☔ Weather
Bengaluru: 🌤️ 24°C | AQI 156
Mysore: ☀️ 22°C | AQI 122
Mangalore: ☀️ 26°C | AQI 144
Bengaluru: 🌤️ 24°C | AQI 156
☔ Weather
Bengaluru: 🌤️ 24°C | AQI 156
Mysore: ☀️ 22°C | AQI 122
Mangalore: ☀️ 26°C | AQI 144
Bengaluru: 🌤️ 24°C | AQI 156

BY-ELECTION: ಹಿರಿಯೂರಿನಲ್ಲಿ ಟಿಕೆಟ್ ಜಟಾಪಟಿಗೆ ಬ್ರೇಕ್, ಎನ್‌ಡಿಎ ಅಭ್ಯರ್ಥಿ ಸೂತ್ರಕ್ಕೆ ಶಾ ಪ್ಲಾನ್

Image of Amit Shah about By-election
ಹಿರಿಯೂರು ಉಪಚುನಾವಣೆಯಲ್ಲಿ (By-election) ಆಡಳಿತಾರೂಢ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಸ ತಂತ್ರ

ಮುಖ್ಯಾಂಶಗಳು

  • ಹಿರಿಯೂರು ಕಿತ್ತಾಟಕ್ಕೆ ಹೊಸ ಪ್ಲಾನ್
  • ನಯಾ ತಂತ್ರ ಹೆಣೆದ ಅಮಿತ್ ಶಾ

ನವದೆಹಲಿ: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By-election) ಆಡಳಿತಾರೂಢ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಸ ತಂತ್ರವನ್ನು ಸಿದ್ಧಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಒಂದೆಡೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತೊಂದೆಡೆ ಬಿರುಸಿನ ಸಿದ್ಧತೆ ನಡೆಸುತ್ತಿರುವಾಗಲೇ ಮೈತ್ರಿ ಪಕ್ಷಗಳ ಒಳಗೆ ಟಿಕೆಟ್ ಕುರಿತು ತಿಕ್ಕಾಟ ಶುರುವಾಗಿತ್ತು. ಬಿಜೆಪಿ ನಾಯಕರಲ್ಲಿ ಯಾರು ಅಭ್ಯರ್ಥಿ ಎಂಬ ಗೊಂದಲವಿದ್ದರೆ, ಜೆಡಿಎಸ್ ವಲಯದಲ್ಲಿ ತಳಮಳ ಹೆಚ್ಚಾಗಿತ್ತು. ಈ ಬೆಳವಣಿಗೆಯ ನಡುವೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶಾ ಅವರನ್ನು ಭೇಟಿಯಾಗಿ ಅಭ್ಯರ್ಥಿ ಆಯ್ಕೆ ಮತ್ತು ಟಿಕೆಟ್ ಹಂಚಿಕೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿವರಿಸಿದ್ದಾರೆ. ಇಬ್ಬರ ಮಾತುಗಳನ್ನು ಗಮನವಿಟ್ಟು ಆಲಿಸಿದ ಶಾ ಅವರು ಕೊನೆಗೆ ತಮ್ಮದೇ ಆದ ಜಾಣ ನಡೆಯನ್ನು ತಿಳಿಸಿದ್ದಾರೆ. ಟಿಕೆಟ್ ಯಾರ ಪಾಲಾಗುತ್ತದೆ ಎಂಬ ಕುತೂಹಲ ಈಗ ಎರಡೂ ಪಕ್ಷಗಳಲ್ಲಿ ಹೆಚ್ಚಾಗಿದೆ.

ಟಿಕೆಟ್ ಯಾರಿಗೆ ನೀಡಬೇಕು ನಾವೇ ನಿರ್ಧರಿಸುತ್ತೇವೆ..!

ಹಿರಿಯೂರು ಚುನಾವಣೆ ಕರ್ನಾಟಕದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಇದನ್ನು ವಿಧಾನಪರಿಷತ್ ಚುನಾವಣೆಯ ಮಾದರಿಯಲ್ಲಿ ನಡೆಸಬೇಕು ಎಂಬುದು ಶಾ ಅವರ ನಿಲುವಾಗಿದೆ. ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ, ಸ್ಥಳೀಯ ನಾಯಕರು ಮತ್ತು ಮತದಾರರ ಅಭಿಪ್ರಾಯವನ್ನು ನಮ್ಮದೇ ಮೂಲಗಳಿಂದ ಪಡೆಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪಡೆದು, ಪ್ರತಿಯೊಬ್ಬರ ಸಾಧಕ-ಬಾಧಕ, ಶಕ್ತಿ ಮತ್ತು ಸಾಮರ್ಥ್ಯವನ್ನು ಪರಿಶೀಲಿಸಲಾಗುವುದು. ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು, ಅದರ ಚುನಾವಣಾ ತಂತ್ರಗಾರಿಕೆ ಹೇಗಿರುತ್ತದೆ ಎಂಬ ಮಾಹಿತಿಯನ್ನೂ ಕಲೆಹಾಕಲಾಗುವುದು. ನಿಮ್ಮ ಅಭಿಪ್ರಾಯ ಪಡೆದರೂ ಅಂತಿಮ ನಿರ್ಧಾರ ನಮ್ಮದೇ ಎಂದು ಶಾ ಹೇಳಿದ್ದಾರೆ. ಅಭ್ಯರ್ಥಿಯನ್ನು ಬಿಜೆಪಿ ಅಥವಾ ಜೆಡಿಎಸ್‌ನವರು ಎಂದು ಕರೆಯದೆ ಎನ್‌ಡಿಎ ಅಭ್ಯರ್ಥಿ ಎಂದು ಘೋಷಿಸಲಾಗುವುದು. ನಿರ್ಧಾರವಾದ ಅಭ್ಯರ್ಥಿಗೆ ಎರಡೂ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು, ನಮ್ಮ ತೀರ್ಮಾನಕ್ಕೆ ಇಬ್ಬರೂ ಒಪ್ಪಬೇಕು ಎಂದು ಅವರು ಸೂಚಿಸಿದ್ದಾರೆ.

ಇದನ್ನೂ ಓದಿ : ಸಿಎಂ ಔತಣಕೂಟದಲ್ಲಿ ಬಿಜೆಪಿ ಶಾಸಕರು, ಬಿವೈ ವಿಜಯೇಂದ್ರ ಗರಂ

ಈ ಸೂತ್ರದ ಹಿಂದೆ ಮೈತ್ರಿಯೊಳಗಿನ ಬಿರುಕನ್ನು ಮೊದಲೇ ಮುಚ್ಚುವ ಲೆಕ್ಕಾಚಾರವಿದೆ. ಟಿಕೆಟ್‌ಗಾಗಿ ನಡೆಯುತ್ತಿದ್ದ ಬಹಿರಂಗ ಜಟಾಪಟಿಯನ್ನು ತಡೆದು, ನಿರ್ಧಾರದ ಹೊಣೆಯನ್ನು ಸಂಪೂರ್ಣವಾಗಿ ಹೈಕಮಾಂಡ್‌ಗೆ ವರ್ಗಾಯಿಸುವ ಮೂಲಕ ಸ್ಥಳೀಯ ಬಣ ರಾಜಕೀಯಕ್ಕೆ ಕಡಿವಾಣ ಹಾಕಲಾಗಿದೆ. ಇದರಿಂದ ಕಾಂಗ್ರೆಸ್ ವಿರುದ್ಧ ಒಂದೇ ಧ್ವನಿಯಲ್ಲಿ, ಒಂದೇ ಸಂದೇಶದೊಂದಿಗೆ ಹೋರಾಟ ನಡೆಸಲು ಅನುಕೂಲವಾಗುತ್ತದೆ. ಜೊತೆಗೆ ಗೆಲುವಿನ ಸಾಧ್ಯತೆ ಇರುವ ಅಭ್ಯರ್ಥಿಯನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡುವ ಅವಕಾಶವೂ ಸಿಗುತ್ತದೆ. ಆದರೆ ಸಮೀಕ್ಷೆ ಮತ್ತು ಕೇಂದ್ರದ ಲೆಕ್ಕಾಚಾರ ಸ್ಥಳೀಯ ನೆಲದ ವಾಸ್ತವಕ್ಕೆ ಹೊಂದಿಕೆಯಾಗದಿದ್ದರೆ, ಟಿಕೆಟ್ ವಂಚಿತ ಬಣದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಅಪಾಯವಿದೆ. ಹೀಗಾಗಿ ಹಿರಿಯೂರು ಕೇವಲ ಉಪಚುನಾವಣೆಯಾಗಿ ಉಳಿಯದೆ, ಮುಂದಿನ ದೊಡ್ಡ ಚುನಾವಣೆಗಳಲ್ಲಿ ಎನ್‌ಡಿಎ ಒಗ್ಗಟ್ಟು ಹೇಗಿರುತ್ತದೆ ಎಂಬುದಕ್ಕೆ ನಿರ್ಣಾಯಕ ಪರೀಕ್ಷೆಯಾಗಲಿದೆ.