☔ Weather
Bengaluru: 🌤️ 22°C | AQI 90
Mysore: ☀️ 22°C | AQI 109
Mangalore: 🌤️ 27°C | AQI 140
Bengaluru: 🌤️ 22°C | AQI 90
☔ Weather
Bengaluru: 🌤️ 22°C | AQI 90
Mysore: ☀️ 22°C | AQI 109
Mangalore: 🌤️ 27°C | AQI 140
Bengaluru: 🌤️ 22°C | AQI 90

BJP : ಬ್ಲ್ಯಾಕ್‌ಮೇಲ್ ರಾಜಕೀಯಕ್ಕೆ ಅವರೇ ಜನಕ – ರೇಣುಕಾಚಾರ್ಯ ವಿರುದ್ಧ ಬಿಪಿ ಹರೀಶ್ ಸಿಡಿ ಬಾಂಬ್

Image of CD fight in BJP
ಬಿಜೆಪಿಯ (BJP) ಆಂತರಿಕ ಕಚ್ಚಾಟ ಮತ್ತೆ ಬೀದಿಗೆ ಬಂದಿದೆ. ಶಾಸಕ ಬಿ.ಪಿ. ಹರೀಶ್ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮುಖ್ಯಾಂಶಗಳು

  • ಬಿಜೆಪಿಯಲ್ಲೂ ಜೋರಾಯ್ತು ಸಿಡಿ ಸಮರ
  • ರೇಣುಕಾಚಾರ್ಯ ಸಿಡಿ ಜನಕ
  • ಬಿಪಿ ಹರೀಶ್ ಆರೋಪಗಳೇನು..?
ದಾವಣಗೆರೆ : ಬಿಜೆಪಿಯ (BJP) ಆಂತರಿಕ ಕಚ್ಚಾಟ ಮತ್ತೆ ಬೀದಿಗೆ ಬಂದಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ವಿರುದ್ಧ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾಯಕರ ಬಳಿ ಸಿಡಿ ಇದೆ ಎಂದು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುವ ರಾಜಕೀಯವನ್ನು ರಾಜ್ಯದಲ್ಲಿ ಮೊದಲು ಆರಂಭಿಸಿದವರೇ ರೇಣುಕಾಚಾರ್ಯ ಎಂದು ಹರೀಶ್ ನೇರವಾಗಿ ದೂರಿದ್ದಾರೆ. ಈ ರೀತಿಯ ಬೆದರಿಕೆಯ ಮೂಲಕವೇ ಅವರು ಸಚಿವ ಸ್ಥಾನ ಪಡೆದುಕೊಂಡಿದ್ದರು ಎಂಬುದು ಅವರ ಆರೋಪವಾಗಿದೆ. 2008ರ ಘಟನೆ ನೆನಪಿಸಿದ ಶಾಸಕ ..! ತಮ್ಮ ಹಳೆಯ ಸಂಬಂಧವನ್ನು ನೆನಪಿಸಿದ ಹರೀಶ್, 2008ರಲ್ಲಿ ರೇಣುಕಾಚಾರ್ಯ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವಲ್ಲಿ ತಮ್ಮದೇ ಪಾತ್ರ ದೊಡ್ಡದಿತ್ತು ಎಂದು ಹೇಳಿದ್ದಾರೆ. ಆಗ ಸ್ನೇಹಿತರು ಎಚ್ಚರಿಕೆ ನೀಡಿದ್ದರೂ ತಾವು ಅದನ್ನು ಕೇಳದೆ ಅವರ ಪರವಾಗಿ ನಿಂತಿದ್ದೆ ಎಂದಿದ್ದಾರೆ. 2008ರ ಚುನಾವಣೆಯ ಸಂದರ್ಭದಲ್ಲಿ ರೇಣುಕಾಚಾರ್ಯ ತಮಗೆ ಹಣ ನೀಡಿರಲಿಲ್ಲ ಎಂದೂ ಸ್ಪಷ್ಟಪಡಿಸಿದ ಅವರು, ಇತರರು ಹಣ ಕೊಡಲು ಮುಂದಾದರೂ ಅದನ್ನು ಪಡೆಯುವ ಸ್ವಭಾವ ತಮ್ಮದಲ್ಲ ಎಂದು ಹೇಳಿದ್ದಾರೆ. ತಮ್ಮ ಎಲ್ಲ ಆಸ್ತಿ ಮತ್ತು ಹಣಕಾಸು ವ್ಯವಹಾರಗಳನ್ನು ಚೆಕ್ ಮೂಲಕವೇ ಮಾಡಿದ್ದು, ಯಾವುದೇ ತನಿಖೆ ನಡೆದರೂ ಅಕ್ರಮ ಸಿಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ತಂದೆಯ ಸಮಾನ ಎಂದು ಹೇಳುವ ರೇಣುಕಾಚಾರ್ಯ ಅವರು ಈ ಹಿಂದೆ ಅಪ್ಪ-ಮಕ್ಕಳ ವಿಚಾರ ಬಹಿರಂಗಪಡಿಸುವುದಾಗಿ ಹೇಳಿದ್ದರು ಎಂದು ಉಲ್ಲೇಖಿಸಿದ ಹರೀಶ್, ಈ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಹಿತಿ ಇರಬಹುದು ಎಂದಿದ್ದಾರೆ. ಇದನ್ನೂ ಓದಿ : ಪರಿಷತ್‌ನ 4 ಸ್ಥಾನಗಳಿಗೆ ಇಂದು ಫಲಿತಾಂಶದ ದಿನ – ಮತ ಎಣಿಕೆಗೆ ಕ್ಷಣಗಣನೆ ಬಿಜೆಪಿಯೊಳಗೆ ಸಿಡಿ, ಸ್ಟಿಂಗ್ ಆಪರೇಷನ್ ಮತ್ತು ಬ್ಲ್ಯಾಕ್‌ಮೇಲ್ ಸಂಸ್ಕೃತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಇದು ತೋರಿಸುತ್ತಿದೆ. ಇಂತಹ ಪ್ರವೃತ್ತಿಯ ನಾಯಕರಿಂದ ಪಕ್ಷಕ್ಕೆ ಏನು ಲಾಭ ಎಂದು ಪ್ರಶ್ನಿಸಿರುವ ಹರೀಶ್, ರೇಣುಕಾಚಾರ್ಯ ಅವರ ರಾಜಕೀಯ ದಿನಗಳು ಮುಗಿಯುತ್ತಿವೆ ಎಂದು ಟೀಕಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳು ಹೆಚ್ಚಾದಷ್ಟೂ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ. ಆದ್ದರಿಂದ ಆರೋಪಗಳ ಹಿಂದಿನ ಸತ್ಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ, ಇಂತಹ ರಾಜಕೀಯಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಈ ಕಚ್ಚಾಟ ಪಕ್ಷದ ಶಿಸ್ತು ಮತ್ತು ನಾಯಕತ್ವದ ಮೇಲಿನ ನಂಬಿಕೆಯನ್ನು ಮತ್ತಷ್ಟು ಕುಗ್ಗಿಸಲಿದೆ.