☔ Weather
Bengaluru: ☁️ 24°C | AQI 118
Mysore: 🌤️ 25°C | AQI 144
Mangalore: 🌤️ 29°C | AQI 144
Bengaluru: ☁️ 24°C | AQI 118
☔ Weather
Bengaluru: ☁️ 24°C | AQI 118
Mysore: 🌤️ 25°C | AQI 144
Mangalore: 🌤️ 29°C | AQI 144
Bengaluru: ☁️ 24°C | AQI 118

STING : ಸ್ಟಿಂಗ್ ವಿವಾದದಲ್ಲಿ ಸಿದ್ದರಾಮಯ್ಯ ನೇರ ಆರೋಪ, ದೆಹಲಿಗೆ ಅಂಗಳ ತಲುಪಿದ ಪ್ರಕರಣ

Image of Siddaramaiah about Sting
ಸ್ಟಿಂಗ್ ಆಪರೇಷನ್ (Sting) ಪ್ರಕರಣದ ಹಿಂದೆ ಕೃಪಾ ಆಳ್ವಾ ಮತ್ತು ಒಬ್ಬ ಪತ್ರಕರ್ತರ ಪಾತ್ರವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ.

ಮುಖ್ಯಾಂಶಗಳು

  • ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಜಟಾಪಟಿ
  • ರಾಗಾ ಮುಂದೆ ಸಿದ್ದು ಸ್ಟಿಂಗ್ ಸತ್ಯ ..?
  • ಕುತೂಹಲ ಮೂಡಿಸಿದ ದೆಹಲಿ ನಡೆ !

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ (Sting) ಪ್ರಕರಣದ ಹಿಂದೆ ಕೃಪಾ ಆಳ್ವಾ ಮತ್ತು ಒಬ್ಬ ಪತ್ರಕರ್ತರ ಪಾತ್ರವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ತೃಪ್ತಿ ಅಥವಾ ಅತೃಪ್ತಿಯ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದು, ನಾವು ಪಕ್ಷಪಾತವಿಲ್ಲದ ತನಿಖೆಗೆ ಆಗ್ರಹಿಸುತ್ತೇವೆ ಎಂದಿದ್ದಾರೆ.

ಹೈ ನಾಯಕರ ಜೊತೆ ಸಿದ್ದು ಸ್ಟಿಂಗ್ ಪ್ರಸ್ತಾಪ..!

ಇಡೀ ಬೆಳವಣಿಗೆಯ ವಿವರಗಳನ್ನು ಪಕ್ಷದ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಗಮನಕ್ಕೆ ತರಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವಿಷಯವು ಈಗಾಗಲೇ ರಾಹುಲ್ ಗಾಂಧಿ ಅವರನ್ನು ತಲುಪಿದೆ ಎಂದೂ ಅವರು ಹೇಳಿದ್ದಾರೆ. ಹೈಕಮಾಂಡ್ ಕಡೆಯಿಂದ ಭೇಟಿಗೆ ಸಮಯ ದೊರೆತರೆ, ತಾವು ನವದೆಹಲಿಗೆ ತೆರಳಿ ವರಿಷ್ಠ ನಾಯಕರನ್ನು ಭೇಟಿ ಮಾಡಿ ಸಂಪೂರ್ಣ ವಿವರಣೆ ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ವಿವಾದ ಇನ್ನು ರಾಜ್ಯಮಟ್ಟಕ್ಕೆ ಸೀಮಿತವಾಗದೆ ದೆಹಲಿ ಹಂತಕ್ಕೂ ವಿಸ್ತರಣೆಯಾಗಿದೆ.

ಇದನ್ನೂ ಓದಿ : ಮಾಜಿ ಸಿಎಂ ಸಿದ್ದು ಸ್ಟಿಂಗ್ ಪ್ರಕರಣ – ಸಾಕ್ಷ್ಯವಿಲ್ಲದೆ ಕಗ್ಗಂಟಾದ ತನಿಖೆ

ಈ ಪ್ರಕರಣ ಈಗ ಮಾಜಿ ಮುಖ್ಯಮಂತ್ರಿಯೊಬ್ಬರು ಹೆಸರು ಹೇಳಿ ಆರೋಪ ಮಾಡಿರುವುದು ಮತ್ತು ಹೈಕಮಾಂಡ್ ಮಧ್ಯಪ್ರವೇಶವನ್ನು ಬಯಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪೊಲೀಸ್ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಇಲ್ಲದಿದ್ದರೆ ಇದು ರಾಜಕೀಯ ಲಾಭಕ್ಕಾಗಿ ಬಳಸುವ ಅಸ್ತ್ರವಾಗಿ ಉಳಿಯುವ ಅಪಾಯವಿದೆ. ದೆಹಲಿ ನಾಯಕರ ಭೇಟಿಯ ನಂತರ ಕಾಂಗ್ರೆಸ್ ಒಳಗೆ ಏನು ನಿರ್ಧಾರವಾಗುತ್ತದೆ ಎಂಬುದರ ಮೇಲೆ ಮುಂದಿನ ರಾಜಕೀಯ ದಿಕ್ಕು ನಿರ್ಧಾರವಾಗಲಿದೆ.