CAUVERY DISPUTE : ಕೆಆರ್‌ಎಸ್ ಕಡೆಗೆ ಕಮಲ ಪಡೆ: ಬಿಜೆಪಿಯಿಂದ ಡ್ಯಾಂ ಮುತ್ತಿಗೆ ಚಳವಳಿ

ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ತನ್ನ ಹೋರಾಟವನ್ನು ಚುರುಕುಗೊಳಿಸಿದೆ. ಮಂಡ್ಯದ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ ಮುತ್ತಿಗೆ ಹಾಕುವ ಬೃಹತ್ ಯೋಜನೆಯನ್ನು ಕಮಲ ಪಡೆ ರೂಪಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ರಾಜಕೀಯ ಕಾವು ಏರತೊಡಗಿದೆ. ಈ ಬೃಹತ್ ಪ್ರತಿಭಟನೆಯ ಸಾರಥ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ವಹಿಸಲಿದ್ದು, ಮೈಸೂರು ಮತ್ತು ಮಂಡ್ಯ ಭಾಗದ ಪ್ರಮುಖ ಬಿಜೆಪಿ ಮುಖಂಡರೊಂದಿಗೆ ಸಾವಿರಾರು ಬೆಂಬಲಿಗರು ಜಲಾಶಯದ ಕಡೆಗೆ […]

CABINET: ಸಂಪುಟ ವಿಸ್ತರಣೆ ಕಸರತ್ತು ಅಂತ್ಯ – ಉಸಿರು ಬಿಗಿಹಿಡಿದ ಸಚಿವಾಕಾಂಕ್ಷಿಗಳು !

ಕರ್ನಾಟಕ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಈಗ ಅಂತಿಮ ಹಂತವನ್ನು ತಲುಪಿವೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪ್ರಮುಖ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಈ ಉನ್ನತ ಮಟ್ಟದ ಭೇಟಿಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ರಾಜ್ಯದ ಹಿರಿಯ ನಾಯಕರೊಂದಿಗೆ ಸುದೀರ್ಘ ಚಾರ್ವೆ ನಡೆಸಲಾಗಿದೆ. ಈ ಮಹತ್ವದ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಹಾಗೂ ಕೆ.ಸಿ. ವೇಣುಗೋಪಾಲ್ ಮತ್ತು […]

SUPREME COURT : ಪೆಲೆಟ್ ಗನ್ ನಿಷೇಧ ಮಾಡಲು ಸಾಧ್ಯವಿಲ್ಲ – ಸುಪ್ರೀಂ ಮಹತ್ವದ ಆದೇಶ

ದೆಹಲಿಯ ಜಂತರ್ ಮಂತರ್ ಆವರಣದಲ್ಲಿ ಜುಲೈ 20ರಂದು ಆಯೋಜಿಸಲಾಗಿದ್ದ ಸಂಸತ್ ಚಲೋ ಚಳವಳಿಯ ಸಂದರ್ಭದಲ್ಲಿ ನಡೆದ ಪೆಲೆಟ್ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಇಬ್ಬರು ಪ್ರತಿಭಟನಾಕಾರರು ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಜಂಟಿಯಾಗಿ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ದೇಶಾದ್ಯಂತ ಪ್ರತಿಭಟನೆಗಳನ್ನು ನಿಯಂತ್ರಿಸಲು ಪೆಲೆಟ್ ಬಂದೂಕುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ […]

LOK SABHA : ‘ವಂದೇ ಮಾತರಂ’ ಅವಮಾನಿಸಿದ್ರೆ ಹುಷಾರ್- ಲೋಕಸಭೆಯಲ್ಲೂ ಬಿಲ್ ಅಂಗೀಕಾರ

ದೇಶದ ಸ್ವಾತಂತ್ರ್ಯ ಸಂಗ್ರಾಮದ ಜಾಗೃತಿಯಸಂಕೇತವಾಗಿದ್ದ ‘ವಂದೇ ಮಾತರಂ’ ಗೀತೆಯ ಘನತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ನಿರ್ಣಾಯಕ ಕಾನೂನು ಹೆಜ್ಜೆಯನ್ನಿಟ್ಟಿದೆ. ರಾಜ್ಯಸಭೆಯ ಅನುಮೋದನೆ ಪಡೆದಿದ್ದ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ – 2026’ ತಿದ್ದುಪಡಿ ಮಸೂದೆಗೆ ಈಗ ಲೋಕಸಭೆಯಲ್ಲೂ ಅಂತಿಮ ಸಮ್ಮತಿ ಸಿಕ್ಕಿದೆ. ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಡಿಸಿದ ಈ ವಿಧೇಯಕದ ಪ್ರಕಾರ, ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಕ್ಕೆ ಲಭ್ಯವಿರುವ ಕಾನೂನಾತ್ಮಕ ಭದ್ರತೆ ಇನ್ಮುಂದೆ ಈ ರಾಷ್ಟ್ರೀಯ ಗೀತೆಗೂ ವಿಸ್ತರಣೆಯಾಗಲಿದೆ. ಗೀತೆಯನ್ನು ಹಾಡುವಾಗ […]

CAUVERY DISPUTE : ಮಂಡ್ಯದಲ್ಲಿ ಹೆಚ್ಚಾದ ಕಾವೇರಿ ಕಿಚ್ಚು – ಚಿತ್ರಮಂದಿರದಿನ ‘ಜನ ನಾಯಗನ್‘ ಎತ್ತಂಗಡಿ

ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತೋರುತ್ತಿರುವ ಕಠಿಣ ನಿಲುವನ್ನು ಖಂಡಿಸಿ ಮಂಡ್ಯ ನಗರದಲ್ಲಿ ವ್ಯಾಪಕ ಜನಪ್ರತಿಭಟನೆ ವ್ಯಕ್ತವಾಗಿದೆ. ಸ್ಥಳೀಯ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನ ನಾಯಗನ್’ ಚಲನಚಿತ್ರದ ವಿರುದ್ಧ ವಿಜಯಸೇನೆ ಸಂಘಟನೆ ಮುಖಂಡ ದೀಪಕ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ಹೊರಹಾಕಿದರು. ಚಿತ್ರಮಂದಿರದ ಮುಂದೆ ಅಳವಡಿಸಲಾಗಿದ್ದ ಬೃಹತ್ ಪೋಸ್ಟರ್‌ಗಳನ್ನು ಕಿತ್ತೆಸೆದು ಹರಿದು ಹಾಕಿದ ಪ್ರತಿಭಟನಾಕಾರರು, ತಮಿಳುನಾಡು ನಾಯಕರ ಚಿತ್ರಗಳಿಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು […]

KPSC SCAM : ಕೆಪಿಎಸ್‌ಸಿ ನೇಮಕಾತಿ ಅಕ್ರಮ – ರಾಜ್ಯದಲ್ಲೂ ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ಮತ್ತು ಲಂಚಾವತಾರ ನಡೆದಿದೆ ಎಂದು ಆರೋಪಿಸಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಖಂಡಿಸಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಿದ್ದು, ಅಕ್ರಮ ನಡೆದಿದೆ ಎನ್ನಲಾದ ಆಯ್ಕೆ ಪಟ್ಟಿಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿಯೊಂದು ಪಶುವೈದ್ಯಾಧಿಕಾರಿ ಹುದ್ದೆಗೆ ಲಕ್ಷಾಂತರ ರೂಪಾಯಿ […]

R ASHOK : ಕದ್ದುಮುಚ್ಚಿ ತಮಿಳುನಾಡಿಗೆ ನೀರು..? – ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್ ಕೆಂಡಾಮಂಡಲ

ಕೊಡಗಿನ ಹಾರಂಗಿ ಅಣೆಕಟ್ಟಿನಿಂದ ತಮಿಳುನಾಡಿಗೆ ರಹಸ್ಯವಾಗಿ ನೀರು ಹರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ್ದಾರೆ. ಕಳೆದ ಕೆಲವು ವಾರಗಳಿಂದ ಜನರಿಗೆ ತಿಳಿಸದೆ ನೀರು ಬಿಡಲಾಗುತ್ತಿದ್ದು, ಇದರಿಂದಾಗಿ ರಾಜ್ಯದ ಪ್ರಮುಖ ನಗರ ಹಾಗೂ ಜಿಲ್ಲೆಗಳಾದ ಬೆಂಗಳೂರು, ಮೈಸೂರು ಮತ್ತು ಮಂಡ್ಯದಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಕಾನೂನಾತ್ಮಕ ಹೋರಾಟ ನಡೆಸಿ ನೀರು ಕಾಯ್ದುಕೊಳ್ಳುವ ಬದಲು ಕಾಂಗ್ರೆಸ್ ಸರ್ಕಾರ ನೆರೆಯ ರಾಜ್ಯದ […]

CAUVERY DISPUTE : ಕಾವೇರಿ ಹಂಚಿಕೆ ವಿವಾದದಕಿಚ್ಚು – ಸ್ತಬ್ಧವಾಗಲಿದ್ಯಾ ಕರುನಾಡು…?

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ನಿತ್ಯ 3,500 ಕ್ಯೂಸೆಕ್ ನೀರನ್ನು ಹರಿಸುವಂತೆ ನಿರ್ದೇಶನ ನೀಡಿರುವುದು ರೈತರು ಹಾಗೂ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಳೆಯ ಅಭಾವದಿಂದಾಗಿ ಕೆಆರ್‌ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಅಣೆಕಟ್ಟುಗಳಲ್ಲಿ ನೀರು ಗಣನೀಯವಾಗಿ ಕಡಿಮೆಯಾಗಿದ್ದು, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ನೀರು ಬಿಟ್ಟರೆ ಜುಲೈ 31ರಂದು ನಿರ್ಧಾರ ಕೈಗೊಂಡು ಇಡೀ ರಾಜ್ಯ […]

RAHUL GANDHI : ವಿದ್ಯಾರ್ಥಿಗಳ ಮೇಲೆ ನಡೆದ ಪ್ರತಿ ದಬ್ಬಾಳಿಕೆ & ಹಲ್ಲೆಗೆ ಅಮಿತ್ ಶಾ ನೇರ ಕಾರಣ – ರಾಗಾ ಹೊಸ ಆಟ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಂತಹ ಅಸ್ತ್ರಗಳನ್ನು ಬಳಸಿ ಪ್ರತಿಭಟನೆಯನ್ನು ಬಲವಂತವಾಗಿ ಹತೋಟಿಗೆ ತರಲಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗೃಹ ಸಚಿವಾಲಯದ ಮೇಲೆ ನೇರ ಪ್ರಹಾರ ನಡೆಸಿದ್ದಾರೆ. ಸಂಸತ್ತಿನಲ್ಲಿ ಪರೀಕ್ಷಾ ಅಕ್ರಮ ತಡೆ ಕಾಯ್ದೆಯ ಚರ್ಚೆಯ ಬೆನ್ನಲ್ಲೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿ ಪೊಲೀಸ್ ಕಾರ್ಯಾಚರಣೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮೇಲ್ವಿಚಾರಣೆಯಲ್ಲೇ ನಡೆಯುವುದರಿಂದ ಈ ಹಿಂಸಾಚಾರಕ್ಕೆ ಗೃಹ […]

RAHUL GANDHI : ರಾಹುಲ್ ಗೆ Gen-Z ಬೇಕಿಲ್ಲ, Gen-G ಬೇಕು : ಗಾಂಧಿ ಪರಿವಾರ ಕೆಣಕಿದ ಸಂಬಿತ್ ಪಾತ್ರ

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಆಡಳಿತಾರೂಢ ವ್ಯವಸ್ಥೆಯ ಮೇಲೆ ಮಾಡಿದ ಹಲವು ಗಂಭೀರ ಆರೋಪಗಳನ್ನು ಆಡಳಿತ ಪಕ್ಷ ನಿರಾಕರಿಸಿದೆ. ಬಿಜೆಪಿ ಸಂಸದ ಸಂಬಿತ್ ಪಾತ್ರ, ಕಾಂಗ್ರೆಸ್ ನಾಯಕರಿಗೆ ಈ ದೇಶದ ಯುವಪೀಳಿಗೆ ‘ಜೆನ್-ಜಿ’ ಯುವಕರ ಭವಿಷ್ಯಕ್ಕಿಂತ ತಮ್ಮ ಸ್ವಂತ ‘ಗಾಂಧಿ ಪೀಳಿಗೆ’ಯ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ ಮೈಕ್ರೋಫೋನ್ ಧ್ವನಿಯನ್ನು ಅಡಗಿಸಲಾಗುತ್ತಿತ್ತು ಎಂಬ ರಾಹುಲ್ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿ ಸಮೂಹದ ಮೇಲೆ […]