BJP: ಬಿಜೆಪಿ ರಾಷ್ಟ್ರೀಯ ತಂಡದಿಂದ ರಾಧಾಮೋಹನ್ ದಾಸ್ ಔಟ್ – ಕರ್ನಾಟಕದಲ್ಲೂ ಮೇಜರ್ ಸರ್ಜರಿ..?

ಭಾರತೀಯ ಜನತಾ ಪಾರ್ಟಿಯ ಕೇಂದ್ರೀಯ ಪದಾಧಿಕಾರಿಗಳ ನೂತನ ಪಟ್ಟಿಯಿಂದ ಪ್ರಮುಖ ನಾಯಕ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಮುಕ್ತಗೊಳಿಸಲಾಗಿದ್ದು, ಇದರ ನೇರ ಪರಿಣಾಮವಾಗಿ ಕರ್ನಾಟಕ ರಾಜ್ಯ ಉಸ್ತುವಾರಿ ಸ್ಥಾನದಲ್ಲೂ ಶೀಘ್ರದಲ್ಲಿಯೇ ಪ್ರಮುಖ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಅವರ ಕಾರ್ಯವೈಖರಿ ಮತ್ತು ಶಿಸ್ತಿನ ನಿರ್ಧಾರಗಳು ಪಕ್ಷದ ಆಂತರಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದವು. ಪ್ರಮುಖ ಸಭೆಗಳಲ್ಲಿ ಅವರ ಹಸ್ತಕ್ಷೇಪದ ವಿರುದ್ಧ ಕೆಲ ಹಿರಿಯ ನಾಯಕರು ಅಸಮಾಧಾನ […]
SIR : ಕರ್ನಾಟಕ SIR ಪ್ರಕ್ರಿಯೆ ಮುಕ್ತಾಯ – 1.8 ಕೋಟಿ ಮತದಾರರ ಹೆಸರು ಡಿಲೀಟ್..?

ರಾಜ್ಯದಲ್ಲಿ ಇತ್ತೀಚೆಗೆ ಪೂರ್ಣಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಮನೆ ಮನೆ ಸಮೀಕ್ಷೆಯ ನಂತರ ಕೋಟ್ಯಂತರ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಒಟ್ಟು ಹಂಚಿಕೆ ಮಾಡಲಾಗಿದ್ದ 5.54 ಕೋಟಿ ಎನಮ್ಯೂರೇಷನ್ ನಮೂನೆಗಳ ಪೈಕಿ 4.46 ಕೋಟಿ ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಅಂದರೆ ಶೇಕಡಾ 80.46ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲೇ ಒಟ್ಟು 1.08 ಕೋಟಿ ಮತದಾರರಲ್ಲಿ ಸುಮಾರು 56.73 ಲಕ್ಷ ಜನರ ಮಾಹಿತಿ ಡಿಜಿಟಲೈಸ್ ಆಗಿದ್ದರೆ, ಬಾಕಿ ಉಳಿದ 47.15 ಲಕ್ಷಕ್ಕೂ […]
TAMILNADU: ದೆಹಲಿಯಲ್ಲಿ ಕೂತ್ಕೊಂಡು ಇಲ್ಲಿ ಕಂಟ್ರೋಲ್ ಮಾಡಬೇಡಿ – ಅಣ್ಣಾಮಲೈ ಬಿಜೆಪಿ ತೊರೆದಿದ್ದು ಇದೇ ಕಾರಣಕ್ಕೆ..!

ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಾರ್ಟಿಯನ್ನು ತೊರೆಯಲು ಕಾರಣವಾದ ನೈಜ ಸಂಗತಿಗಳನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ತಮಿಳುನಾಡಿನಲ್ಲಿ ಸುಮಾರು 1700 ಕಿಲೋಮೀಟರ್‌ಗಳ ಬೃಹತ್ ಪಾದಯಾತ್ರೆ ನಡೆಸಿ, ರಾಜ್ಯದ ಎಲ್ಲಾ 39 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುವ ಮೂಲಕ ಬಿಜೆಪಿಯ ಮತಗಳಿಕೆಯನ್ನು ಶೇಕಡಾ 11ಕ್ಕೆ ಏರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ವಿಧಾನಸಭಾ ಚುನಾವಣೆ ವೇಳೆಗೆ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಕೇಂದ್ರ ನಾಯಕತ್ವದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ ಅವರು, ಅಂತಿಮವಾಗಿ ಪಕ್ಷದಿಂದ […]
BENGALURU: ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟ – ಇಂದು ಬೆಂಗಳೂರಿಗರಿಗೆ ತಟ್ಟಲಿದೆ ಪ್ರತಿಭಟನೆ ಬಿಸಿ

ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿ ಜಾತ್ಯತೀತ ಜನತಾದಳ ನಡೆಸಿದ್ದ ಪಾದಯಾತ್ರೆಯನ್ನು ಬೆಂಗಳೂರು ಪ್ರವೇಶಿಸದಂತೆ ತಡೆಯಲಾಗಿತ್ತು. ಹೀಗಾಗಿ ಇಂದು ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಬೆಳಿಗ್ಗೆ 8 ರಿಂದ ಸಂಜೆ 9 ಗಂಟೆಯವರೆಗೆ ನಗರದ ಕೇಂದ್ರ ಭಾಗದಲ್ಲಿ ವಾಹನ ಸಂಚಾರಕ್ಕೆ ವಿಶೇಷ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ನಿಷೇಧ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಹೊಸ ಸೂಚನೆಯಂತೆ ಕೆ.ಜಿ. ರಸ್ತೆಯಿಂದ ಮೈಸೂರು […]
HD KUMARASWAMY: ಸೋನಿಯಾ ನರ ನರದಲ್ಲೂ ಇಟಲಿ ರಕ್ತವೇ ಹರಿಯುತ್ತಿದೆ – ಕುಮಾರಣ್ಣ ಕಿಡಿ

ವಂದೇ ಮಾತರಂ ಹಾಡು ನಿಲ್ಲಿಸಲು ಸೋನಿಯಾ ಗಾಂಧಿ ಸೂಚಿಸಿದರು ಎಂಬ ಆರೋಪ ಮತ್ತು ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸೋನಿಯಾ ಗಾಂಧಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸೋನಿಯಾ ಗಾಂಧಿ ಅವರ ನರನರಗಳಲ್ಲೂ ಇಟಲಿಯ ರಕ್ತವೇ ಹರಿಯುತ್ತಿದ್ದು, ಅವರು ಭಾರತೀಯ ಮೂಲದವರಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಅವರ ರಾಷ್ಟ್ರೀಯತೆಯ ಮೂಲವನ್ನೇ ಪ್ರಶ್ನಿಸಿದ್ದಾರೆ. ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುತ್ತಿದ್ದಾಗ ಸೋನಿಯಾ ಗಾಂಧಿ ಅವರು ಅದನ್ನು ತಡೆಯಲು ಯತ್ನಿಸಿದರು ಎಂಬ ಆರೋಪಕ್ಕೆ ಕಾಂಗ್ರೆಸ್ ನೀಡಿದ […]
VANDE MATHARAM: ಅಲ್ಲಾ ಬಿಟ್ಟು ಯಾರನ್ನೂ ಪೂಜಿಸಲ್ಲ, ವಂದೇ ಮಾತರಂ ಹಾಡಲ್ಲ: ಕಾಂಗ್ರೆಸ್ ಎಂಪಿ ವಿವಾದ

‘ವಂದೇ ಮಾತರಂ’ ಗೀತೆಯನ್ನು ತಾನು ಗೌರವಿಸುತ್ತೇನೆ, ಆದರೆ ಹಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗಾಯನಕ್ಕೆ ಸಂಬಂಧಿಸಿದ ವಿವಾದದ ಕುರಿತು ಪ್ರತಿಕ್ರಿಯಿಸುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲಾನನ್ನು ಹೊರತುಪಡಿಸಿ ಮತ್ತಾರನ್ನೂ ಪೂಜಿಸಲು ಸಾಧ್ಯವಿಲ್ಲ. ತನ್ನ ಧಾರ್ಮಿಕ ನಂಬಿಕೆಗಳನ್ನು ಪಾಲಿಸುವ ಹಕ್ಕನ್ನು ಸಂವಿಧಾನವೇ ನೀಡಿದ್ದು, ಅದನ್ನು […]
ಜೈಲು ವ್ಯವಸ್ಥೆ ಬದಲಾಗಲ್ಲ ಸಾರ್? ಮಾಜಿ ಖೈದಿ ಹೇಳಿದ್ದೇನು?

ಜೈಲಿನಲ್ಲಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮೊಬೈಲ್ ಬಳಸುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದಕ್ಕೆ ಮುಂಚೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ, ನಟ ದರ್ಶನ್ (Darshan Thoogudeepa) ರಜಾರೋಷವಾಗಿ ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಾ ಕುಳಿತಿರುವ ಚಿತ್ರ ವೈರಲ್ ಆಗಿತ್ತು. ಅದಾದ ಬಳಿಕ ಜೈಲಿನಲ್ಲಿ ಖೈದಿಗಳು ಎಣ್ಣೆ ಪಾರ್ಟಿ ಮಾಡುತ್ತಾ, ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಅದಕ್ಕೆ ಮುಂಚೆ ಭಯೋತ್ಪಾದನಾ ಚಟುವಟಿಕೆಯ ಗುಮಾನಿ ಮೇಲೆ ಬಂಧಿಸಲಾಗಿರುವ ಆರೋಪಿಯ ಬಳಿ ಮೊಬೈಲ್ ಫೋನು […]
POLITICS: ಸಿಜೆಪಿ ಆಯ್ತು..ಈಗ ‘ದಿಮಾಗಿ ನಕ್ಸಲ್’ ಪಾರ್ಟಿ – ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲ್’ (ಬೌದ್ಧಿಕ ನಕ್ಸಲರು) ಎಂಬ ಶಬ್ದಪ್ರಯೋಗ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕ್ರಾಂತಿ ಹಾಗೂ ಚರ್ಚೆಗೆ ಕಾರಣವಾಗಿದೆ. ಸಮಾಜದಲ್ಲಿ ಬಂದೂಕು ಹಿಡಿದು ಹೋರಾಡುವ ಶಸ್ತ್ರಸಜ್ಜಿತ ಮಾವೋವಾದಿಗಳನ್ನು ಸರ್ಕಾರ ಮಟ್ಟಹಾಕಿದ್ದರೂ, ಯುವಜನತೆಯ ಮನಸ್ಸನ್ನು ಕೆಡಿಸುವ ವೈಚಾರಿಕ ನಕ್ಸಲರ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕೆಂದು ಪ್ರಧಾನಿ ಕರೆ ನೀಡಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ಹಾಗೂ ಈ ಹಿಂದೆ ಮೂಡಿಬಂದಿದ್ದ ‘ಕಾಕ್ರೋಚ್ […]
RSS : ಆರ್‌ಎಸ್‌ಎಸ್ ‘ಸಾವಿರ ತಲೆಗಳ ವಿಷ ಸರ್ಪ’ : ಯತೀಂದ್ರ ಸಿದ್ದರಾಮಯ್ಯ

ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಸಮಾಜ ಮತ್ತು ದೇಶದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಾತಿ ವ್ಯವಸ್ಥೆ ನಿರ್ಮೂಲನೆ ಹಾಗೂ ಸಾಮಾಜಿಕ ಸಮಾನತೆಯನ್ನು ಬಯಸುವವರು ಸಂಘಟನೆಯ ಕಾರ್ಯವೈಖರಿ ಮತ್ತು ಅದರ ಸಿದ್ಧಾಂತದ ಕುರಿತು ಪ್ರಶ್ನೆಗಳನ್ನು ಎತ್ತಬೇಕಾಗಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ, ಆರ್‌ಎಸ್‌ಎಸ್ ಅನ್ನು ‘ಸಾವಿರ ತಲೆಗಳ ವಿಷ ಸರ್ಪ’ ಎಂದು ಕರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ […]
CAUVERY DISPUTE : ಕಾವೇರಿ ನೀರು ಹಂಚಿಕೆ ವಿವಾದ : ಕರ್ನಾಟಕಕ್ಕೆ ‘ಸುಪ್ರೀಂ’ ಶಾಕ್

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಿತ ಪರಿಹಾರ ದೊರೆಯಲಿಲ್ಲ. ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನವನ್ನು ಪಾಲಿಸುವಂತೆ ಸೋರ್ವೋಚ್ಚ ನ್ಯಾಯಾಲಯ ಕರ್ನಾಟಕಕ್ಕೆ ಸೂಚಿಸಿದೆ. ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿರುವುದು ಹಾಗೂ ಜಲಾಶಯಗಳಲ್ಲಿ ನೀರಿನ ಲಭ್ಯತೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣದ ನೀರು ಬಿಡುಗಡೆ ಮಾಡುವುದು ಕಷ್ಟಕರವಾಗುತ್ತಿದೆ ಎಂದು ರಾಜ್ಯದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಕರ್ನಾಟಕ […]