ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ವಿರೋಧ ಪಕ್ಷವಾದ ಬಿಜೆಪಿಯ ಕೆಲವು ಶಾಸಕರು ಅಡ್ಡಮತದಾನ ಮಾಡಿರುವುದು ಪಕ್ಷದ ವಲಯದಲ್ಲಿ ತೀವ್ರ ಮುಜುಗರ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆದವರ ಯಾರೆಂಬ ಸತ್ಯವನ್ನು ಹೊರತರಲು ಮತ್ತು ಶಾಸಕರಲ್ಲಿ ತಲೆದೋರಿರುವ ಅಪನಂಬಿಕೆಯನ್ನು ನಿವಾರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ನಿಯಮ ಉಲ್ಲಂಘಿಸಿದವರನ್ನು ಪತ್ತೆಹಚ್ಚಲು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಲು ಮುಂದಾಗಿದ್ದರು . ಆದ್ರೆ ಪಕ್ಷದ ಹಿರಿಯ ನಾಯಕರು ಮತ್ತು ಹೈಕಮ್ಯಾಂಡ್ ಅಣತಿಯ ಮೇರೆಗೆ ಈ ನಿರ್ಧಾರವನ್ನು ಕೈಬಿಟ್ಟಿದ್ದಾರೆ.
ಆದ್ರೆ ದೆಹಲಿಯಿಂದ ಹೊರಟವರು ನೇರವಾಗಿ ಮಂಗಳೂರಿಗೆ ಬಂದು ಆ ಬಳಿಕ ಧರ್ಮಸ್ಥಳಕ್ಕೆ ತೆರಳಿ ಏಕಾಂಗಿಯಾಗಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಆಯೋಜಿಸಲು ಗಂಭೀರ ನಿರ್ಧಾರ ಕೈಗೊಂಡಿದ್ದಾರೆ.
ಧರ್ಮಸ್ಥಳ ಸತ್ಯ ಮತ್ತು ಧರ್ಮದ ತೀರ್ಪಿಗೆ ಹೆಸರಾದ ಪವಿತ್ರ ಕ್ಷೇತ್ರವಾಗಿದ್ದು, ಅಲ್ಲಿ ಸುಳ್ಳು ನುಡಿದರೆ ದೈವದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ವಿಜಯೇಂದ್ರ ಎಲ್ಲಾ ೬೩ ಶಾಸಕರನ್ನು ಕ್ಷೇತ್ರಕ್ಕೆ ಕರೆದೊಯ್ಯಲು ಮುಂದಾಗಿದ್ದರು. ಅಲ್ಲಿ ನಡೆಯುವ ಸಭೆಯಲ್ಲಿ ಶಾಸಕರು ತಾವು ಪಕ್ಷದ ಪರವಾಗಿಯೇ ಮತ ಚಲಾಯಿಸಿದ್ದೇವೆ ಎಂದು ದೇವರ ಎದುರು ಪರೋಕ್ಷವಾಗಿ ಸತ್ಯದ ಪ್ರಮಾಣ ಮಾಡುವಂತೆ ಯೋಚಿಸಲಾಗಿತ್ತು. ಆದ್ರೆ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಿದೆ.
ಇನ್ನು ಸೋಷಿಯಲ್ ಮೀಡಿಯಾ ಹಾಗೂ ಪಕ್ಷದ ಆಂತರಿಕ ವಲಯದಲ್ಲಿ ಒಟ್ಟು ನಾಲ್ಕು ಶಾಸಕರು ಕೈ ಪಾಳಯಕ್ಕೆ ವೋಟು ಹಾಕಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿರುವುದರಿಂದ ಪ್ರಾಮಾಣಿಕ ಶಾಸಕರಿಗೂ ಈ ಬೆಳವಣಿಗೆ ಮುಜುಗರ ತಂದಿತ್ತು. ಆದ್ರೆ ವಿಜಯೇಂದ್ರ ಅವರ ಈ ‘ದೈವ ಪರೀಕ್ಷೆ’ಯ ತಂತ್ರಕ್ಕೆ ಫಲ ಸಿಕ್ಕಿಲ್ಲ.ಆದ್ರೆ ಈ ಅಡ್ಡಮತದಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತು ಪಕ್ಷ ನಿಷ್ಠೆಯನ್ನು ಸಾಬೀತುಪಡಿಸಲು ತಾವು ಸಿದ್ಧರಿದ್ದೇವೆ ಎಂಬುದನ್ನು ಹೈಕಮಾಂಡ್‌ಗೆ ತೋರಿಸಲು ಅವರು ಧರ್ಮಸ್ಥಳದ ಮೊರೆ ಹೋಗಿದ್ದಾರೆ. ರಾಜಕೀಯ ಸಿದ್ಧಾಂತಗಳಿಗಿಂತ ಹೆಚ್ಚಾಗಿ ಧಾರ್ಮಿಕ ನಂಬಿಕೆಗಳನ್ನು ಶಾಸಕರ ನಿಷ್ಠೆ ಅಳೆಯಲು ಬಳಸುತ್ತಿರುವುದು ಅವರ ನಡೆಗೆ ಹೈಕಮಾಂಡ್ ಮಣೆ ಹಾಕಿಲ್ಲ.
ಕೆಲ ದಿನಗಳ ಹಿಂದೆ ಪಕ್ಷದ ಹಿರಿಯ ನಾಯಕರಾದ ಸುರೇಶ್ ಕುಮಾರ್, ಪ್ರಲ್ಹಾದ್ ಜೋಶಿ ಮುಂತಾದವರು ರಾಜಕೀಯ ನಿರ್ಧಾರಗಳಿಗೆ ಮತ್ತು ಶಾಸಕರ ನಿಷ್ಠೆಯ ಪರೀಕ್ಷೆಗೆ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಎಳೆತರುವುದು ತಪ್ಪು ಮಾದರಿಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆಯಾಗಿದ್ದರೂ ವಿಜಯೇಂದ್ರ ಅವರು ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಅವರ ಮೇಲಿರುವ ಆಂತರಿಕ ರಾಜಕೀಯ ಒತ್ತಡವನ್ನು ಬಿಂಬಿಸುತ್ತದೆ ಮತ್ತು ಪಕ್ಷದ ಶಿಸ್ತು ಕಾಪಾಡಲು ಧರ್ಮಸ್ಥಳ ಆಣೆ ಪ್ರಮಾಣ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಕೂಡ ವಿಜಯೇಂದ್ರಗೆ ಮುಜುಗರ ತಂದಿತ್ತು.



