾ, ರಣದೀಪ್ ಸುರ್ಜೇವಾಲಾ ಹಾಗೂ ಚರಂಜಿತ್ ಸಿಂಗ್ ಚನ್ನಿ […]
BENGALURU: ಫುಟ್‌ಪಾತ್ ತೆರವು ಬೆನ್ನಲ್ಲೇ ಆಪರೇಷನ್ ರಾಜಕಾಲುವೆ – ಕೃಷ್ಣಬೈರೇಗೌಡ ಖಡಕ್ ಸೂಚನೆ

ರಾಜಧಾನಿ ಬೆಂಗಳೂರಿನ ಕಾಲುದಾರಿಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ ನಗರದ ಪ್ರಮುಖ ಸಮಸ್ಯೆಯತ್ತ ಗಮನ ಹರಿಸಿದೆ. ಮಳೆಗಾಲದಲ್ಲಿ ಎದುರಾಗುವ ಕೃತಕ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ರಾಜಕಾಲುವೆಗಳನ್ನು ಆಕ್ರಮಿಸಿಕೊಂಡಿರುವ ಬಲಿಷ್ಠರಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನೇರ ಸವಾಲು ಹಾಕಿದ್ದಾರೆ. ಪಾದಚಾರಿ ಮಾರ್ಗಗಳ ಕಾರ್ಯಾಚರಣೆ ಯಶಸ್ವಿಯಾದ ನಂತರ, ನಗರವನ್ನು ಮುಳುಗಡೆಯಿಂದ ಪಾರು ಮಾಡಲು ಮುಂದಿನ ಹಂತದ ಬೃಹತ್ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಾದ್ಯಂತ ಇರುವ […]
FARMERS PROTEST : ನೀಟ್ ಬೆನ್ನಲ್ಲೇ ಭುಗಿಲೆದ್ದ ರೈತರ ಆಕ್ರೋಶ ; ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ತೀವ್ರ ವಿರೋಧ

ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಪಂಜಾಬಿನ ನೂರಾರು ಕೃಷಿಕರನ್ನು ಹರಿಯಾಣ ಗಡಿಯ ಶಂಭು ಎಂಬಲ್ಲಿ ಪೊಲೀಸ್ ಪಡೆಗಳು ತಡೆದುನಿಲ್ಲಿಸಿವೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಕೃಷಿಕರು ಮುಂದಾಗಿದ್ದಾಗ, ಮುಳ್ಳುಬೇಲಿ ಹಾಗೂ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ಕುಪಿತಗೊಂಡ ದೇಶ್ ಬಚಾವೋ ಮೋರ್ಚಾ ಬ್ಯಾನರ್ ಅಡಿಯ ರೈತರು ಗಡಿಪ್ರದೇಶದಲ್ಲೇ ರಸ್ತೆ ತಡೆದು ಸುದೀರ್ಘ ಧರಣಿ […]
BY VIJAYENDRA : ದೆಹಲಿ ಸಂಸತ್ ಚಲೋ ಹಿಂದೆ ಟೂಲ್‌ಕಿಟ್ ಗ್ಯಾಂಗ್ – ಬಿ.ವೈ ವಿಜಯೇಂದ್ರ ವಾಗ್ದಾಳಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಘರ್ಷಣೆಗಳ ಹಿಂದೆ ದೇಶವಿರೋಧಿ ಹಿನ್ನೆಲೆಯುಳ್ಳ ಟೂಲ್‌ಕಿಟ್ ಜಾಲದ ಕುಮ್ಮಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕಾಗಿದ್ದರೂ, ಆಡಳಿತ ಕೇಂದ್ರವಾದ ಸಂಸತ್ತಿಗೆ ಧಕ್ಕೆ ತರುವುದು, ಕಲ್ಲು ತೂರಾಟ ನಡೆಸುವುದು ಹಾಗೂ ಅರಾಜಕತೆ ಸೃಷ್ಟಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಕೇಂದ್ರ ಸಚಿವ ಜೆ.ಪಿ. ನಡ್ಡಾ […]
NEET UG 2026 : ನೀಟ್ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆ ಅರಾಜಕತೆಗೆ ತಿರುಗಿತೇ…?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಜಂತರ್ ಮಂತರ್‌ನಿಂದ ಸಂಸತ್ ಭವನದವರೆಗಿನ ಪಾದಯಾತ್ರೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಗೋಲ್ ಮಾಲ್ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆದ ಈ ರ‍್ಯಾಲಿಯಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಬೇಕಾಯಿತು. ಚಳವಳಿಯ ವೇಳೆ ಉದ್ವೇಗಕಾರಿ ಮತ್ತು ಅರಾಜಕತೆಗೆ ಪ್ರಚೋದನೆ ನೀಡುವಂತಹ […]
CABINET EXPANSION: ಹೈಕಮಾಂಡ್ ಸಮ್ಮತಿ; ಸಚಿವ ಸಂಪುಟ ವಿಸ್ತರಣೆಗೆ ಜುಲೈ 22 ರಂದು ಅಂತಿಮ ಸ್ಪರ್ಶ

ರಾಜ್ಯದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಜುಲೈ 22 ರಂದು ನೂತನ ಸಚಿವರ ಪ್ರಮಾಣವಚನಕ್ಕೆ ದಿನಾಂಕ ನಿಗದಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಸಂಘಟನಾತ್ಮಕವಾಗಿ ಪಕ್ಷಕ್ಕೆ ಬಲ ತುಂಬುವ ದೃಷ್ಟಿಯಿಂದ ಖಾಲಿ ಇರುವ ಇಪ್ಪತ್ತು […]