☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155
☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155

HD KUMARASWAMY: ಕುಮಾರಸ್ವಾಮಿನೇ ಜೈಲಿಗೆ ಹೋಗ್ತಾರಾ..? – ಪ್ರಿಯಾಂಕ್ ಖರ್ಗೆ ಏನಂದ್ರು..?

Image of HD Kumaraswamy with Priyank Kharge
ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ

ಮುಖ್ಯಾಂಶಗಳು

  • ತಾರಕಕ್ಕೇರಿದ ಹೆಚ್.ಡಿ.ಕೆ - ಪ್ರಿಯಾಂಕ್ ಸಮರ
  • ಕುಮಾರಸ್ವಾಮಿ ಜೈಲಿಗೆ ಹೋಗ್ತಾರಾ..?

ಬೆಂಗಳೂರು: ತಮ್ಮ ಕಾರ್ಯಕರ್ತರನ್ನು ಬಂಧಿಸುವ ಪೊಲೀಸರ ಹೆಸರನ್ನು ಬರೆದಿಟ್ಟುಕೊಳ್ಳಿ, ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ನೀಡಿದ್ದ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬರೆದಿಟ್ಟುಕೊಳ್ಳಲಿ, ಅಷ್ಟರೊಳಗೆ ಅವರೇ ಜೈಲಿಗೆ ಹೋದರೆ ಎಂದು ಅವರು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಈ ಹೇಳಿಕೆಯ ಮೂಲಕ ಕುಮಾರಸ್ವಾಮಿ ಅವರ ಬೆದರಿಕೆ ಧೋರಣೆಯನ್ನು ಖರ್ಗೆ ಪ್ರಶ್ನಿಸಿದ್ದಾರೆ. ಪೊಲೀಸರಿಗೆ ಹೆಸರು ಬರೆದಿಡುವಂತೆ ಹೇಳುವುದು ಕಾನೂನು ವ್ಯವಸ್ಥೆಗೆ ಬೆದರಿಕೆ ಹಾಕಿದಂತಾಗುತ್ತದೆ ಎಂಬ ಅರ್ಥದಲ್ಲಿ ಖರ್ಗೆ ಮಾತನಾಡಿದ್ದಾರೆ.

ತಲೆಮರೆಸಿಕೊಂಡವರು ಯಾರೆಂದು ಕುಮಾರಸ್ವಾಮಿಗೆ ಗೊತ್ತಿದೆ..!

ಇದೇ ವೇಳೆ ಸ್ಟಿಂಗ್ ಕಾರ್ಯಾಚರಣೆಯ ವಿಚಾರದ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಸ್ಟಿಂಗ್ ಕೂಡ ಕಟ್ಟುಕಥೆ ಎಂದು ಹೇಳಿರುವ ಅವರು, ಸಿದ್ದರಾಮಯ್ಯ ಅವರ ಬಳಿಯೂ ಈ ಎಲ್ಲ ಮಾಹಿತಿ ಇದೆ ಎಂದು ತಿಳಿಸಿದ್ದಾರೆ. ಕೆಲವರು ಇನ್ನೂ ತಲೆಮರೆಸಿಕೊಂಡಿದ್ದಾರೆ, ತಲೆಮರೆಸಿಕೊಂಡವರು ಯಾರೆಂದು ಕುಮಾರಸ್ವಾಮಿಗೆ ಗೊತ್ತಿದೆ, ಅವರನ್ನು ಹೊರಗೆ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಅವರೇ, ನಿಮಗೆ ವಿಡಿಯೋ ಪ್ರಕರಣ ಹೊರಬರಬೇಕು ಎಂದರೆ ಮಾಹಿತಿ ಕೊಡಿ, ಸಹಕಾರ ನೀಡಿ ಎಂದಿರುವ ಖರ್ಗೆ, ನಾನು ಗೃಹ ಸಚಿವನಾಗಿ ಪಾರದರ್ಶಕವಾಗಿ ತನಿಖೆ ಮಾಡಿಸುತ್ತಿದ್ದೇನೆ, ನನ್ನ ಇಲಾಖೆ ಬಿಗ್ ಬಾಸ್ ಅಲ್ಲ, 24 ಗಂಟೆ ವಿಡಿಯೋ ಮಾಡುವುದಕ್ಕೆ ಸಾಧ್ಯವಿಲ್ಲ, ಈಗಿರುವ ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಂಬ ಕಾರಣಕ್ಕೆ ಮಾಧ್ಯಮಗಳು ಅವಕಾಶ ಕೊಡುತ್ತವೆ ಎಂದ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುವುದೇ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಸ್ಟಿಂಗ್ ವಿಡಿಯೋ ಕೇಸ್ ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರವಾಗುತ್ತಿರುವುದನ್ನು ತೋರಿಸುತ್ತದೆ. ಪೊಲೀಸ್ ಇಲಾಖೆಯನ್ನು ರಾಜಕೀಯ ಬೆದರಿಕೆಗೆ ಬಳಸುವ ಹೇಳಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ, ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಮಾತುಗಳನ್ನು ಆಡುವುದು ಕಾನೂನಿನ ಆಡಳಿತದ ಬಗ್ಗೆ ಜನರ ನಂಬಿಕೆಯನ್ನು ಕುಗ್ಗಿಸುತ್ತದೆ. ಮತ್ತೊಂದೆಡೆ ಗೃಹ ಸಚಿವರು ಜೈಲು ಉಲ್ಲೇಖ ಮಾಡುವ ಮೂಲಕ ರಾಜಕೀಯ ಪ್ರತಿದಾಳಿಯನ್ನು ವೈಯಕ್ತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂಬ ಟೀಕೆಯೂ ಕೇಳಿಬರಬಹುದು. ಸ್ಟಿಂಗ್ ಮತ್ತು ವಿಡಿಯೋ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕಾದರೆ ಆರೋಪ ಪ್ರತ್ಯಾರೋಪಗಳ ಬದಲು ಪಾರದರ್ಶಕ ತನಿಖೆ ಮತ್ತು ಸಾಕ್ಷ್ಯಾಧಾರಿತ ಕ್ರಮ ಅನಿವಾರ್ಯ. ಎರಡೂ ಕಡೆಯ ನಾಯಕರು ಮಾಧ್ಯಮಗಳ ಮುಂದೆ ವಾಗ್ಯುದ್ಧ ನಡೆಸುವ ಬದಲು ಕಾನೂನಿಗೆ ಸಹಕಾರ ನೀಡಿದರೆ ಮಾತ್ರ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲು ಸಾಧ್ಯ.